
CHITRADURGA NEWS | 20 JUNE 2026
ಚಿತ್ರದುರ್ಗ: ಹಿರಿಯ ಪತ್ರಕರ್ತರು, ಸಾಹಿತಿಗಳು, ಅನುಭಾವಿಗಳು ಆಗಿದ್ದ ಜಿ.ಎಸ್.ಉಜ್ಜಿನಪ್ಪ(87) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ:Novel: ನಾಳೆಯಿಂದ ನಿಮ್ಮ ಮುಂದೆ | ಹಬ್ಬಿದಾ ಮಲೆ ಮಧ್ಯದೊಳಗೆ | ಬಯಲು ಸೀಮೆಯ ಮಹಾಕಾದಂಬರಿ
ಮೃತ ಉಜ್ಜಿನಪ್ಪ ಅವರ ಪಾರ್ಥೀವ ಶರೀರವನ್ನು ಸರಸ್ವತಿ ನಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮೃತರು ಓರ್ವ ಪುತ್ರ, ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಗೆಳೆಯರು, ಬಂಧುಗಳನ್ನು ಅಗಲಿದ್ದಾರೆ.
ಟೈಮ್ಟ್ ಆಫ್ ಇಂಡಿಯಾ ಪತ್ರಿಕೆಗೆ ಸುಧೀರ್ಘ ಅವಧಿಗೆ ಚಿತ್ರದುರ್ಗ ಜಿಲ್ಲಾ ವರದಿಗಾರರಾಗಿದ್ದ ಜಿ.ಎಸ್.ಉಜ್ಜಿನಪ್ಪ ಅವರು, ಜಿಲ್ಲೆಯ ವಿಕಿಪೀಡಿಯಾದಂತೆ ಅಪಾರ ನೆನಪಿನ ಶಕ್ತಿ ಹೊಂದಿದ್ದರು.
ಯಾವುದೇ ವಿಚಾರಕ್ಕಾದರೂ ಥಟ್ ಅಂತಾ ನೆನಪಾಗುತ್ತಿದ್ದು ಉಜ್ಜಿನಪ್ಪ ಅವರು. ಪತ್ರಕರ್ತರ ಪಾಲಿಗೆ ಗೈಡ್ ಆಗಿ, ಕೃಷಿ, ಗ್ರಾಮೀಣ ಬದುಕಿನ ಬಗ್ಗೆ ಅಪಾರ ಕಾಳಜಿ ಹೊಂದಿ ಮಾರ್ಗದರ್ಶನ ಮಾಡುತ್ತಿದ್ದರು.
ಇದನ್ನೂ ಓದಿ:ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
ಕವಿಗಳಾದ ದ.ರಾ.ಬೇಂದ್ರ, ಜಿ.ಎಸ್.ಶಿವರುದ್ರಪ್ಪ ಅವರ ಜೊತೆಗೂ ಒಡನಾಟ ಹೊಂದಿದ್ದ ಅವರು, ಅವರ ಕಾವ್ಯಗಳನ್ನು ತಾಸುಗಟ್ಟಲೇ ನಿರರ್ಗಳವಾಗಿ ಹಾಡುತ್ತಿದ್ದರು.
ಜಿ.ಎಸ್.ಉಜ್ಜಿನಪ್ಪ ಅವರು ಜನಿಸಿದ ಹಿರಿಯೂರು ತಾಲೂಕಿನ ಗೌನಹಳ್ಳಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು, ಹುಟ್ಟೂರಿನ ಬಗ್ಗೆ ಮೂರು ಕೃತಿಗಳನ್ನು ರಚಿಸಿದ್ದರು.
ಇದನ್ನೂ ಓದಿ:ಮೂರು ತಿಂಗಳಲ್ಲಿ ತಾಲ್ಲೂಕಿನ ಕೆರೆಗಳಿಗೆ ನೀರು | ಶಾಸಕ ಡಾ.ಎಂ.ಚಂದ್ರಪ್ಪ
ಗೌನಹಳ್ಳಿಯ ಪರಿಸರವೇ ಚೇತೋಹಾರಿ ಎನ್ನುತ್ತಿದ್ದ ಅಜ್ಜ, ʼಗೌನಳ್ಳೇರುʼ, ʼಗೌನಹಳ್ಳಿ ಎಂಬ ಗ್ರಾಮ ಭಾರತʼ, ʼಹಬ್ಬಿದಾ ಮಲೆ ಮಧ್ಯದೊಳಗೆʼ ಎಂಬ ಕೃತಿಗಳನ್ನು ಹುಟ್ಟಿದ ಊರಿನ ಕುರಿತು ಬರೆದಿದ್ದರು.
ಜಿ.ಎಸ್.ಉಜ್ಜಿನಪ್ಪ ಅವರ ಸಂಕ್ಷಿಪ್ತ ಪರಿಚಯ:
ಜಿ.ಎಸ್. ಉಜ್ಜನಪ್ಪ, ಜನಿಸಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಗೌನಹಳ್ಳಿಯ ಕೃಷಿಕ ದಂಪತಿ ಗೊಂಚಿಕಾರ್ ಸಿದ್ದಯ್ಯ ಮತ್ತು ಲಿಂಗಮ್ಮನವರ ಹಿರಿಯ ಮಗನಾಗಿ ಅಕ್ಟೋಬರ್ 30, 1939ರಂದು (ದಾಖಲೆಗಳಲ್ಲಿ 18-5-1939) ಜನನ. ಮೈಸೂರು ವಿ.ವಿ. ಯಿಂದ ಬಿ.ಎ., (1962), ಬೆಂಗಳೂರಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‍ನಿಂದ ಸ್ನಾತಕೋತ್ತರ ಡಿ.ಎಸ್.ಎಸ್.ಎ., (1965).
ಗುಲ್ಬರ್ಗಾದ ‘ನವಕಲ್ಯಾಣ’ ವಾರಪತ್ರಿಕೆ ಜತೆ ಸಂಪರ್ಕ (ಆರಂಭ-1966), ಚಿತ್ರದುರ್ಗ ಬೃಹನ್ಮಠದ ಕನ್ನಡ ತ್ರೈಮಾಸಿಕ ‘ಗುರುಕುಲ’ದ ಸಂಪಾದಕ (ಆರಂಭ-1969).
ಇದನ್ನೂ ಓದಿ:ಪಿಎಂ ಆವಾಸ್ (ನಗರ) ಯೋಜನೆ | ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
‘ಸೋಬಾನೆ ಸಿದ್ಧಮ್ಮ- ನೀಲಮ್ಮರ ಆತ್ಮಕಥನ’ ರಾಜ್ಯ ಜಾನಪದ ಅಕಾಡೆಮಿಯಿಂದ ಪ್ರಕಟಿತ ಕೃತಿ ‘ಮನದಾಳದ ಕನಸುಗಳು’ ಸಂಕಲನದಲ್ಲಿನ ಕಥೆ ‘ಕೆಂಪಕ್ಕಳ ಬಾದ್ದೂರ’ಕ್ಕೆ ಹಿರಿಯೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ, ಹಾಗೂ 2017ರ ಸಾಲಿನ ಡಾ. ಮೀರಾಸಾಬಿಹಳ್ಳಿ ಶಿವಣ್ಣನವರ ‘ಸಾಹಿತ್ಯಶ್ರೀ’ ಪ್ರಶಸ್ತಿ ಸೇರದಂತೆ ಹಲವು ಪುರಸ್ಕಾರಗಳು ಅವರನ್ನು ಹರಸಿ ಬಂದಿವೆ.
ಹಿರಿಯರು, ಅನುಭವದ ಗಣಿಯೇ ಆಗಿದ್ದ ಜಿ.ಎಸ್.ಉಜ್ಜಿನಪ್ಪ ಅವರು ಯಾವುದಾದರೂ ವಿಚಾರಕ್ಕೆ ಥಟ್ಟನೇ ನೆನಾಪಗುತ್ತಿದ್ದರು. ಯಾವುದೇ ವಿಷಯವಾದರೂ ಅವರ ನೆನಪಿನ ಶಕ್ತಿ ಅಗಾಧವಾಗಿತ್ತು. ಸಮಾಜಕ್ಕೆ ಮಾರ್ಗದರ್ಶಕರಾಗಿ, ಕಿರಿಯ ಪೀಳಿಗೆಗೆ ದಾರಿ ದೀಪವಾಗಿದ್ದರು. ಅವರ ಅಗಲಿಕೆಯಿಂದ ಜಿಲ್ಲೆಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಅಗಲಿಕೆಯ ಶಕ್ತಿ ಭರಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ .
| ಶ್ರೀ ಶಾಂತವೀರ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ,, ಹೊಸದುರ್ಗ
ಎಂಎಲ್ಸಿ ಕೆ.ಎಸ್.ನವೀನ್ ಸಂತಾಪ:
ಜಿ.ಎಸ್.ಉಜ್ಜಿನಪ್ಪ ಅವರು ಅಪಾರ ಅನುಭವಿಗಳು. ನಮ್ಮ ತಂದೆ ಜೊತೆಗೆ ನಿಕಟ ಒಡನಾಟ ಹೊಂದಿದ್ದರು. ಇತ್ತೀಚೆಗೆ ನಮ್ಮ ತಂದೆ ಕೆ.ಆರ್.ಶಿವಪ್ರಕಾಶ್ ನಿಧನರಾದಾಗ ಅವರ ಕುರಿತು ಅನುಭವಗಳನ್ನು ಹಂಚಿಕೊಳ್ಳಲು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಅವರ ಅಗಲಿಕೆಯಿಂದ ಬಹಳ ನೋವಾಗಿದೆ. ಅವರ ಕುಟುಂಬ, ಬಂಧು, ಬಳಗ ಸ್ನೇಹಿತರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ಸಿಗಲಿ.
ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ:
ಹಿರಿಯ ಪತ್ರಕರ್ತರಾದ ಜಿ.ಎಸ್.ಉಜ್ಜಿನಪ್ಪ ಅವರ ನಿಧನಕ್ಕೆ ಜಿಲ್ಲೆಯ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಧ್ಯಹ್ನ 12 ಗಂಟೆಗೆ ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಜಿ.ಎಸ್.ಉಜ್ಜಪನಪ್ಪ ಅವರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ.
ಚಿತ್ರದುರ್ಗ ನ್ಯೂಸ್ ನುಡಿನಮನ:
ಹಿರಿಯರಾದ ಜಿ.ಎಸ್.ಉಜ್ಜಿನಪ್ಪ ಅವರು ತಮ್ಮ ಇಷ್ಟ ಕೃತಿ ಹಬ್ಬಿದಾ ಮಲೆ ಮಧ್ಯದೊಳಗೆ ಕೃತಿಯನ್ನು ಚಿತ್ರದುರ್ಗ ನ್ಯೂಸ್ ವೆಬ್‌ಸೈಟ್‌ನಲ್ಲಿ ಪ್ರತಿ ವಾರ ಅಂಕಣದಂತೆ ಪ್ರಕಟಿಸಲು ಅಭಿಮಾನದಿಂದ ಕೊಟ್ಟಿದ್ದರು. ಒಂದು ವರ್ಷ ಕಾಲ ಚಿತ್ರದುರ್ಗ ನ್ಯೂಸ್‌ನಲ್ಲಿ ಈ ಬೃಹತ್ ಕಾದಂಬರಿ ಸರಣಿ ರೂಪದಲ್ಲಿ ಪ್ರಕಟವಾಗುವ ಮೂಲಕ ಸಾವಿರಾರು ಓದುಗರು ಅಜ್ಜನ ಬರವಣಿಗೆಯ ಸ್ವಾದವನ್ನು ಅನುಭವಿಸಿದ್ದರು.

ಚಿತ್ರದುರ್ಗ ನ್ಯೂಸ್ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಹೊಂದಿದ್ದ ಪ್ರೀತಿಯ ಅಜ್ಜ ಉಜ್ಜಿನಪ್ಪ ಅವರಿಗೆ ಚಿತ್ರದುರ್ಗ ನ್ಯೂಸ್ ತಂಡ ಕಂಬನಿ ಮಿಡಿದಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
