ಮುಖ್ಯ ಸುದ್ದಿ
PUC ಪರೀಕ್ಷೆ-2 ಫಲಿತಾಂಶ | ಜಿಲ್ಲೆಯಲ್ಲಿ ಶೇ.27.07 ರಷ್ಟು ವಿದ್ಯಾರ್ಥಿಗಳು ಪಾಸ್

CHITRADURGA NEWS | 23 MAY 2024
ಚಿತ್ರದುರ್ಗ: ಜಿಲ್ಲೆಯಲ್ಲಿ 2024ರ ಏಪ್ರಿಲ್ 29 ರಿಂದ ಮೇ 16 ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಗೆ ಪರೀಕ್ಷೆ-2ರಲ್ಲಿ ಶೇ.27.07 ಫಲಿತಾಂಶ ಲಭಿಸಿದೆ.
ಇದನ್ನೂ ಓದಿ: ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ಕಾರ್ಯಾಚರಣೆ | 76 ಪ್ರಕರಣ ದಾಖಲು | 6100 ದಂಡ ವಸೂಲಿ
ಕಲಾವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 1852 ವಿದ್ಯಾರ್ಥಿಗಳ ಪೈಕಿ 385 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 1012 ವಿದ್ಯಾರ್ಥಿಗಳ ಪೈಕಿ 191 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 1735 ವಿದ್ಯಾರ್ಥಿಗಳ ಪೈಕಿ 669 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 4599 ವಿದ್ಯಾರ್ಥಿಗಳ ಪೈಕಿ 1245 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಇದನ್ನೂ ಓದಿ: ರೈತರಿಗೆ ಶಿಮುಲ್‍ನಿಂದ ಗುಡ್‍ನ್ಯೂಸ್ | ಹೈನುಗಾರಿಕೆ ಉತ್ತೇಜನಕ್ಕೆ 1.20 ಕೋಟಿ | ಉಚಿತ ಹಸಿರು ಮೇವಿನ ಬೀಜಗಳ ಮಿನಿ ಕಿಟ್ ಹಂಚಿಕೆ
ಪರೀಕ್ಷೆಗೆ ಹಾಜರಾದ 3590 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 1095 ತೇರ್ಗಡೆಯಾಗಿದ್ದಾರೆ. 829 ಪುನಾರಾವರ್ತಿತ ವಿದ್ಯಾರ್ಥಿಗಳ ಪೈಕಿ 118 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗೂ 180 ಖಾಸಗಿ ವಿದ್ಯಾರ್ಥಿಗಳ ಪೈಕಿ 32 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ
ನಗರ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ 3293 ವಿದ್ಯಾರ್ಥಿಗಳ ಪೈಕಿ 946 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಹಾಜರಾದ 1306 ವಿದ್ಯಾರ್ಥಿಗಳ ಪೈಕಿ 299 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ತಿಳಿಸಿದ್ದಾರೆ.
