ಮುಖ್ಯ ಸುದ್ದಿ
ಚಿತ್ರದುರ್ಗದಲ್ಲಿ ವೈಶಾಖಾ ಬುದ್ಧ ಪೂರ್ಣಿಮೆ | ಮಾಜಿ ಶಾಸಕಿ ಪೂರ್ಣಿಮಾ, ಕೆ.ಸಿ.ನಾಗರಾಜ್ ಭಾಗೀ

CHITRADURGA NEWS | 24 MAY 2024
ಚಿತ್ರದುರ್ಗ: ನಗರದ ಕೋಟೆ ನಾಡು ಬುದ್ಧ ವಿಹಾರ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ವೈಶಾಖ ಬುದ್ಧ ಪೂರ್ಣಿಮೆ ಜಯಂತಿ ಕಾರ್ಯಕ್ರಮಕ್ಕೆ ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಭಾಗವಹಿಸಿ ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು.
ಇದನ್ನೂ ಓದಿ: PUC ಪರೀಕ್ಷೆ-2 ಫಲಿತಾಂಶ | ಜಿಲ್ಲೆಯಲ್ಲಿ ಶೇ.27.07 ರಷ್ಟು ವಿದ್ಯಾರ್ಥಿಗಳು ಪಾಸ್

ಈ ವೇಳೆ ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಇಂದಿನ ಯುವ ಪೀಳಿಗೆ ಸಮಾಜದ ದಾರಿದೀಪಗಳಾದ ಬುದ್ದ, ಬಸವ ಹಾಗೂ ಅಂಬೇಡ್ಕರ್ ಅಂತಹ ಮಹಾನೀಯರ ತತ್ವಾದರ್ಶಗಳನ್ನು ಅರಿತು, ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಆಶಯದ ಸಮಾಜ ಕಟ್ಟಲು ಸಾಧ್ಯ ಎಂದರು.
ಪಾಶ್ಚಾತ್ಯ ಸಂಸ್ಕೃತಿಯ ಆಚರಣೆಗಳನ್ನು ಆಚರಿಸುವ ಬದಲು ಇಂತಹ ಮಹಾನೀಯರ ಆಚರಣೆಗಳು ಶಾಲಾ ಕಾಲೇಜುಗಳಲ್ಲಿ ನಡೆಯಬೇಕು. ಅದರಲ್ಲೂ ಈ ದೇಶದ ಭವಿಷ್ಯದ ರೂವಾರಿಗಳಾದ ವಿದ್ಯಾರ್ಥಿಗಳಿಗೆ ಅವರ ಆಲೋಚನೆಗಳು ತಲುಪಬೇಕು. ಆಗ ಸಮ ಸಮಾಜದ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: ಡೆಂಗ್ಯೂಜ್ವರದ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆ ಸಿದ್ಧ
ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಮಾನವ ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ. ಇಂದಿನ ಯುವ ಸಮೂಹ ಪಾಶ್ಚಾತ್ಯ ಸಂಸ್ಕೃತಿಯ ಬದಲು ಬುದ್ದ, ಬಸವ ಹಾಗೂ ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಬದುಕು ಸಾಗಿಸಬಹುದು. ಬೌದ್ಧ ಅನುಯಾಯಿಗಳಿಗೆ ಯಾವುದೇ ಸಹಾಯ, ಸಹಕಾರ ಮಾಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ಕಾರ್ಯಾಚರಣೆ | 76 ಪ್ರಕರಣ ದಾಖಲು | 6100 ದಂಡ ವಸೂಲಿ
ಆರ್ಥಿಕ ವಿಶ್ಲೇಷಕ ಹಾಗೂ ಚಿಂತಕ ಜಿ.ಎನ್.ಮಲ್ಲಿಕಾರ್ಜನಪ್ಪ ಮಾತನಾಡಿ, ಜಗತ್ತಿನ ಮೊದಲ ವಿಜ್ಞಾನಿ ಗೌತಮ ಬುದ್ಧ. ಆಧುನಿಕ ಸಮಾಜದ ತಲ್ಲಣಗಳು, ಪರಿಸರ ಮಾಲಿನ್ಯ, ಆರ್ಥಿಕ ಅಸಮಾನತೆ, ಅಸಮತೋಲನ ಇನ್ನೂ ಮುಂತಾದ ಸಮಸ್ಯೆಗಳಿಗೆ ಪರಿಹಾರವೇ ಬುದ್ಧನ ಚಿಂತನೆಗಳನ್ನು ಅನುಸರಿಸುವುದು.
ಆಡಳಿತ ನಿರ್ವಹಣಾ ಶಾಸ್ತ್ರ ಪಿತಾಮಹ ಪೀಟರ್ ಅಭಿಪ್ರಾಯದಂತೆ, ಬುದ್ಧನ ಚಿಂತನೆಗಳ ನೆಲೆಯಲ್ಲಿನ ಮಾನವ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ. ಆಲ್ಬರ್ಟ್ ಐನ್‌ಸ್ಟೈನ್ ಹೇಳಿದಂತೆ ಬುದ್ದನ ಚಿಂತನೆಗಳನ್ನು ಪ್ರಯೋಗ, ಪರಿಶೀಲನೆಗೆ ಒಳಪಡಿಸಿದರೆ ಆಧುನಿಕ ವಿಜ್ಞಾನದ ಮರು ಹುಟ್ಟು ಕಾಣಬಹುದು ಎಂದರು.
ಇದನ್ನೂ ಓದಿ: ರೈತರಿಗೆ ಶಿಮುಲ್‍ನಿಂದ ಗುಡ್‍ನ್ಯೂಸ್ | ಹೈನುಗಾರಿಕೆ ಉತ್ತೇಜನಕ್ಕೆ 1.20 ಕೋಟಿ | ಉಚಿತ ಹಸಿರು ಮೇವಿನ ಬೀಜಗಳ ಮಿನಿ ಕಿಟ್ ಹಂಚಿಕೆ
ಈ ಸಂದರ್ಭದಲ್ಲಿ ಬಿ.ಎಸ್.ಐ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಮ್ಮ, ಹಿರಿಯ ಸಾಹಿತಿ ಪ್ರೋ.ಎಚ್.ಲಿಂಗಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಡಿ.ಟಿ.ಜಗನ್ನಾಥ್, ಮಾಜಿ ನಗರಸಭೆ ಅಧ್ಯಕ್ಷ ನಿರಂಜನ ಮೂರ್ತಿ, ಬಾಕ್ಸ್ ಬಿಎಸ್‌ಐ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಪಿ.ಪ್ರೇಮನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
