ಮುಖ್ಯ ಸುದ್ದಿ
ಎಸ್‍ಜೆಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ | ವಿದುಷಿ ನಂದಿನಿ ಶಿವಪ್ರಕಾಶ್ ಭಾಗೀ

CHITRADURGA NEWS | 24 MARCH 2024
ಚಿತ್ರದುರ್ಗ: ನಗರದ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನೂ ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರದ ಖ್ಯಾತ ಭರತನಾಟ್ಯ ವಿದುಷಿ ಡಾ.ನಂದಿನಿ ಶಿವಪ್ರಕಾಶ್ ಉದ್ಘಾಟಿಸಿ ಮಾತನಾಡಿ.
ಇದನ್ನೂ ಓದಿ: ಗೋ ಬ್ಯಾಂಕ್ ಗೋವಿಂದ ಕಾರಜೋಳ | ರಘಚಂದನ್ ಬೆಂಬಲಿಗರಿಂ ಪ್ರತಿಭಟನೆ
ಭಾರತದಲ್ಲಿ ಹೆಣ್ಣಿಗೆ ತುಂಬಾ ಗೌರವದ ಸ್ಥಾನವಿದೆ. ಹೆಣ್ಣನ್ನು ಪ್ರಕೃತಿಗೆ ಹೋಲಿಸುತ್ತಾರೆ. ಹೆಣ್ಣು ಸೌಂದರ್ಯದ ಪ್ರತೀಕ ವಷ್ಟೇ ಅಲ್ಲ. ಸ್ತ್ರೀ ಆದಿಶಕ್ತಿ, ಗಾಯಿತ್ರಿ ಸ್ವರೂಪ. ಪ್ರತಿಯೊಬ್ಬರ ಗೆಲುವಿನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ. ಪ್ರತಿಯೊಂದು ಹುಟ್ಟಿಗೆ ಕಾರಣ ಹೆಣ್ಣು, ತಾಯಿ ಪ್ರತಿ ಹಂತದಲ್ಲೂ ತನ್ನ ಮಗುವನ್ನು ಜೋಪಾನ ಮಾಡಿ ಬೆಳೆಸುತ್ತಾಳೆ. ತಂದೆ-ತಾಯಿ ಎರಡೂ ಜವಾಬ್ದಾರಿಯನ್ನು ನಿಭಾಯಿಸಿ ತನ್ನ ಮಕ್ಕಳನ್ನು ಬೆಳಸಿ ದೊಡ್ಡವರನ್ನಾಗಿ ಮಾಡಿ ಅವರ ಜೀವನ ರೂಪಿಸುತ್ತಾಳೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ವಿದ್ಯಾರ್ಥಿ ಚೇತನ್ ಹೃದಯಾಘಾತದಿಂದ ಸಾವು
ಪ್ರತಿ ವಿಚಾರದಲ್ಲೂ ಸಂಭ್ರಮ ಪಡುತ್ತಾಳೆ. ನಮ್ಮ ಹೆಣ್ಣು ಮಕ್ಕಳು ಒನಕೆ ಓಬವ್ವ, ಕಲ್ಪನಾ ಚಾವ್ಲಾ, ಅಕ್ಕ ಮಹಾದೇವಿ, ಉಭಯ ಭಾರತಿಯರಂತಹರನ್ನು ಆದರ್ಶವನ್ನಾಗಿಟ್ಟುಕೊಂಡು ತಮ್ಮ ಬದುಕು ರೂಪಿಸಿಕೊಳ್ಳಬೇಕು. ಧೀಮಂತ ಮಹಿಳೆಯರಾಗಿ ಬಾಳಬೇಕು ಎಂದು ತಿಳಿಸಿದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಪ್ರೊ.ಬಸಂತಕುಮಾರಿ ಮಾತನಾಡಿ, ಮನೆಗಳಲ್ಲಿ ಹೆಣ್ಣು ಮಕ್ಕಳು ಸಂಸಾರದ ಜವಾಬ್ದಾರಿಯನ್ನು ಹೊರುತ್ತಾಳೆ. ಪುರುಷರು ಸ್ತ್ರೀಯರಿಗೆ ಹೊರೆಯಾಗದಂತೆ ತಾವು ಸಹ ಮನೆಯ ಜವಾಬ್ದಾರಿಯಲ್ಲಿ ಪಾತ್ರ ವಹಿಸಬೇಕು. ಗಂಡ ಹೆಂಡತಿ ಪರಸ್ಪರ ಸಹಕಾರ ನೀಡಿ ಸಂಸಾರ ನಿಭಾಯಿಸಿದರೆ ಜೀವನ ಉತ್ತಮವಾಗಿರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಎಚ್.ಎನ್. ಲೋಕೇಶ್ ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ
ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಪಿ.ಬಿ. ಭರತ್ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲೂ ಸ್ತ್ರೀಯರು ಉನ್ನತ ಸಾಧನೆ ಮಾಡುತ್ತಿದ್ದಾರೆ. ನಾವು ಲಿಂಗದ ಆಧಾರದ ಮೇಲೆ ಯಾವುದನ್ನೂ ನಿರ್ಧಾರ ಮಾಡಬಾರದು. ಸ್ತ್ರೀಯರಿಗೆ ಗೌರವ ನೀಡಿದಲ್ಲಿ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಹೆಣ್ಣುಮಕ್ಕಳು ಗಂಗೆಯಂತೆ, ಜಲವಿಲ್ಲದೇ ಏನು ಇಲ್ಲ. ಹಾಗೆಯೇ ಹೆಣ್ಣು ಮಕ್ಕಳಿಲ್ಲದೇ ಪ್ರಪಂಚವಿಲ್ಲ. ಸ್ತ್ರೀ ಮನೆ ಹೊರೆಗೆ ಹಾಗೂ ಮನೆಯ ಒಳಗಡೆ ಸಕಲವನ್ನು ನಿಭಾಯಿಸುತ್ತಾಳೆ ಎಂದರು.
ಇದನ್ನೂ ಓದಿ: ಹೊರಕೆರೆ ದೇವರಪುರ ರಂಗಪ್ಪನ ತೇರಿಗೆ ಜನಸಾಗರ | ವಿಜೃಂಭಣೆಯ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ
ಕಾರ್ಯಕ್ರಮದಲ್ಲಿ ಸ್ತ್ರೀ ಘಟಕದ ಸಂಚಾಲಕಿ ಪ್ರೊ.ಸುಷ್ಮಿತಾ, ಪ್ರೊ.ಎನ್.ಪವಿತ್ರ, ಪಿ.ಮೇಘನಾ, ಸಿ.ಭೂಮಿಕಾ, ವಿ.ಕೆ.ಮೋನಿಕಾ ಸೇರಿದಂತೆ ವಿವಿಧ ಇಲಾಖಾ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
