
CHITRADURGA NEWS | 29 JULY 2024
ಚಿತ್ರದುರ್ಗ: ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಕೆರೆ ಕಟ್ಟೆಗಳು ಮಾತ್ರವಲ್ಲಿ ಜಲಾಶಯಗಳು ಭರ್ತಿಯಾಗಿವೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಪರಿಸ್ಥಿತಿ ಹೀಗಿರುವಾಗ ಬಯಲು ಸೀಮೆ ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಗೆ ಮಾತ್ರ ಮಳೆರಾಯ ಸಣ್ಣದಾಗೆ SPRAY ಮಾಡಿದಂತೆ ಆಗಾಗ ಬಂದು ಹೋಗುತ್ತಿದ್ದಾನೆ.
ಇದನ್ನೂ ಓದಿ: ವಿವಿ ಸಾಗರ ಜಲಾಶಯದ ಇಂದಿನ ಮಟ್ಟ | ಒಂದೇ ಮಳೆಗೆ ಒಂದೂವರೆ ಟಿಎಂಸಿ ನೀರು ಸಂಗ್ರಹ
ಬೇರೆಲ್ಲಾ ಕಡೆಗಳಲ್ಲಿ ಎಲ್ಲೆಲ್ಲೂ ನೀರೇ ಕಾಣಿಸುತ್ತಿದ್ದರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಭಾಗದಲ್ಲಿ ಬಿತ್ತನೆಗೆ ಹದವಾದ ಖಾಲಿ ಭೂಮಿಗಳು ಮಳೆಗಾಗಿ ಕಾಯುತ್ತಿವೆ.
ಮಳೆಯೇ ಇಲ್ಲದ ಹೊತ್ತಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿರುವ ಮಧ್ಯ ಕರ್ನಾಟಕದ ಪ್ರಮುಖ ಜಲಾಶಯ ವಾಣಿವಿಲಾಸ ಸಾಗರಕ್ಕೆ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ ಒಳಹರಿವು ಶುರುವಾಗಿದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಹೆಚ್ಚಾದ ಒಳಹರಿವು | 114 ಅಡಿ ತಲುಪಿದ ಜಲಾಶಯ ಮಟ್ಟ
ಅಚ್ಚರಿಯಾದರೂ ಸತ್ಯ. ಹೌದು, ಚಿತ್ರದುರ್ಗ ಜಿಲ್ಲೆಯಲ್ಲಿ ಹಾದು ಹೋಗುವ ವೇದಾವತಿ ನದಿಯ ಉಗಮಸ್ಥಾನ ಮಲೆನಾಡು ಚಿಕ್ಕಮಗಳೂರು ಜಿಲ್ಲೆಯ ಪೂರ್ವಭಾಗ.
ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ವೇದಾವತಿ ನದಿ ಜನ್ಮ ತಳೆದು ಬಯಲು ಸೀಮೆಯಲ್ಲಿ ಹರಿದು ತುಂಗಭದ್ರೆ ಸೇರುತ್ತಾಳೆ. ಕಳೆದ 15 ದಿನಗಳಿಂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ವೇದಾವತಿ ನದಿಗೆ ಈಗ ಜೀವ ಕಳೆ ಬಂದಿದೆ.
ಇದನ್ನೂ ಓದಿ: ವರುಣಾರ್ಭಟಕ್ಕೆ ಮಲೆನಾಡು ತತ್ತರ | ಬಯಲುಸೀಮೆಯಲ್ಲಿ ಮಳೆಗೆ ಪ್ರಾರ್ಥನೆ
ಚಿಕ್ಕಮಗಳೂರು, ಕಡೂರು, ಸಖರಾಯಪಟ್ಟಣ, ಅಜ್ಜಂಪುರ, ಬೀರೂರು, ಲಿಂಗದಹಳ್ಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಇಲ್ಲಿರುವ ಬೃಹತ್ ಗಾತ್ರದ ಮದಗದ ಕೆರೆ ಹಾಗೂ ಅಯ್ಯನಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ.
ಎರಡೂ ಕೆರೆಗಳು ಕೋಡಿ ಬಿದ್ದ ನಂತರ ವೇದಾವತಿ ನದಿಯಾಗಿ ನೀರು ಹರಿದು ಹೊಸದುರ್ಗ ತಾಲೂಕಿನ ಮೂಲಕ ವಿವಿ ಸಾಗರಕ್ಕೆ ಸೇರುತ್ತಿದೆ.
ಸೋಮವಾರ ಬೆಳಗ್ಗೆ 8ಕ್ಕೆ ವಿವಿ ಸಾಗರಕ್ಕೆ ಬಂದ ನೀರೆಷ್ಟು:
ಜುಲೈ 29 ಸೋಮವಾರ ಬೆಳಗ್ಗೆ 8 ಗಂಟೆಗೆ ಜಲಾಶಯದ ಅಧಿಕಾರಿಗಳು ಮಾಡಿದ ಮಾಪನದಂತೆ 974 ಕ್ಯೂಸೆಕ್ ನೀರು ಹರಿದು ಬಂದಿದೆ.
130 ಅಡಿ ನೀರು ಸಂಗ್ರಹ ಸಾಮರ್ಥ್ಯದ ವಾಣಿವಿಲಾಸ ಸಾಗರ (Vanivilasa sagara) ಜಲಾಶಯದಲ್ಲಿ ಸದ್ಯ 113.50 ಅಡಿ ನೀರು ಸಂಗ್ರಹವಿದೆ.
ಇದನ್ನೂ ಓದಿ: ಪೊಲೀಸರ ಮೇಲೆ ಕಲ್ಲು ತೂರಿದ್ದ ಗ್ಯಾಂಗ್ | ಆಂಧ್ರ ಮೂಲದ ಕಳ್ಳನ ಬಂಧನ
30 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ವಿವಿ ಸಾಗರದಲ್ಲಿ ಈಗ 17.94 ಟಿಎಂಸಿ ಅಡಿ ನೀರಿದೆ.
ಮೇ ತಿಂಗಳಲ್ಲೂ ಹರಿದಿತ್ತು ನೀರು:
ಕಳೆದ ಮೇ ತಿಂಗಳಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ವಿವಿ ಸಾಗರಕ್ಕೆ ಒಂದು ವಾರ ಕಾಲ ನೀರು ಹರಿದಿತ್ತು. ಈ ಅವಧಿಯಲ್ಲಿ 1.6 ಟಿಎಂಸಿ (3 ಅಡಿ) ನೀರು ಸಂಗ್ರಹವಾಗಿತ್ತು. ಮೇ.21ರ ಒಂದೇ ದಿನ 5240 ಕ್ಯೂಸೆಕ್ ನೀರು ಹರಿದಿದ್ದು ಈ ವರ್ಷದ ಆರಂಭಿಕ ದಾಖಲೆಯಾಗಿತ್ತು.
ಪಶ್ಚಿಮಘಟ್ಟದ ಮಳೆ ಬಯಲು ಸೀಮೆಗೆ ನೀರು:
ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮದಗದ ಕೆರೆ ತುಂಬಿ ಕೋಡಿ ಬಿದ್ದಿದೆ.

ಬರೋಬ್ಬರಿ 2036 ಎಕರೆ ವಿಸ್ತೀರ್ಣ, 80 ಅಡಿ ಆಳವಿರುವ ಈ ಕೆರೆ ತುಂಬಿದರೆ ಕಡೂರು ತಾಲೂಕಿನ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳಿಗೆ ಅನುಕೂಲವಾಗುತ್ತದೆ. ಇದರೊಟ್ಟಿಗೆ ಮದಗದ ಕೆರೆ ಕೋಡಿ ಬಿದ್ದ ನಂತರ ಹರಿದು ಬರುವ ನೀರು ವೇದಾವತಿ ಮೂಲಕ ವಿವಿ ಸಾಗರ ತಲುಪುವುದು ಚಿತ್ರದುರ್ಗ ಜಿಲ್ಲೆಯ ರೈತರಿಗೂ ಅನುಕೂಲವಾಗಲಿದೆ.
ಇದನ್ನೂ ಓದಿ: ವಾಣಿವಿಲಾಸ ಸಾಗರಕ್ಕೆ ಮತ್ತೆ ಹರಿದ ನೀರು | ಈಗ ಜಲಾಶಯದ ನೀರಿನ ಮಟ್ಟ ಎಷ್ಟಿದೆ
ಮದಗದ ಕೆರೆ ತುಂಬಿ ಹರಿದ ನಂತರ ಸಖರಾಯಪಟ್ಟಣದ ಬಳಿಯಿರುವ ಅಯ್ಯನಕೆರೆ ಕೂಡಾ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯುತ್ತಿದೆ. ಇದರಿಂದಾಗಿ ವಿವಿ ಸಾಗರಕ್ಕೆ ನೀರು ಹರಿಯುವ ಪ್ರಮಾಣ ಹೆಚ್ಚಾಗಿದೆ.
ಉಗಮ ಸ್ಥಾನದಿಂದಲೇ ಹರಿಯುತ್ತಿದ್ದಾಳೆ ವೇದಾವತಿ:
ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಬಳಿ ಹುಟ್ಟುವ ‘ವೇದಾ’ ನದಿಗೆ ಮದಗದ ಕೆರೆಯಿಂದ ಹರಿದು ಬರುವ ‘ಆವತಿ’ ಹಳ್ಳದ ನೀರು ಸಂಗಮವಾಗಿ ಮುಂದೆ ‘ವೇದಾವತಿ’ ನದಿಯಾಗಿ ಹರಿದು ಹೊಸದುರ್ಗ ತಾಲೂಕಿನಲ್ಲಿ ಸಾಗಿ ಮುಂದೆ ವಾಣಿವಿಲಾಸ ಜಲಾಶಯ ಸೇರುತ್ತದೆ.
ಇದನ್ನೂ ಓದಿ: ಶೀಘ್ರ 8 ಕೆರೆಗಳಿಗೆ ಭದ್ರಾ ನೀರು | ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ
ವಿವಿಸಾಗರ ಭರ್ತಿಯಾದ ನಂತರ ಇಲ್ಲಿಂದ ವೇದಾವತಿ ಮುಂದೆ ಸಾಗಿ ಆಂಧ್ರಪ್ರದೇಶದ ಬಳಿ ಹಗರಿ ನದಿಯಾಗಿ ಆನಂತರ ತುಂಗಭದ್ರಾ ನದಿಯಲ್ಲಿ ವಿಲೀನವಾಗುತ್ತದೆ. ಇದೇ ವೇಳೆ ಸುವರ್ಣಮುಖಿ ನದಿ ಕೂಡಾ ವೇದಾವತಿಯಲ್ಲಿ ಸೇರುತ್ತದೆ.
89 ವರ್ಷದ ನಂತರ ಕೋಡಿ ಬಿದ್ದಿತ್ತು ವಿವಿ ಸಾಗರ:
2022 ಸೆಪ್ಟಂಬರ್ 2 ರಂದು ವಾಣಿವಿಲಸಾ ಸಾಗರ ಜಲಾಶಯ ನಿರ್ಮಾಣವಾದ ನಂತರ 2ನೇ ಬಾರಿಗೆ ಕೋಡಿ ಬಿದ್ದಿತ್ತು. ಈ ವೇಳೆ ಸುಮಾರು 5 ತಿಂಗಳ ಕಾಲ ಕೋಡಿಯಲ್ಲಿ ನೀರು ಹರಿದು ವೇದಾವತಿ ಮೂಲಕ ದಾಖಲೆಯಾಗಿತ್ತು. ಸುಮಾರು 23 ಟಿಎಂಸಿ ನೀರು ಹರಿದು ಆಂಧ್ರಪ್ರದೇಶದ ಮೂಲಕ ಹರಿದು ಸಮುದ್ರ ಸೇರಿತ್ತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
