CHITRADURGA NEWS | 9 JANUARY 2024
ಚಿತ್ರದುರ್ಗ: ಹೆತ್ತ ಕಂದನ ಕೊಂದ ಆರೋಪದಲ್ಲಿ ತಾಯಿ 6 ದಿನ ಪೊಲೀಸ್ ಕಸ್ಟಡಿಗೆ ಹೋದರೆ, ಇತ್ತ ಒಂದೀಡಿ ದಿನ ಅನಾಥವಾಗಿ ಶವಾಗಾರದಲ್ಲಿ ಮಲಗಿದ್ದ ಮಗುವಿನ ಮೃತ ದೇಹ ತಂದೆಯ ಪಾಲಾಗಿದೆ.
ಯಾವ ತಂದೆ ತಾಯಿಗೂ ಇಂಥಹ ಪರಿಸ್ಥಿತಿ ಬರಬಾರದು ಎನ್ನುವಂತಹ ಧಾರುಣ ಘಟನೆ ಇಂದು ಕರ್ನಾಟಕ ಹಾಗೂ ಗೋವಾ ಎರಡು ರಾಜ್ಯಗಳ ಜನರನ್ನು ತೀವ್ರವಾಗಿ ಕಾಡಿತು.
ಪತಿ ವೆಂಕಟರಮಣ ಜೊತೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಸುಚನಾ ಸೇಠ್, ಅದ್ಯಾವ ಕ್ಷಣದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡರೋ ಮಗುವನ್ನು ಹತ್ಯೆ ಮಾಡಿದ್ದಾರೆ.
ದೂರದ ಇಂಡೋನೇಷ್ಯಾದಲ್ಲಿದ್ದ ವೆಂಕಟರಮಣ ಮೃತ ಮಗುವಿನ ಮುಖ ನೋಡಲು ಓಡೋಡಿ ಬಂದರು. ಇದಿಷ್ಟೂ ಇಂದು ಕರ್ನಾಟಕ ಹಾಗೂ ಗೋವಾದಲ್ಲಿ ನಡೆದ ಕರುಳು ಹಿಂಡುವ ಸನ್ನಿವೇಶಗಳಾಗಿದ್ದವು.
ಇದನ್ನೂ ಓದಿ: ಹೆತ್ತ ಕಂದನ ಕೊಂದು ನಿರ್ಭಾವುಕಳಾಗಿ ಕಾರು ಹತ್ತಿದ ತಾಯಿ
ಸೋಮವಾರ ಸಂಜೆ ಐಮಂಗಲ ಪೊಲೀಸ್ ಠಾಣೆಯಲ್ಲಿ ಬಂಧನಕ್ಕೊಳಗಾದ ಸುಚನಾ ಸೇಠ್ ಅವರನ್ನು ತಡರಾತ್ರಿಯೇ ಗೋವಾ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದು ನ್ಯಾಯಾಲಯದ ಎದುರು ಹಾಜರುಪಡಿಸಿದರು.
ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸ್ ತನಿಖೆಗಾಗಿ ಅವರ ಮನವಿಯ ಮೇರೆಗೆ 6 ದಿನಗಳ ಕಾಲ ಸುಚನಾ ಅವರನ್ನು ಕಸ್ಟಡಿಗೆ ನೀಡಿದೆ.
ಇತ್ತ ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಾಥವಾಗಿದ್ದ ಅವರ ಮಗುವಿನ ಮರಣೋತ್ತರ ಪರೀಕ್ಷೆ ಸಂಜೆ 8 ಗಂಟೆ ವೇಳೆಗೆ ನಡೆಯಿತು. ತಂದೆಯ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹಾಗೂ ಪೊಲೀಸರು ನಂತರ ಹಸ್ತಾಂತರ ಮಾಡಿದ್ದಾರೆ.
ಗೋವಾದ ಕ್ಯಾಲಂಗುಟ್ ಪೊಲೀಸರು ಮಾಹಿತಿ ಮೇರೆಗೆ ಭಾರತೀಯ ದಂಡ ಸಂಹಿತೆ ಮತ್ತು ಗೋವಾ ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 302 ಮತ್ತು 201 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸುಚನಾ ಪಶ್ಚಿಮ ಬಂಗಾಳದವರಾಗಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಆಕೆಯ ಪತಿ ಕೇರಳಾ ಮೂಲದವರಾಗಿದ್ದುದ, ಸದ್ಯ ಇಂಡೋನೇಷ್ಯಾದ ಜಕಾರ್ತದಲ್ಲಿದ್ದಾರೆ.
ಪೊಲೀಸರು ಘಟನೆಯ ಮಾಹಿತಿ ನೀಡಿದ ನಂತರ ಭಾರತಕ್ಕೆ ಆಗಮಿಸಿ ನೇರವಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಆಗಮಿಸಿ ಮಗು ಮೃತಪಟ್ಟಿರುವುದನ್ನು ಕಂಡು ಭಾವುಕರಾದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
