
CHITRADURGA NEWS | 07 JUNE 2024
ಚಿತ್ರದುರ್ಗ: ವಾಣಿವಿಲಾಸ ಸಾಗರಕ್ಕೆ ಮತ್ತೆ ನೀರು ಹರಿದಿದೆ. ಈ ಹಿಂದೆ ಕೃತಿಕಾ ಮಳೆಯಲ್ಲಿ ಒಂದು ವಾರ ಕಾಲ ನೀರು ಹರಿದಿದ್ದರಿಂದ ಒಂದು ಸುಮಾರು ಒಂದೂವರೆ ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಆನಂತರ ಬಂದ ಮಳೆಯಿಂದಾಗಿ ಮತ್ತೊಮ್ಮೆ ವಿವಿ ಸಾಗರಕ್ಕೆ ನೀರು ಹರಿದಿದ್ದರಿಂದ ರೈತರು ಸಂತೋಷಗೊಂಡಿದ್ದರು. ಈ ವರ್ಷವೂ ಜಲಾಶಯದಲ್ಲಿ ಕೋಡಿ ಬಿದ್ದು ನೀರು ಹರಿಯುವ ಆಸೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ರಾಯಾಪುರದಲ್ಲಿ 80 ಮಿ.ಮೀ ಮಳೆ | 32 ಮನೆಗಳಿಗೆ ಹಾನಿ | 2 ಎಕರೆ ತೋಟಗಾರಿಕೆ ಬೆಳೆ ಹಾನಿ
ಗುರುವಾರ ರಾತ್ರಿ ಮತ್ತೊಮ್ಮೆ ಭಾರೀ ಮಳೆಯಾಗಿದೆ. ಈಗಾಗಲೇ ವೇದಾವತಿ ನದಿ ತುಂಬಿ ಹರಿದಿದ್ದು, ಮಾರ್ಗದಲ್ಲಿರುವ ಎಲ್ಲ ಬ್ಯಾರೇಜ್‍ಗಳು ಭರ್ತಿಯಾಗಿವೆ.
ಈಗ ಗುರುವಾರ ಸಂಜೆ ಮತ್ತು ರಾತ್ರಿ ಸುರಿದ ಮಳೆಯಿಂದಾಗಿ ಜೂ.7ರ ಬೆಳಗ್ಗೆ 8 ಗಂಟೆಯ ರೀಡಿಂಗ್ ವೇಳೆ ವಿವಿ ಸಾಗರ ಜಲಾಶಯಕ್ಕೆ 1850 ಕ್ಯೂಸೆಕ್ ನೀರು ಹರಿದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾದ ಗೋವಿಂದ ಕಾರಜೋಳ
ಒಟ್ಟು 30.422 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯದ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸದ್ಯ 18.29 ಟಿಎಂಸಿ ಅಡಿ ನೀರು ಸಂಗ್ರವಾಗಿದೆ. ಅಡಿ ಲೆಕ್ಕದಲ್ಲಿ 135 ಅಡಿ ನೀರು ತುಂಬುವ ಸಾಮಥ್ರ್ಯದ ವಿವಿ ಸಾಗರ ಜಲಾಶಯದಲ್ಲಿ ಈಗ 114.05 ಅಡಿ ಎತ್ತದವರೆಗೆ ನೀರು ತುಂಬಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
