Connect with us

    ಡ್ರಗ್ಸ್ ದಂಧೆಕೋರರ ಮೇಲೆ ಪೊಲೀಸ್ ಇಲಾಖೆ ಸದಾ ಕಣ್ಣಿಟ್ಟಿರುತ್ತದೆ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ

    ಡ್ರಗ್ ಮುಕ್ತ ಕ್ಯಾಂಪಸ್’ ಕುರಿತು ಕಾರ್ಯಕ್ರಮವನ್ನು ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಉದ್ಘಾಟಿಸಿದರು.

    ಮುಖ್ಯ ಸುದ್ದಿ

    ಡ್ರಗ್ಸ್ ದಂಧೆಕೋರರ ಮೇಲೆ ಪೊಲೀಸ್ ಇಲಾಖೆ ಸದಾ ಕಣ್ಣಿಟ್ಟಿರುತ್ತದೆ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 21 FRBRUARY 2024

    ಚಿತ್ರದುರ್ಗ: ಒಂದು ದೇಶವನ್ನು ಹಾಳು ಮಾಡಬೇಕಾದರೆ, ಅಲ್ಲಿನ ಯುವ ಸಮುದಾಯವನ್ನು ದಾರಿ ತಪ್ಪಿಸಿದರೆ ಸಾಕು. ಆ ದೇಶದ ಸರ್ವಾಂಗೀಣ ಅಭಿವೃದ್ದಿ ನೆಲ ಕಚ್ಚುವುದರಲ್ಲಿ ಅನುಮಾನವೇ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅಭಿಪ್ರಾಯಪಟ್ಟರು.

    ನಗರದ ಎಸ್‍ಜೆಎಂಐಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಡ್ರಗ್ ಮುಕ್ತ ಕ್ಯಾಂಪಸ್’ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಇದನ್ನೂ ಓದಿ: ಭೂ ಸೇನಾ ನೇಮಕಾತಿಗೆ ಅರ್ಜಿ ಆಹ್ವಾನ

    ಡ್ರಗ್ಸ್ ಸೇವಿಸುವ ನಾಲ್ವರಲ್ಲಿ ಒಬ್ಬರು ಸಾಯುತ್ತಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಡ್ರಗ್ಸ್ ಸೇವನೆಯಿಂದ ಕ್ಯಾನ್ಸರ್, ಸ್ಟ್ರೋಕ್, ಹೃದಯಾಘಾತ ಸಂಭವಿಸುತ್ತವೆ ಎಂದು ಎಚ್ಚರಿಸಿದರು.

    ದೇಶದಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚು ಸದ್ದು ಮಾಡುತ್ತಿದೆ. ಇದನ್ನು ಮಟ್ಟ ಹಾಕುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಿದೆ. ಯುವಕರು ಡ್ರಗ್ಸ್ ದಂಧೆಗೆ ಬಲಿಯಾಗಿ, ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಂಡು ಜೀವ ತೊರೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

    ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ

    ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡುವ ಸಂಸ್ಥೆಗಳ ಆವರಣ, ಹಾಸ್ಟೆಲ್‍ಗಳಲ್ಲಿ ಮಾದಕ ವಸ್ತುಗಳಿಗೆ ಬಲಿಯಾಗುವ ಸ್ನೇಹಿತರಿಗೆ ತಿಳಿವಳಿಕೆ ಹೇಳಿ ಅವರನ್ನು ವ್ಯಸನ ಮುಕ್ತರನ್ನಾಗಿಸಿಬೇಕು ಎಂದು ಸಲಹೆ ನೀಡಿದರು.

    ಡ್ರಗ್ಸ್ ಸೇವನೆ ಹಾಗು ಡ್ರಗ್ಸ್ ಪೆಡ್ಲರ್‍ಗಳ ಕುರಿತು ಸದಾ ಜಾಗೃತರಾಗಿರಬೇಕು. ಇಲ್ಲವಾದಲ್ಲಿ ನಿಮ್ಮ ವಿದ್ಯಾರ್ಥಿ ಜೀವನವೇ ಶೂನ್ಯವಾಗುತ್ತದೆ. ವಿದ್ಯಾರ್ಥಿ ಜೀವನವನ್ನು ಸಮರ್ಥವಾಗಿ ಬಳಸಿಕೊಂಡು, ಉತ್ತಮ ಪ್ರಜೆಗಳಾಗಿ ತಂದೆ-ತಾಯಿಂದಿರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ನಿಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

    ಇದನ್ನೂ ಓದಿ: ಬೋರ್‍ವೆಲ್ ಕೊರೆಯಿಸುವುದು ಕೊನೆಯ ಆಯ್ಕೆಯಾಗಿರಲಿ

    ವಿದ್ಯಾರ್ಥಿಗಳು, ಸಾರ್ವಜನಿಕರು ಡ್ರಗ್ಸ್ ಪೆಡ್ಲರ್‍ಗಳ ಬಗ್ಗೆ ಪೊಲೀಸ್ ಇಲಾಖೆಯ ಸಹಾಯವಾಣಿ, ಫೇಸ್‍ಬುಕ್, ಟ್ವಟರ್, ವಾಟ್ಸಪ್, ಇ-ಮೇಲ್ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಬಹುದು, ಖಚಿತ ಮಾಹಿತಿಯೊಂದಿಗೆ ಡ್ರಗ್ಸ್ ಪೆಡ್ಲರ್‍ಗಳ ಮೂಲಗಳನ್ನು ಹುಡುಕಿ ಅಂತವರ ವಿರುದ್ದ ನಮ್ಮ ಪೋಲಿಸ್ ಇಲಾಖೆಯು ಸೂಕ್ತ ಕ್ರಮ ಕೃಗೊಳ್ಳುತ್ತದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಕೈ ಜೋಡಿಸಿಬೇಕು ಎಂದು ಮನವಿ ಮಾಡಿದರು.

    ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ

    ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ

    ಎಸ್‍ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ.ಭರತ್ ಮಾತನಾಡಿ, ವಿದ್ಯಾರ್ಥಿಗಳು ಆರಂಭದಲ್ಲಿ ಕುತೂಹಲಕ್ಕಾಗಿ ಡ್ರಗ್ಸ್ ಸೇವಿಸುತ್ತಾರೆ. ಆದರೆ, ಆನಂತರ ಅದರಿಂದ ಹೊರಬಾರದಷ್ಟು ದಾಸರಾಗುತ್ತಾರೆ ಎಂದು ಎಚ್ಚರಿಸಿದರು.

    ಇದನ್ನೂ ಓದಿ: ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಒಂದು ತಿಂಗಳು ನೀರು

    ಡ್ರಗ್ಸ್ ಸೇವಿಸುವುದು, ಸಾಗಣಿಕೆ ಮಾಡುವುದು, ಡ್ರಗ್ಸ್ ಪೆಡ್ಲರ್‍ಗಳ ಜೊತೆ ನೇರ ಅಥವಾ ಪರೋಕ್ಷವಾಗಿ ವ್ಯವಹರಿಸುವುದು ಸಹಾ ಅಪರಾಧವಾಗುತ್ತದೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳು ನಮ್ಮ ಸಂಸ್ಥೆಯಲ್ಲಿ ನಡೆಯದಂತೆ ಮುನ್ನೆಚ್ಚರಿಕೆಯನ್ನು ವಹಿಸಿ ಮಾದಕ ವಸ್ತು ಮುಕ್ತ ಕ್ಯಾಂಪಸ್ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಪೊರೆನ್ಸಿಕ್ ವಿಭಾಗದ ಪ್ರೊ.ಕೃಷ್ಣ ಮಾತನಾಡಿ, ಮೆಥಾಂಫೆಟೈನ್ ಡ್ರಗ್ಸ್, ಕೋಕೇನ್, ಗಾಂಜಾ, ಅಫೀಮು ಅತಿ ಹೆಚ್ಚು ಅಪಾಯಕಾರಿ. ಡ್ರಗ್ಸ್ ಸೇವೆನೆಯು ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಸಮಸ್ಯೆ ಮಾಡುತ್ತದೆ ಎಂದರು.

    ಇದನ್ನೂ ಓದಿ: ಅಡಿಕೆ ಧಾರಣೆ | ಫೆಬ್ರವರಿ 20 | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್

    ಡ್ರಗ್ಸ್ ಸೇವಿಸುವವರು ಸಂಪೂರ್ಣ ಕ್ರಿಯಾಶೀಲತೆ ಕಳೆದುಕೊಳ್ಳುತ್ತಾರೆ. ಇಂತಹ ವ್ಯಸನಿಗಳಿಗೆ ಆಪ್ತ ಸಮಾಲೋಚನೆ ತುಂಬಾ ಸಹಕಾರಿಯಾಗಿರುತ್ತದೆ. ಅತಿ ಹೆಚ್ಚು ವ್ಯಸನಿಗಳಾಗಿದ್ದರೆ ವ್ಯಸನ ಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

    ಎನ್‍ಎಸ್‍ಎಸ್ ಸಂಯೋಜಕ ಡಾ.ನಿರಂಜನ್, ನಿಲಯಪಾಲಕರಾದ ಡಾ.ಜೆ.ಸತೀಶ್, ಪ್ರೊ.ತನುಜಾ ಸೇರಿದಂತೆ ವಿವಿಧ ಇಲಾಖಾ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top