ಮುಖ್ಯ ಸುದ್ದಿ
ಯುವಕರಲ್ಲಿ ಶ್ರೀರಾಮ ಟ್ಯಾಟೂ ಟ್ರೆಂಡ್ | ಎದೆ, ಕೈ ಮೇಲೆ ಅರಳಿದ ಅಯೋಧ್ಯೆ

CHITRADURGA NEWS | 22 JANUARY 2024
ಚಿತ್ರದುರ್ಗ (CHITRADURGA): ದೇಶದ ಎಲ್ಲೆಡೆ ಮೊಳಗುತ್ತಿದೆ ಶ್ರೀರಾಮ ಜಯಘೋಷ. ಕೋಟ್ಯಂತರ ಹಿಂದೂಗಳ ಐದು ದಶಕಗಳ ಕನಸು ಈಡೇರಿದ್ದು, ಈ ಸಂಭ್ರಮವನ್ನು ಯುವಕರು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಗುಡ್ಡದ ನೇರಲಕೆರೆಗೆ ಶ್ರೀರಾಮನ ಸ್ಪರ್ಶ | ಪಾದುಕೆ ದರ್ಶನ | ಪ್ರತಿದಿನ ಶಾಸ್ತ್ರೋಕ್ತ ಪೂಜೆ
ಕೋಟೆನಾಡು ಚಿತ್ರದುರ್ಗದಲ್ಲಿ ಹಬ್ಬದ ವಾತಾವರಣ ಮೂಡಿದೆ. ಈ ನಡುವೆ ಯುವ ಸಮುದಾಯ ಪ್ರಭು ಶ್ರೀರಾಮನ ಟ್ಯಾಟೂ ಹಾಕಿಸಿಕೊಂಡು ಭಕ್ತಿ ಮೆರೆಯುತ್ತಿದ್ದಾರೆ.

ಇದನ್ನೂ ಓದಿ: ಭವಿಷ್ಯ ನುಡಿಯುವ ಗಂಗೆ ಹೊಂಡ | ರಾಮಗಿರಿಯಲ್ಲಿ ಒಂದು ದಿನ ತಂಗಿದ್ದ ಪ್ರಭು ಶ್ರೀರಾಮ
ಅಯೋಧ್ಯೆಯಲ್ಲಿ ರಾಮಲಲ್ಲ ಪ್ರತಿಷ್ಠಾಪನೆಗೆ ಸಿದ್ಧತೆಗಳು ಪ್ರಾರಂಭವಾಗುತ್ತಿದ್ದಂತೆ ಚಿತ್ರದುರ್ಗದಲ್ಲಿ ಯುವಕರು ಅಯೋಧ್ಯೆ ರಾಮ ಮಂದಿರ, ರಾಮ-ಹನುಮಂತನ ಟ್ಯಾಟೂ ಹಾಕಿಸಿಕೊಂಡಿದ್ದಾರ. ಕೆಲ ದಿನಕ್ಕೆ ಟ್ರೆಂಡ್ ಶುರುವಾಗಿ 150ಕ್ಕೂ ಹೆಚ್ಚು ಜನರ ಕೈ, ಎದೆಯ ಮೇಲೆ ಪ್ರಭು ಶ್ರೀರಾಮನ ಚಿತ್ರ ಮೂಡಿದೆ.

ಚಿತ್ರದುರ್ಗದ ಕಲಾವಿದ ಮಣಿ ಎಂಬವರು ಯುವಕರಿಗೆ ಟ್ಯಾಟೂ ಹಾಕಿದ್ದು, ಒಂದಕ್ಕಿಂತ ಒಂದು ಆಕರ್ಷಿಸುತ್ತಿವೆ. ಎದೆ , ಕೈ ಮೇಲೆ ಮೇಲೆ ಟ್ಯಾಟೂ ಕಾಣಿಸುತ್ತಿವೆ.
