ಮುಖ್ಯ ಸುದ್ದಿ
ರಾಯಾಪುರದಲ್ಲಿ 80 ಮಿ.ಮೀ ಮಳೆ | 32 ಮನೆಗಳಿಗೆ ಹಾನಿ | 2 ಎಕರೆ ತೋಟಗಾರಿಕೆ ಬೆಳೆ ಹಾನಿ

CHITRADURGA NEWS | 07 JUNE 2024
ಚಿತ್ರದುರ್ಗ: ಗುರುವಾರ ಸುರಿದ ಮಳೆಗೆ ಮೊಳಕಾಲ್ಮೂರು ತಾಲ್ಲೂಕಿನ ರಾಯಾಪುರದಲ್ಲಿ 80 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ಮಾದಾರ ಚನ್ನಯ್ಯ ಶ್ರೀಗಳಿಗೆ ಗೌರವ ಡಿ.ಲಿಟ್ | ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಪ್ರದಾನ

ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 49 ಮಿ.ಮೀ, ಬಿಜಿಕೆರೆ 32.4 ಮಿ.ಮೀ, ರಾಂಪುರ 62.2 ಮಿ.ಮೀ, ದೇವಸಮುದ್ರ 50.2 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 9.4ಮಿ.ಮೀ, ಚಿತ್ರದುರ್ಗ-2ರಲ್ಲಿ 11.5ಮಿ.ಮೀ, ತುರುವನೂರು 73.4ಮಿ.ಮೀ, ಭರಮಸಾಗರ 6.4ಮಿ.ಮೀ, ಹಿರೇಗುಂಟನೂರು 2.1ಮಿ.ಮೀ, ಐನಹಳ್ಳಿ 12.6ಮಿ.ಮೀ, ಸಿರಿಗೆರೆ 7.4 ಮಿ.ಮೀ, ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 10.6ಮಿ.ಮೀ, ಸುಗೂರು 26.2ಮಿ.ಮೀ, ಬಾಬ್ಬೂರು 10.2 ಮಿ.ಮೀ, ಈಶ್ವರಗೆರೆ 46.8ಮಿ.ಮೀ, ಇಕ್ಕನೂರು 28.2 ಮಿ.ಮೀ, ಮಳೆಯಾಗಿದೆ.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿಸಿ ಕ್ಯಾಮೆರಾ ಕಣ್ಗಾವಲು | 19 ಕೇಂದ್ರಗಳಿಗೆ ಪೊಲೀಸ್ ಭದ್ರತೆ
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 24.6ಮಿ.ಮೀ, ಮತ್ತೋಡು 18.4ಮಿ.ಮೀ, ಶ್ರೀರಾಂಪುರ 5 ಮಿ.ಮೀ, ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 3.2 ಮಿ.ಮೀ, ಚಿಕ್ಕಜಾಜೂರು 5.4 ಮಿ.ಮೀ, ಬಿ. ದುರ್ಗ 5.2 ಮಿ.ಮೀ, ಹೆಚ್‍ಡಿ ಪುರ 4.2 ಮಿ.ಮೀ, ತಾಳ್ಯ 3.2 ಮಿ.ಮೀ, ರಾಮಗಿರಿ 3.4 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 23.2ಮಿ.ಮೀ, ಪರುಶುರಾಂಪುರ 41.2ಮಿ.ಮೀ, ನಾಯಕನಹಟ್ಟಿ 77.4ಮಿ.ಮೀ, ತಳಕು 34.4ಮಿ.ಮೀ, ಡಿ. ಮರಿಕುಂಟೆ 13.6 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ಖರ್ಚಿಲ್ಲದೆ ಪ್ರಕರಣ ಬಗೆಹರಿಸಿಕೊಳ್ಳಿ | ಜಿಲ್ಲಾ ನ್ಯಾಯಾಲಯದಿಂದ ಸುರ್ವಣಾವಕಾಶ
ಜಿಲ್ಲೆಯಾದ್ಯಂತ 32 ಮನೆಗಳು ಭಾಗಶಃ ಹಾನಿ, 2 ಹೆಕ್ಟೆರ್ ತೋಟಗಾರಿಕೆ ಬೆಳೆ ಹಾನಿ:
ಗುರುವಾರ ಸುರಿದ ಮಳೆಗೆ ಜಿಲ್ಲಾಯಾದ್ಯಂತ ಒಟ್ಟು 32 ಮನೆಗಳು ಭಾಗಶಃ ಹಾನಿಯಾಗಿದ್ದು, 2 ಹೆಕ್ಟೆರ್ ತೋಟಗಾರಿಕೆ ಬೆಳೆ ಹಾನಿ, 13 ಸಣ್ಣ ಜಾನುವಾರು ಹಾಗೂ 1 ದೊಡ್ಡ ಜಾನುವಾರು ಹಾನಿಯಾಗಿದ್ದು, 19 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ ಭಾಗಶಃ 11 ಮನೆಗಳು ಹಾನಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಭಾಗಶಃ 5 ಮನೆಗಳು ಹಾಗೂ 2 ಹೆಕ್ಟೆರ್ ತೋಟಗಾರಿಕೆ ಬೆಳೆ ಕೂಡ ಹಾನಿಯಾಗಿದೆ.
ಇದನ್ನೂ ಓದಿ: ಗೋವಿಂದ ಕಾರಜೋಳ ಗೆಲುವಿಗೆ ಬಿಜೆಪಿ ನಾಯಕರು ಕೆಲಸ ಮಾಡಲಿಲ್ಲ | ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್
ಹೊಳಲ್ಕೆರೆ ತಾಲ್ಲೂಕಿನಲ್ಲಿ ಭಾಗಶಃ 1 ಮನೆ ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 9 ಸಣ್ಣ ಜಾನುವಾರು ಹಾನಿಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಭಾಗಶಃ 16 ಮನೆಗಳು ಹಾಗೂ 4 ಸಣ್ಣ ಜಾನುವಾರು, 1 ದೊಡ್ಡ ಜಾನುವಾರು ಹಾನಿಯಾಗಿದ್ದು, 19 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
