CHITRAUDRGA NEWS | 17 APRIL 2026
ಚಿತ್ರದುರ್ಗ: ಬಾಮೈದನನ್ನೇ ಕೊಲೆ ಮಾಡಿದ್ದ ಆರೋಪಿಗಳಾದ ಅಕ್ಕ ಹಾಗೂ ಆಕೆಯ ಗಂಡನಿಗೆ(ಭಾವ) ಜೀವಾವಧಿ ಶಿಕ್ಷೆ ವಿಧಿಸಿ ಚಿತ್ರದುರ್ಗ ನ್ಯಾಯಾಲಯ ತೀರ್ಪು ನೀಡಿದೆ.

2023 ಜನವರಿ 14 ರಂದು ಹೊಳಲ್ಕೆರೆ ತಾಲೂಕು ಶಿವಗಂಗಾ ಗ್ರಾಮದಲ್ಲಿ ಬಸವರಾಜ ಎಂಬುವವರನ್ನು ಆತನ ಅಕ್ಕ ರಾಧಮ್ಮ ಹಾಗೂ ಭಾವ ತಿಮ್ಮರಾಜು ಸೇರಿ ಕೊಲೆ ಮಾಡಿದ್ದರು.
ಇದನ್ನೂ ಓದಿ: ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷರಾಗಿ ರಘುರಾಮರೆಡ್ಡಿ ಅವಿರೋಧ ಆಯ್ಕೆ
ಪ್ರಕರಣದ ವಿವರ: ಹಿರಿಯೂರು ತಾಲೂಕು ಪಿಲಾಲಿ ಗ್ರಾಮದ ತಿಮ್ಮರಾಜು ಹಾಗೂ ಪತ್ನಿ ರಾಧಮ್ಮ ತಮ್ಮ ಬಾಮೈದ ಬಸವರಾಜು ಬಳಿ 40 ಸಾವಿರ ಸಾಲ ತೆಗೆದುಕೊಂಡಿರುತ್ತಾರೆ.
ಕೋವಿಡ್ ಸಂದರ್ಭದಲ್ಲಿ ಬಸವರಾಜು ಪತ್ನಿ ಚೊಚ್ಚಲ ಹೆರಿಗೆಗಾಗಿ ತವರಿಗೆ ಹೋಗಿದ್ದಾಗ ತನಗೆ ಅಡುಗೆ ಮಾಡಲು ಹಾಗೂ ಮನೆ ನೋಡಿಕೊಳ್ಳುವ ಉದ್ದೇಶಕ್ಕೆ ಅಕ್ಕ ರಾಧಾ ಹಾಗೂ ಆಕೆಯ ಮಕ್ಕಳನ್ನು ಶಿವಗಂಗಾ ಗ್ರಾಮಕ್ಕೆ ಕರೆಯಿಸಿಕೊಂಡಿರುತ್ತಾರೆ.
ಆದರೆ, ರಾಧಾ ಹಾಗೂ ಆಕೆಯ ಮಕ್ಕಳು ವಾಪಾಸು ಊರಿಗೆ ಹೋಗುವ ಮಾತು ಬಂದಾಗ ತನ್ನ ಸಾಲ ವಾಪಾಸು ಮಾಡಬೇಕು ಎಂದು ಬಸವರಾಜ್ ಪಟ್ಟು ಹಿಡಿದಿದ್ದಾನೆ.
ಈ ವಿಚಾರದಲ್ಲಿ ಜಗಳ ನಡೆದು, ತಿಮ್ಮರಾಜು ಹಾಗೂ ರಾಧಾ ಕೊಲೆ ಮಾಡಲು ನಿರ್ಧರಿಸಿ ಮಚ್ಚಿನಿಂದ ಹಲ್ಲೆ ನಡೆಸಿ ಸಾಕ್ಷ್ಯಗಳು ಸಿಗದಂತೆ ಸುಟ್ಟು ಹಾಕಿದ್ದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ.
ಸದರಿ ಪ್ರಕರಣ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಹೊಳಲ್ಕೆರೆ ಸಿಪಿಐ ರವೀಶ್ ಕೆ.ಎನ್. ಪ್ರಕರಣದ ತನಿಖೆ ನಡೆಸಿದ್ದರು. ಆನಂತರ ಸಿಪಿಐ ದೀಪಕ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 16 | ಹತ್ತಿ ರೇಟ್ ಎಷ್ಟಿದೆ?
ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ರ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ್ ಅವರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ತಲಾ ೫೦ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಅಭಿಯೋಜಕರಾದ ಶಂಶೀರ್ ಅಲಿಖಾನ್ ವಾದ ಮಂಡಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
