
CHITRADURGA NEWS | 10 JANUARY 2024
ಚಿತ್ರದುರ್ಗ (CHITRADURGA): ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆ ಅರ್ಪಾಟ್‌ಮೆಂಟ್‌ನಲ್ಲಿ ತಾಯಿಯಿಂದಲೇ ಹತ್ಯೆಯಾದ ಮಗು ಚಿನ್ಮಯ್ (4) ಅಂತ್ಯ ಸಂಸ್ಕಾರ ಬೆಂಗಳೂರಿನ ಹರಿಶ್ಚಂದ್ರಘಾಟ್‌ನಲ್ಲಿ ಬುಧವಾರ ನೆರವೇರಿತು.
ಇದನ್ನೂ ಓದಿ: ನನ್ನ ಮಗುವನ್ನು ಕೊಂದಿದ್ದು ನಾನೇ…| ನಿರ್ಭಾವುಕಳಾಗಿ ಹೇಳಿದ ಹಂತಕಿ ಸುಚನಾ ಸೇಠ್
ಯಶವಂತಪುರದ ಬಳಿಯ ಬ್ರಿಗೇಡ್ ಗೇಟ್‌ವೇ ರೆಸಿಡೆನ್ಸಿಯ ಫ್ಲ್ಯಾಟ್‌ನಲ್ಲಿ ಮಂಗಳವಾರ ರಾತ್ರಿ 1.45 ರಿಂದ ಕುಟುಂಬಸ್ಥರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಬೆಳಿಗ್ಗೆ ಆಂಬ್ಯುಲೆನ್ಸ್ ಮೂಲಕ ಹರಿಶ್ಚಂದ್ರ ಘಾಟ್‌ಗೆ ಮಗು ಮೃತದೇಹ ತರಲಾಯಿತು.
ಇದನ್ನೂ ಓದಿ: ಅಮ್ಮ…ಅಪ್ಪನ ಜತೆ ಮಾತನಾಡಿದ್ದೇ ತಪ್ಪಾಯಿತೇ..? | ದಿಂಬು ಬಳಸಿ ಉಸಿರು ನಿಲ್ಲಿಸಿರುವ ಶಂಕೆ
ಆಂಬ್ಯುಲೆನ್ಸ್‌ನಿಂದ ಮಗುವಿನ ಮೃತದೇಹ ಎತ್ತಿಕೊಂಡ ತಂದೆ ವೆಂಕಟರಮಣ ಮಗುವನ್ನು ತಬ್ಬಿ, ಮುದ್ದಾಡಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರು. ಬಳಿಕ ಕಣ್ಣೀರು ಹಾಕುತ್ತಾ ಹರಿಶ್ಚಂದ್ರ ಘಾಟ್‌ನಲ್ಲಿ ಮಗನನ್ನು ತಂದು ಅಂತಿಮ ವಿಧಿ ವಿಧಾನ ನೆರವೇರಿಸಿ ಅಂತ್ಯಕ್ರಿಯೆಯನ್ನು ನೆರವೇರಿಸಿದರು.
ಇದನ್ನೂ ಓದಿ: ಹತ್ಯೆ ಮಾಡಿದ ತಾಯಿ ಪೊಲೀಸ್ ಕಸ್ಟಡಿಗೆ | ಮೃತ ಮಗು ಅಪ್ಪನ ಮಡಿಲಿಗೆ
ಬ್ರಿಗೇಡ್ ಗೇಟ್‌ವೇ ರೆಸಿಡೆನ್ಸಿಯ ಫ್ಲ್ಯಾಟ್‌ಗೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಮೃತ ಬಾಲಕನ ತಂದೆ ವೆಂಕಟರಮಣ ಮಂಗಳವಾರ ರಾತ್ರಿ ಇಂಡೊನೇಷ್ಯಾದಿಂದ ಹಿರಿಯೂರಿಗೆ ಬಂದಿದ್ದರು. ತಾಲ್ಲೂಕು ಆಸ್ಪತ್ರೆಯ ಶವಾಗಾರಕ್ಕೆ ತೆರಳಿ ಪುತ್ರನ ಮೃತದೇಹ ಕಂಡು ಭಾವುಕರಾಗಿ ಮೌನಕ್ಕೆ ಜಾರಿದ್ದರು.
ಇದನ್ನೂ ಓದಿ: ಹೆತ್ತ ಕಂದನ ಕೊಂದು ನಿರ್ಭಾವುಕಳಾಗಿ ಕಾರು ಹತ್ತಿದ ತಾಯಿ | ಮಗನ ಶವದೊಂದಿಗೆ 395 ಕಿ.ಮೀ ಸಾಗಿದ ನಂತರ ಅರೆಸ್ಟ್
ಈ ವೇಳೆ ಐಮಂಗಲ ಠಾಣೆ ಹಾಗೂ ಗೋವಾ ಪೊಲೀಸರ ಸಮ್ಮುಖದಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದರು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಾಲಕನ ಮೃತದೇಹವನ್ನು ವೆಂಕಟರಮಣ್‌ಗೆ ಹಸ್ತಾಂತರಿಸಲಾಗಿತ್ತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
