
CHITRADURGA NEWS | 20 JUNE 2026
ತುಪ್ಪವನ್ನು ಅಡುಗೆಯಲ್ಲಿ, ಸಿಹಿತಿಂಡಿಗಳನ್ನು ತಯಾರಿಸಲು ಬಳಸುತ್ತಾರೆ. ಇದು ಅಡುಗೆಯ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಅಲ್ಲದೇ ತುಪ್ಪವು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದಂತೆ ಮಾತ್ರವಲ್ಲ ಇದು ಚರ್ಮದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯಂತೆ. ಹಾಗಾದ್ರೆ ತುಪ್ಪವು ಚರ್ಮಕ್ಕೆ ಹೇಗೆ ಪ್ರಯೋಜನಕಾರಿ? ಅದರಿಂದ ಚರ್ಮಕ್ಕಾಗುವ ಪ್ರಯೋಜನಗಳೇನು? ಎಂಬುದನ್ನು ತಿಳಿಯಿರಿ.

ತುಪ್ಪವು ಚರ್ಮದ ಹೊಳಪನ್ನು ಹೆಚ್ಚಿಸಲು ಹೇಗೆ ಸಹಕಾರಿ?
ತುಪ್ಪದಲ್ಲಿ A, E, ಮತ್ತು K ನಂತಹ ಕೊಬ್ಬು-ಕರಗುವ ಜೀವಸತ್ವಗಳಲ್ಲಿ ಸಮೃದ್ಧವಾಗಿದೆ. ಇವು ಚರ್ಮದ ಕೋಶಗಳನ್ನು ಸರಿಪಡಿಸಲು ಮತ್ತು ಚರ್ಮದ ರಕ್ಷಣಾತ್ಮಕ ಪದರವನ್ನು ಬಲವಾಗಿಡಲು ಉಪಯುಕ್ತವಾಗಿವೆ. ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿದ್ದಾಗ, ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಸ್ಪಷ್ಟ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ಜೀರ್ಣಕ್ರಿಯೆ ಸರಿಯಾಗಿಲ್ಲದಿದ್ದರೆ, ಅದು ದೇಹದಲ್ಲಿ ಉರಿಯೂತವನ್ನು ಪ್ರಚೋದಿಸುತ್ತದೆ. ಇದು ಮೊಡವೆ, ಎಸ್ಜಿಮಾ ಮತ್ತು ಚರ್ಮದ ಸೂಕ್ಷ್ಮತೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ .
ತುಪ್ಪದಿಂದ ಚರ್ಮಕ್ಕಾಗುವ ಪ್ರಯೋಜನಗಳು
ನೈಸರ್ಗಿಕ ಮಾಯಿಶ್ಚರೈಸರ್: ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ಚರ್ಮದ ಒಳ ಪದರಗಳನ್ನು ಭೇದಿಸಿ ತೇವಾಂಶವನ್ನು ಒದಗಿಸುತ್ತವೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿರುತ್ತದೆ. ಒಣ ಚರ್ಮ ಹೊಂದಿರುವವರಿಗೆ ಇದು ಒಂದು ಉತ್ತಮ ವರದಾನವಾಗಿದೆ.
ವಯಸ್ಸಿನ ಕಲೆಗಳನ್ನು ಕಡಿಮೆ ಮಾಡುತ್ತದೆ: ತುಪ್ಪದಲ್ಲಿರುವ ವಿಟಮಿನ್ ಎ, ಡಿ, ಇ ಮತ್ತು ಕೆ ಚರ್ಮದ ಮೇಲಿನ ನೆರಿಗೆಗಳನ್ನು ತೆಗೆದುಹಾಕಿ ಚರ್ಮವನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ಹೊಳೆಯುವ ಚರ್ಮಕ್ಕಾಗಿ: ತುಪ್ಪವನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದ ಮೇಲಿನ ಕಪ್ಪು ಕಲೆಗಳು ಕಡಿಮೆಯಾಗುತ್ತವೆ ಮತ್ತು ಚರ್ಮವು ಹೊಳೆಯುತ್ತದೆ.
ಕಣ್ಣುಗಳ ಕೆಳಗಿನ ಡಾರ್ಕ್ ಸರ್ಕಲ್‍ಗೆ: ತುಪ್ಪವು ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್‍ಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ತುಪ್ಪಕ್ಕೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ
ಒಂದು ಚಮಚ ತುಪ್ಪ, ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಿಟಿಕೆ ಅರಿಶಿನವನ್ನು ತೆಗೆದುಕೊಂಡು ಇವುಗಳನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಸುಮಾರು 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತೊಳೆಯಿರಿ. ಇದು ಚರ್ಮವನ್ನು ಶುದ್ಧೀಕರಿಸುತ್ತದೆ ಮತ್ತು ಹೊಳಪನ್ನು ನೀಡುತ್ತದೆ.
ಹಸುವಿನ ತುಪ್ಪದಿಂದ ಮುಖದ ಮಸಾಜ್
ರಾತ್ರಿ ಮಲಗುವ ಮುನ್ನ ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖ ಮೃದು ಮತ್ತು ಕಾಂತಿಯುತವಾಗುತ್ತದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
