
CHITRADURGA NEWS | 15 JANUARY 2026
ಚಿತ್ರದುರ್ಗ: ಪ್ರಾದೇಶಿಕ ಭಾಷೆ, ನುಡಿಗಟ್ಟು ಎಲ್ಲವೂ ಮೇಳೈಸಿದಾಗ ಮಾತ್ರ ಕಥೆಗಳು ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತವೆ ಎಂದು ವಿಮರ್ಶಕ ಡಾ. ಪ್ರಕಾಶ್ ಮಂಟೇದ ಹೇಳಿದರು.
ಚಿತ್ರದುರ್ಗ ಪತ್ರಿಕಾ ಭವನದಲ್ಲಿ ಲುಂಬಿಣಿ ಪ್ರಕಾಶನ, ಭೀಮಪಥ ಬಳಗ, ಮೈತ್ರಿ ಪುಸ್ತಕ ಮನೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಕಥಾ ಸಮಯ’ ಎಂಬ ವಿನೂತನ ಕಾರ್ಯಕ್ರಮದಲ್ಲಿ ಸಾಹಿತಿ ಜಡೇಕುಂಟೆ ಮಂಜುನಾಥ್ ಅವರ ʼಕಾಡು ಕಾಯುವ ಮರʼ ಕಥಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ: ಮೆಕ್ಕೆಜೋಳಕ್ಕೆ 2150 ದರ ನಿಗಧಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್
ಕಥೆಗಾರ ತಾನು ಕಂಡುಂಡ ಅನುಭವಗಳನ್ನು ತನ್ನ ಒಳಗಿನ ನೋವನ್ನು ಬರೆಯುವಾಗ ನ್ಯಾಯಾಧೀಶನಾಗಬಾರದು. ಯಾವುದೇ ಒಂದು ಕಥೆಯನ್ನು ಓದಿದ ಓದುಗ ಆ ಕಥೆಯನ್ನು ಬೆಳೆಸಬೇಕಿದೆ ಎಂದರು.
ಹಿರಿ ತಲೆಮಾರಿನ ಕಥೆಗಾರರು ಕಟ್ಟಿಕೊಟ್ಟ ಮೌಖಿಕ ಕಥನಗಳೂ ಸೇರಿದಂತೆ ದಲಿತ ಚಳವಳಿಯಿಂದ ಬಂದ ಕಥೆಗಾರರು ಆವೇಶ, ಶೌರ್ಯದ ಬರಹಗಳು ಈಗಲೂ ಮುಂದುವರೆಯಬೇಕು ಎಂದು ಬಯಸುವುದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ:ಅಡಿಕೆ ಧಾರಣೆ | 14 ಜನವರಿ | ಕರ್ನಾಟಕ ಅಡಿಕೆ ಮಾರುಕಟ್ಟೆ ವಿವರ
ಸಾಹಿತಿ ಮೋದೂರು ತೇಜ ಮಾತನಾಡಿ, ಕಾಡು ಕಾಯುವ ಮರದ ಸಂಕಲನದ ಎಲ್ಲಾ ಕಥೆಗಳು ವೈವಿಧ್ಯತೆಯಿಂದ ಕೂಡಿವೆ. ಒಂದು ಕಥೆಯಲ್ಲಿ ಕಾದಂಬರಿ ಬರೆಯುವಷ್ಟು ಕಥಾ ಹಂದರವಿದೆ ಎಂದು ಹೇಳಿದರು.
ಕೇವಲ ದಲಿತ, ಶೋಷಿತ ಸಮುದಾಯಕ್ಕೇ ಸಂಬಂಧಿಸಿದ ಕಥೆಗಳು ಇಲ್ಲಿಲ್ಲ. ಪ್ರೇಮ ಇದೆ, ಹಾಸ್ಯ, ಪರಂಪರೆಯಿಂದಲೂ ರೂಢಿಸಿಕೊಂಡು ಬಂದ ಹಬ್ಬ ಹರಿದಿನಗಳ ಕುರಿತು ಇಲ್ಲಿನ ಕಥೆಗಳಲ್ಲಿ ಅನಾವರಣಗೊಂಡಿವೆ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ: ವಿಜೃಂಭಣೆಯ ಸಿದ್ದರಾಮೇಶ್ವರ ಜಯಂತಿ | ಹೊಳಲ್ಕೆರೆಗೆ ಹರಿದು ಬಂದ ಜನಸಾಗರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್ ಮಾತನಾಡಿ, ಕಾಡು ಕಾಯುವ ಮರ ಕೃತಿ ನಿರಾಯಾಸವಾಗಿ ಓದಿಸಿಕೊಂಡು ಹೋಗುವ ಗುಣ ಹೊಂದಿದೆ ಎಂದರು.
ಚಿಂತಕ ಡಾ.ವೇದಾಂತ್ ಏಳಂಜಿ ಕಥಾ ಸಂಕಲನದ ಒಳನೋಟಗಳನ್ನು ಅನಾವರಣಗೊಳಿಸಿದರು.
ಇದನ್ನೂ ಓದಿ: ದಿನ ಭವಿಷ್ಯ | ಜನವರಿ 15 | ಉದ್ಯೋಗಿಗಳಿಗೆ ಬಡ್ತಿ, ಹೊಸ ವಾಹನ ಖರೀದಿ, ಕೆಲಸದಲ್ಲಿ ಅಡೆತಡೆಗಳು
ಡಾ.ವಿಬಸವರಾಜ್, ಎಂ.ಆರ್.ಮಂಜುನಾಥ್, ಡಾ.ಕುಮಾರ್, ಪತ್ರಕರ್ತ ಎಂ.ಎನ್.ಅಹೋಬಲಪತಿ, ರಮೇಶ್, ಶಿಗೇಹಟ್ಟಿ ಶಿವಶಂಕರ್, ಹನುಮಂತಪ್ಪ, ಹೇಮಂತ್ ಕುಮಾರ್, ಜಿ.ಶಾಂತ, ಸದಾಶಿವ ತೊಡರನಾಳ್, ಪ್ರಕಾಶ್ ಯಾದಲಗಟ್ಟೆ, ಲೇಖಕ ಜಡೇಕುಂಟೆ ಮಂಜುನಾಥ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
