ಮುಖ್ಯ ಸುದ್ದಿ
ವಿವಿ ಸಾಗರ ಜಲಾಶಯದ ಇಂದಿನ ಮಟ್ಟ | ಒಂದೇ ಮಳೆಗೆ ಒಂದೂವರೆ ಟಿಎಂಸಿ ನೀರು ಸಂಗ್ರಹ

CHITRADURGA NEWS | 23 MAY 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ವಾರ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ವೇದಾವತಿ ನದಿಗೆ ಜೀವ ಕಳೆ ಬಂದಿತ್ತು. ಇದರಿಂದಾಗಿ ವಾಣಿವಿಲಾಸ ಸಾಗರಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿಯಿತು.
ಮೇ.23 ಗುರುವಾರ ಬೆಳಗ್ಗೆ 8 ಗಂಟೆಗೆ ನಡೆಸಿದ ಮಾಪನದಲ್ಲಿ ವಾಣಿವಿಲಾಸ ಸಾಗರಕ್ಕೆ 2200 ಕ್ಯೂಸೆಕ್ ನೀರು ಹರಿಯುತ್ತಿರುವುದು ದಾಖಲಾಗಿದೆ.

ಮೊದಲ ದಿನ ಅಂದರೆ ಮೇ.20 ರಂದು 3800 ಕ್ಯೂಸೆಕ್, ಮೇ.21 ರಂದು 5100 ಕ್ಯೂಸೆಕ್, ಮೇ.22 ರಂದು 4800 ಕ್ಯೂಸೆಕ್ ನೀರು ಹರಿದಿತ್ತು. ಇಂದು 2200 ಕ್ಯೂಸೆಕ್ ನೀರು ಬಂದಿದೆ.

ಒಟ್ಟಾರೆ ಕಳೆದ ನಾಲ್ಕು ದಿನಗಳಲ್ಲಿ ವಾಣಿವಿಲಾ ಸಾಗರಕ್ಕೆ ಬರೋಬ್ಬರಿ ಒಂದೂವರೆ ಟಿಎಂಸಿ ನೀರು ಹರಿದಿದೆ. ಪೂರ್ವ ಮುಂಗಾರಿನ ಒಂದೇ ಮಳೆಗೆ ಒಂದೂವರೆ ಟಿಎಂಸಿ ನೀರು ಬಂದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ: ಚಳ್ಳಕೆರೆ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ | ₹ 30 ಲಕ್ಷಕ್ಕೆ ಮುಕ್ತಿ ಬಾವುಟ ಪಡೆದ ಶಾಸಕ ವೀರೇಂದ್ರ ಪಪ್ಪಿ
135 ಅಡಿ ಎತ್ತರದ, 30 ಟಿಎಂಸಿ ಸಾಮಥ್ರ್ಯದ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸದ್ಯ ಡೆಡ್ ಸ್ಟೋರೇಜ್ ಸೇರಿ 18.04 ಟಿಎಂಸಿ ನೀರಿದ್ದು, 113.65 ಅಡಿಯಷ್ಟು ನೀರು ಸಂಗ್ರಹವಾಗಿದೆ.
ಮುಂದಿನ ಮಳೆಗಳು ಉತ್ತಮವಾಗಿ ಸುರಿದು, ಭದ್ರಾ ಜಲಾಶಯದಿಂದ ನೀರು ಹರಿಸಿದರೆ ಈ ವರ್ಷವೂ ಜಲಾಶಯ ಭರ್ತಿಯಾಗುವುದರಲ್ಲಿ ಅನುಮಾನವಿಲ್ಲ
