CHITRADURGA NEWS | 16 JANUARY 2024
ಚಿತ್ರದುರ್ಗ (CHITRADURGA): ಇಲ್ಲಿನ ಬಸವೇಶ್ವರ ವಧು ವರರ ಮಾಹಿತಿ ಕೇಂದ್ರದಿಂದ ಜ.21 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸರ್ವಧರ್ಮ ವಧು ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಅಡಿಕೆ ಬೆಳೆಗೆ ಹನಿ ನೀರಾವರಿ, ನರೇಗಾ ಸೌಲಭ್ಯಕ್ಕೆ ಸಚಿವರ ಒಪ್ಪಿಗೆ

ಅಂದು ಬೆಳಿಗ್ಗೆ 11ಗಂಟೆಗೆ ಬೆಂಗಳೂರಿನ ಗಾಂಧಿನಗರದ, ಎರಡನೇ ಮುಖ್ಯ ರಸ್ತೆಯ ಮಹಾರಾಷ್ಟ್ರ ಮಂಡಳದ ಸಭಾಂಗಣದಲ್ಲಿ ಸಮಾವೇಶ ನಡೆಯಲಿದೆ. ಬೆಂಗಳೂರು ಸರ್ಪ ಭೂಷಣ ಶಿವಯೋಗಿಗಳ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಬೆಳಗಾವಿ ಜಿಲ್ಲೆ ಶಿರಸಂಗಿ ಮಹಲಿಂಗೇಶ್ವರ ಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ ಸಮಾವೇಶದ ಸಾನಿಧ್ಯವಹಿಸಲಿದ್ದಾರೆ.
ಇದನ್ನೂ ಓದಿ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ | ಸ್ಥಳದಲ್ಲೇ ಮೃತಪಟ್ಟ ಸುಚಿತ್ರಾ
ಬಸವೇಶ್ವರ ವಧು ವರರ ಮಾಹಿತಿ ಕೇಂದ್ರವು 1996-97ರಲ್ಲಿ ಪ್ರಾರಂಭಗೊಂಡು ಈವರೆಗೂ ರಾಜ್ಯದ ವಿವಿಧೆಡೆ ಸಮಾವೇಶ ಆಯೋಜಿಸಿ ಯಶಸ್ವಿಯಾಗಿದೆ. ಒಂದು ಜಾತಿ, ಜನಾಂಗ, ಧರ್ಮಕ್ಕೆ ಸೀಮಿತವಾಗಿರದೆ ಎಲ್ಲರನ್ನೊಳಗೊಂಡ ವಧು ಹಾಗೂ ವರರ ಪರಸ್ಪರ, ಭೇಟಿ ಚರ್ಚೆ ನಡೆದು ಮುಂದೆ ಒಪ್ಪಿಕೊಂಡು ಕಲ್ಯಾಣ ಮಹೋತ್ಸವಗಳು ನಡೆಯಲು ಒಂದು ವೇದಿಕೆಯಾಗಿದೆ.
ಎಷ್ಟೋ ಮದುವೆಗಳು ಈಗಾಗಲೇ ನಡೆದಿವೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮಾಹಿತಿ ಕೇಂದ್ರದ ಸಂಚಾಲಕ ಹಾಗೂ ವ್ಯವಸ್ಥಾಪಕ ಜೆ.ಎಂ.ಜಂಬಯ್ಯ (9980658625) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
