Connect with us

    ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲೇ ಭುಗಿಲೆದ್ದ ಕಾಂಗ್ರೆಸ್‌ ಮುಖಂಡರ ಅಸಮಾಧಾನ | ತೋಟದ ಮನೆ ಸಭೆಯಲ್ಲಿ ಬಹಿರಂಗ

    ಮುಖ್ಯ ಸುದ್ದಿ

    ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲೇ ಭುಗಿಲೆದ್ದ ಕಾಂಗ್ರೆಸ್‌ ಮುಖಂಡರ ಅಸಮಾಧಾನ | ತೋಟದ ಮನೆ ಸಭೆಯಲ್ಲಿ ಬಹಿರಂಗ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 21 FEBRUARY 2024
    ಚಿತ್ರದುರ್ಗ:‌ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ತವರು ಕ್ಷೇತ್ರ ಹಿರಿಯೂರಿನಲ್ಲಿ ಕಾಂಗ್ರೆಸ್‌ ಮುಖಂಡರ ಅಸಮಾಧಾನ ಭುಗಿಲೆದ್ದಿದೆ. ಹಿರಿಯೂರು ತಾಲ್ಲೂಕಿನ ಲಕ್ಕವ್ವನಹಳ್ಳಿ ಸಮೀಪದ ತೋಟದ ಮನೆಯಲ್ಲಿ ಭಾನುವಾರ ರಾತ್ರಿ ಸಚಿವ ಡಿ. ಸುಧಾಕರ್ ನಿಷ್ಠಾವಂತರ ಹೆಸರಿನಲ್ಲಿ ನಡೆದ ಸಭೆಯಲ್ಲಿ ಅಸಮಾಧಾನ ಬಹಿರಂಗಗೊಂಡಿದೆ.

    ಕೆಪಿಸಿಸಿ ಸದಸ್ಯ ಎ.ಎಂ. ಅಮೃತೇಶ್ವರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಹಾಗೂ ಈರಲಿಂಗೇಗೌಡ ಅವರು ಅತಿಯಾದ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾಗಿದೆ. ಸಚಿವ ಡಿ.ಸುಧಾಕರ್ ಅವರು ಇದನ್ನು ನಿಯಂತ್ರಿಸದಿದ್ದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಮೈನವಿರೇಳಿಸಿದ ಜೋಡೆತ್ತಿನ ಬಂಡಿ ಓಟ | ಶಿಳ್ಳೆ, ಕೇಕೆ ಹಾಕಿ ಜನರ ಸಂಭ್ರಮ

    ಖಾದಿ ರಮೇಶ್ ಮತ್ತು ಈರಲಿಂಗೇಗೌಡ ಕಾರ್ಯಕರ್ತರ ಅಹವಾಲುಗಳನ್ನು ಆಲಿಸುವ ಬದಲು ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ ಅವರ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹತ್ತು ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಖಾದಿ ರಮೇಶ್ ಯಾವುದೇ ಕಾರ್ಯಕಾರಿ ಸಮಿತಿ ರಚಿಸಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ ಎಂದು ನಗರಸಭೆ ಸದಸ್ಯ ಜೆ.ಆರ್. ಅಜಯ್‌ ಕುಮಾರ್‌ ದೂರಿದರು.

    ಇದನ್ನೂ ಓದಿ: ನಿರುದ್ಯೋಗಿಗಳಿಗೆ ಸುವರ್ಣವಕಾಶ | ನಿಮಗಾಗಿ ಉದ್ಯೋಗದ ಬಾಗಿಲು ತೆರೆದಿವೆ 500 ಕಂಪನಿಗಳು | ಕೂಡಲೇ ನೋಂದಣಿ ಮಾಡಿ

    ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲೀಂಗೆಗೌಡ ಅವರು ಜೆಡಿಎಸ್ ಚಿಹ್ನೆಯಡಿ ಗೆದ್ದು ನಗರಸಭೆ ಸದಸ್ಯರಾದವರು. ಅವರಿಗೆ ಪಕ್ಷದ ಮೇಲೆ ಗೌರವವಿದ್ದರೆ ಮೊದಲು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು. ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ ತಾಲ್ಲೂಕಿನ ಅಧಿಕಾರಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಪರಿಸ್ಥಿತಿ ಸುಧಾರಿಸದಿದ್ದರೆ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಇದನ್ನೂ ಓದಿ: ಡ್ರಗ್ಸ್‌ ದಂಧೆಕೋರರ ಮೇಲೆ ಪೊಲೀಸ್ ಇಲಾಖೆ ಸದಾ ಕಣ್ಣಿಟ್ಟಿರುತ್ತದೆ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ

    ನಗರಸಭೆ ಮಾಜಿ ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ಯುವ ಮುಖಂಡ ಈರಣ್ಣ ಬಂಡೀಗೌಡ, ಯುವ ಮುಖಂಡ ಪ್ರದೀಪ್, ಜವನಗೊಂಡನಹಳ್ಳಿಯ ಪಿ. ಎಸ್. ಪ್ರಶಾಂತ್, ಶಂಕರ್ ಗಜ, ಹೇಮಂತಗೌಡ, ವಿ.ಕೆ.ಗುಡ್ಡದ ಮಹಲಿಂಗಪ್ಪ, ಮುಕುಂದ, ಚಮನ್ ಷರೀಫ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಗೀತಾ ನಾಗಕುಮಾರ್, ನಾಗೇಂದ್ರನಾಯ್ಕ, ಕಂದಿಕೆರೆ ಸುರೇಶ್ ಬಾಬು, ಚಂದ್ರಪ್ಪ, ತಿಪ್ಪಮ್ಮ, ಕಲ್ಲಟ್ಟಿ ಹರೀಶ್, ಗಿಡ್ಡೋಬನಹಳ್ಳಿ ಅಶೋಕ್, ಗಾಂಧಿನಗರ ಮಹಂತೇಶ್, ರಂಗೇನಹಳ್ಳಿ ಗೋವಿಂದಪ್ಪ, ಸಾದತ್ ಉಲ್ಲಾ, ಜಿ. ದಾದಾಪೀರ್, ರಾಮಾಂಜನೇಯ ಸಭೆಯಲ್ಲಿ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top