
CHITRADURGA NEWS | 14 JANUARY 2026
ಚಿತ್ರದುರ್ಗ: ಸರ್ಕಾರದ ಆದೇಶದಂತೆ 2025-26 ರ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋನೆಯಡಿಯಲ್ಲಿ ಮೆಕ್ಕೆಜೋಳವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಏಕೀಕೃತ ವೇದಿಕೆಯಡಿಯಲ್ಲಿ ರೈತರು ಮಾರಾಟ ಮಾಡಬಹುದಾಗಿದ್ದು, ಈ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ 2,150/- ರೂ. ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತಗಳು ಅಪಾಯಕಾರಿ | ನ್ಯಾ.ರೋಣ ವಾಸುದೇವ

ರೈತರಿಂದ ಮೆಕ್ಕೆಜೋಳ ಖರೀದಿಸಲು ಜಿಲ್ಲೆಯ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು ತಾಲ್ಲೂಕು ರಾಂಪುರ ದಲ್ಲಿನ ಎ.ಪಿ.ಎಂ.ಸಿ.ಯಲ್ಲಿ ಖರೀದಿ ಕೇಂದ್ರಗಳಲ್ಲಿ ನೊಂದಣಿ ಕಾರ್ಯ ಪ್ರಾರಂಭಿಸಲಾಗಿದೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ವಿಸ್ತೀರ್ಣ ಉತ್ಪಾದನೆ ಆಧಾರದ ಮೇಲೆ 2.17 ಲಕ್ಷ ಕ್ಕಿಂಟಲ್ ಗರಿಷ್ಠ ಪ್ರಮಾಣದಂತೆ ಖರೀದಿಸಲು ಆದೇಶ ನೀಡಲಾಗಿರುತ್ತದೆ. ಇದರನ್ವಯ ಎಫ್.ಎ.ಕ್ಯೂ. ಗುಣಮಟ್ಟದ ಮೆಕ್ಕೆಜೋಳವನ್ನು ಮಾರುಕಟ್ಟೆಗೆ ತರಲು ರೈತರಿಗೆ ಸೂಚಿಸಲಾಗಿದೆ.
ರೈತರು ಮೆಕ್ಕೆಜೋಳವನ್ನು ಇ ಮತ್ತು ಎಫ್. ಬ್ಲಾಕ್ ಗೇಟಿನಲ್ಲಿ ತಂದು ಗೇಟ್ ಎಂಟ್ರಿ ಮಾಡಿಸಬೇಕು. ಮೆಕ್ಕೆಜೋಳದ ಮಾದರಿ ಧಾರಣೆ ಏನೇ ಇದ್ದರೂ ಪ್ರತಿ ಕ್ವಿಂಟಾಲ್‍ಗೆ ಗರಿಷ್ಠ ರೂ.250/-ರಂತೆ ಸರ್ಕಾರದಿಂದ ವ್ಯತ್ಯಾಸ ಬೆಲೆ ಪಾವತಿಸಲಾಗುವುದು. ಈ ಯೋಜನೆಯಡಿ ಪ್ರತಿ ರೈತರಿಂದ 50 ಕ್ವಿಂಟಾಲ್ ಗೆ ಮಿತಿಗೊಳಿಸಿ ವ್ಯತ್ಯಾಸ ಮೊತ್ತ ಖಾತೆಗೆ ರೈತರಿಗೆ ಡಿ.ಬಿ.ಟಿ. ಮೂಲಕ ಜಮೆ ಮಾಡಲಾಗುತ್ತದೆ.
ಇದನ್ನೂ ಓದಿ: ಕೆರೆಯಲ್ಲಿ ಯುವಕನ ಶವ ಪತ್ತೆ | ಕೈ ಕಾಲು ಕಟ್ಟಿ ಮೂಟೆಗೆ ತುಂಬಿ ಎಸೆದಿರುವ ಶಂಕೆ
ವ್ಯತ್ಯಾಸ ಮೊತ್ತದ ಪಾವತಿ: ಮಾರುಕಟ್ಟೆ ಧಾರಣೆ ರೂ. 1,900 ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾದರೆ ಪ್ರತಿ ಕ್ವಿಂಟಲ್‍ಗೆ ಗರಿಷ್ಠ ರೂ.250, ಮಾರುಕಟ್ಟೆ ಧಾರಣೆ ರೂ. 1,950 ರಂತೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ ರೂ.200 ಪಾವತಿಸಲಾಗುವುದು. ರೈತರ ಮೆಕ್ಕೆಜೋಳ ರೂ. 2,150/- ಅಥವಾ ಅದಕ್ಕಿಂತ ಹೆಚ್ಚಿಗೆ ಮಾರಾಟವಾದಲ್ಲಿ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ.
ರೈತರು ಫ್ರೂಟ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ತಂದು ನೊಂದಣಿ ಮಾಡಿಕೊಳ್ಳಬೇಕು. ನಂತರ ಮೆಕ್ಕೆಜೋಳವನ್ನು ಮಾರುಕಟ್ಟೆಯಲ್ಲಿ ಇ-ಟೆಂಡರ್ ಇರುವ ಮಾರುಕಟ್ಟೆ, ದಿನದಂದು ಗೇಟ್ ಎಂಟ್ರಿ ಮಾಡಿಸಿಕೊಂಡು ಮಾರುಕಟ್ಟೆಗೆ ತರಬೇಕು. ಪಿ.ಎ.ಸಿ.ಎಸ್ ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳಲ್ಲಿಯೂ ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಡಿಕೆಶಿ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿ | ವಿಜಯೇಂದ್ರ
2026ರ ಫೆಬ್ರವರಿ 7 ರವರೆಗೆ ಕಾಲಾವಕಾಶ ನೀಡಿದ್ದು, ಅರ್ಹ ರೈತರು ಈ ಯೋಜನೆಯ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
