
CHITRAUDRGA NEWS | 16 APRIL 2026
ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಬಸವೇಶ್ವರರ ಜಯಂತಿ ಅಂಗವಾಗಿ ಏ.19 ಭಾನುವಾರ ರಂಗೋಲಿ, ಶಿವಶರಣರ ವೇಷಭೂಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ರಂಗೋಲಿ ಸ್ಪರ್ಧೆ:
ಏ.19ರಂದು ಭಾನುವಾರ ಬೆಳಗ್ಗೆ 9ಗಂಟೆಗೆ ಶ್ರೀಮಠದ ಆವರಣದಲ್ಲಿ ರಂಗೋಲಿ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಸ್ಪಧೆಯಲ್ಲಿ ಭಾಗವಹಿಸುವವರು ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ವಯಸ್ಸಿನ ಮಿತಿ ಇರುವುದಿಲ್ಲ. ರಂಗೋಲಿ/ಬಸವಾದಿ ಶಿವಶರಣರ ಚಿತ್ರ ಯಾವುದಾದರೂ ಹಾಕಬಹುದು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 16 | ಹತ್ತಿ ರೇಟ್ ಎಷ್ಟಿದೆ?
ಸ್ಪರ್ಧೆಯು ವೈಯಕ್ತಿಕವಾಗಿದ್ದು, ಒಬ್ಬರೇ ಭಾಗವಹಿಸಬೇಕು. ಕೇವಲ ರಂಗೋಲಿ ಪುಡಿ ಬಳಸಿ ರಂಗೋಲಿಯನ್ನು ಬಿಡಿಸಬೇಕು. ಹೂವು, ದೀಪ ಅಥವಾ ಬೇರೆ ಯಾವುದೇ ಪರಿಕರಗಳನ್ನು ಬಳಸುವಂತಿಲ್ಲ. ರಂಗೋಲಿ ಹಾಕಲು ಬೇಕಾದ ಪುಡಿ ಮತ್ತು ಬಣ್ಣವನ್ನು ತಾವೇ ತರತಕ್ಕದ್ದು. ರಂಗೋಲಿಯ ಗಾತ್ರವು 4×4 ಅಡಿಗಳಿಗೆ ಮೀರಬಾರದು. ಸ್ಪರ್ಧೆಯಲ್ಲಿ 1 ಗಂಟೆ ಕಾಲಾವಕಾಶ ನೀಡಲಾಗುವುದು. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು 9482066565, 9449202240, 6360217379 ಗೆ ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ :
ಏ.19ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಶ್ರೀಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ 12ನೇ ಶತಮಾನದ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ.
ವಿದ್ಯಾರ್ಥಿಗಳು ಹಾಗೂ ವಯಸ್ಕರು ಭಾಗವಹಿಸಬಹುದಾಗಿದ್ದು, ಬಸವಾದಿ ಶಿವಶರಣರ ಗೌರವ ಘನತೆಗೆ ತಕ್ಕಂತೆ ವೇಷಭೂಷಣ ಧರಿಸತಕ್ಕದ್ದು. ಅಗತ್ಯ ವಸ್ತುಗಳನ್ನು ತಾವೇ ತರುವುದು. ಶರಣರ ವೇಷಧಾರಿಗಳು ಆಯಾ ಶರಣರ ಜನಪ್ರಿಯ ವಚನಗಳನ್ನು ಪ್ರಸ್ತುತಪಡಿಸುತ್ತ ಪರಿಚಯಿಸಬಹುದು. ಯಾವುದೇ ಅನುಚಿತ ಸಂಭಾಷಣೆಗೆ ಅವಕಾಶವಿರುವುದಿಲ್ಲ.
ಇದನ್ನೂ ಓದಿ: ದ್ವಿತೀಯ ಪಿಯುಸಿ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಶೇ.98.57 ಫಲಿತಾಂಶ
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು 9902852157, 9945017517, 9945122414 ಗೆ ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ವಿಜೇತರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
