
CHITRADURGA NEWS | 14 JANUARY 2026
ಹೊಳಲ್ಕೆರೆ: ಹೊಳಲ್ಕೆರೆ ಪಟ್ಟಣದಲ್ಲಿ ಶ್ರೀ ಸಿದ್ಧರಾಮೇಶ್ವರ ಜಯಂತಿ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನ ಮೈದಾನದಲ್ಲಿ ಹಮ್ಮಿಕೊಂಡಿದ್ದ 853ನೇ ಸಿದ್ದರಾಮೇಶ್ವರ ಜಯಂತಿಗೆ ರಾಜ್ಯದ ವಿವಿಧ ಭಾಗಗಳಿಂದ ಸಿದ್ದರಾಮೇಶ್ವರರ ಭಕ್ತರು, ಅಭಿಮಾನಿಗಳು ಸಾಗರದಂತೆ ಬಂದು ಸೇರಿದ್ದರು.
ಇದನ್ನೂ ಓದಿ: ಡಿಕೆಶಿ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿ | ವಿಜಯೇಂದ್ರ
ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ಅಕರ್ಷಕ ಉತ್ಸವ ನಡೆಯಿತು.

ಪಟ್ಟಣದ ಸಿದ್ದರಾಮೇಶ್ವರ ದೇವಾಲಯದಿಂದ ಹೊರಟ ಉತ್ಸವ ಯಕ್ಷಗಾನ, ಬೊಂಬೆ ಕುಣಿತ, ನಾಸಿಕ ಡೋಲ್ ಜಗ್ಗಲಿಗೆ ಮೇಳ ಕಂಸಾಳೆ ಗೊರವರ ಕುಣಿತ, ವೀರಗಾಸೆ, ಕೋಲಾಟ, ನಂದಿ ಧ್ವಜ ಕುಣಿತ ಮುಂತಾದ ಕಲಾ ತಂಡಗಳು ಕಳೆ ತಂದವು.
ಇದನ್ನೂ ಓದಿ: ಮೆಕ್ಕೆಜೋಳಕ್ಕೆ 2150 ದರ ನಿಗಧಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್
1108 ಪೂರ್ಣ ಕುಂಭ ಹೊತ್ತ ಮಹಿಳೆಯರು ಸಿದ್ದರಾಮೇಶ್ವರ ಜಯಂತಿಗೆ ಮೆರುಗು ತುಂಬಿದರು. ನಂತರ ವೇದಿಕೆಯ ಮುಂಭಾಗದಲ್ಲಿ ಕುಪ್ಪೂರು ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜನ ದೇಶಿಕೇಂದ್ರ ಸ್ವಾಮೀಜಿ ಷಟ್ಟಸ್ಥಲ ಧ್ವಜರೋಹಣ ನರವೇರಿಸಿದರು.
ಭಾರತೀಯರಲ್ಲಿರುವ ಕಾಲೆಳೆಯುವ ಪ್ರವೃತ್ತಿಯಿಂದ ಹೊರ ಬಂದು ಸಮ ಸಮಾಜದ ನಿರ್ಮಾಣದತ್ತ ಚಿಂತನೆ ಮಾಡಿ ಸನ್ಮಾ ಮಾರ್ಗದಲ್ಲಿ ನಡೆಯ ಬೇಕು.
| ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ ತರಳಬಾಳು ಬೃಹನ್ಮಠ.
ಸಮಾರಂಭದಲ್ಲಿ ಸಿದ್ದಗಂಗ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ, ಭಗೀರಥ ಪೀಠದ ಶ್ರೀ ಪುರಷೋತ್ತಮಾನಂದಪುರಿ ಸ್ವಾಮೀಜಿ, ಕೆರೆಗೋಡಿ ರಾಮಗಾಪುರದ ಗುರುಪರದೇಶಿಕೇಂದ್ರ ಸ್ವಾಮೀಜಿ, ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 14 ಜನವರಿ | ಕರ್ನಾಟಕ ಅಡಿಕೆ ಮಾರುಕಟ್ಟೆ ವಿವರ
ಮಾಜಿ ಸಚಿವ ಎಂ.ಪಿ.ರೇಣುಕಚಾರ್ಯ ನೊಳಂಬ ಲಿಂಗಾಯತ ಪುಸ್ತಕ ಬಿಡುಗಡೆ ಮಾಡಿದರು. ಹೊಳಲ್ಕೆರೆ ಶಾಸಕರಾದ ಡಾ.ಎಂ.ಚಂದ್ರಪ್ಪ, ಸಂಸದ ಗೋವಿಂದ ಕಾರಜೋಳ ನೊಳಂಬ ವಾಣಿ ಸಂಚಿಕೆ, ತುಮಕೂರು ಶಾಸಕ ಜ್ಯೋತಿ ಗಣೇಶ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜವನ್ನು ರಾಜಕೀಯ ಉದ್ದೇಶಕ್ಕಾಗಿ ಒಡೆಯವ ಉನ್ನಾರ ನಡೆಯಿತ್ತಿದ್ದು ಇದಕ್ಕೆ ನಾವು ಸಹಿಸಲ್ಲ, ಎಲ್ಲಾ ಒಗ್ಗೂಡುವ ಅಗತ್ಯವಿದೆ.
| ಬಿ.ವೈ.ವಿಜಯೇಂದ್ರ, ಬಿಜಿಪಿ ರಾಜ್ಯಾಧ್ಯಕ್ಷ.
ನೊಳಂಬ ಸಮಾಜದ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಕೆ.ಚಂದ್ರಶೇಖರ, ಕಾರ್ಯದರ್ಶಿ ಶಶಿಧರ, ನಿವೃತ್ತ ಎಡಿಜಿಪಿ ಸಿದ್ದರಾಮಪ್ಪ, ನಿ,ಎಸಿಪಿ ಲೋಕೇಶ್ವರಪ್ಪ, ಎಚ್.ಕೆ.ಸುರೇಶ, ಮಾಜಿ ಶಾಸಕರಾದ ಕೆ.ಎಸ್.ಲಿಂಗೇಶ, ಕೆ.ಸಿ.ರಮೇಶ, ಎ.ವಿ.ಉಮಾಪತಿ, ಬಿಜಿಪಿ ವಕ್ತಾರ ಚಂದ್ರಶೇಖರ್, ಸ್ವಾಗತ ಸಮಿತಿ ಅಧ್ಯಕ್ಷ ಶಶಿಧರ, ಬಿಜೆಪಿ ಮುಖಂಡರಾದ ವಸಂತ ಕುಮಾರ, ಎಸ್.ಲಿಂಗಮೂರ್ತಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಜನವರಿ 14,15 ರಂದು ಹೊಳಲ್ಕೆರೆ ಪಟ್ಟಣದಲ್ಲಿ ಸಿದ್ದರಾಮೇಶ್ವರ ಜಯಂತಿ ಆಚರಣೆ | ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ಚಂದ್ರಪ್ಪ
ನೊಳಂಬ ಲಿಂಗಾಯತ ಸಮಾಜವು ಸಿದ್ದರಾಮೇಶ್ವರರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಿತ್ತಿದ್ದು, ಸಂಘಟನೆಯಲ್ಲಿ ರಾಜ್ಯದಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ, ಅರ್ಥಿಕವಾಗಿ ಇನ್ನೂಷ್ಟು ಬಲಿಷ್ಠವಾಗಬೇಕು ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಶಾಮನೂರು ಶಿವಶಂಕರಪ್ಪ ಲಿಂಗೈಕ್ಯರಾಗಿದ್ದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸಮಾಜದ ಎಲ್ಲಾ ಧಾರ್ಮಿಕ ಗುರುಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಬೇಕು.
| ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

