ಮುಖ್ಯ ಸುದ್ದಿ
ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ಕಾರ್ಯಾಚರಣೆ | 76 ಪ್ರಕರಣ ದಾಖಲು | 6100 ದಂಡ ವಸೂಲಿ

CHITRADURGA NEWS | 23 MAY 2024
ಚಿತ್ರದುರ್ಗ: ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಹೊಸದುರ್ಗ ತಾಲ್ಲೂಕಿನ ಹ್ಯಾಂಡ್ ಪೋಸ್ಟ್, ಮತ್ತೋಡು, ಕಾರೇಹಳ್ಳಿ ಮತ್ತು ಚಳ್ಳಕೆರೆ ನಗರ ಪ್ರದೇಶಗಳಲ್ಲಿ ಹಾಗೂ ನಾಯಕನಹಟ್ಟಿ ಪಟ್ಟಣ ಪ್ರದೇಶದಲ್ಲಿ ತಂಬಾಕು ತನಿಖಾ ತಂಡವು ತಂಬಾಕು ಉತ್ಪನ್ನಗಳ ಮಾರಾಟಗಾರರ ಅಂಗಡಿಗಳಿಗೆ ಮತ್ತು ಬಾರ್ & ರೆಸ್ಟೋರೆಂಟ್‍ಗಳಿಗೆ ಭೇಟಿ ನೀಡಿ ದಾಳಿ ನಡೆಸಿ, ದಂಢ ವಿಧಿಸಿದರು.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ
ಸಂಬಂಧಪಟ್ಟ ಸೆಕ್ಷನ್-4, 6ಎ ಮತ್ತು 6ಬಿ ಬೋರ್ಡ್‍ಗಳನ್ನು ಹಾಕಲು ಸೂಚಿಸಲಾಯಿತು. ಸೆಕ್ಷನ್-4 ಅಡಿಯಲ್ಲಿ 51 ಕೇಸುಗಳನ್ನು ದಾಖಲಿಸಿ ರೂ.4350 ದಂಡವನ್ನು ಮತ್ತು ಸೆಕ್ಷನ್-6ಎ ಅಡಿಯಲ್ಲಿ 25 ಕೇಸುಗಳನ್ನು ದಾಖಲಿಸಿ ರೂ.1750 ದಂಡವನ್ನು ವಸೂಲಿ ಮಾಡಲಾಯಿತು.
ಸಾರ್ವಜನಿಕರಲ್ಲಿ ಮತ್ತು ಅಂಗಡಿ ಮಾಲೀಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, ಪಾನ್ ಮಸಾಲ, ತಂಬಾಕು ಜಗಿದು ಉಗಿಯದಂತೆ ಹೆಚ್ಚರಿಸಿ ಜಾಗೃತಿಯನ್ನು ಮೂಡಿಸಲಾಯಿತು.
ಇದನ್ನೂ ಓದಿ: ಕನಕ ವೃತ್ತದ ಬಳಿ ರಾಜಕಾಲುವೆ ಒತ್ತುವರಿ ತೆರವು | ಪೌರಾಯುಕ್ತೆ ರೇಣುಕಾ ನೇತೃತ್ವದಲ್ಲಿ ಕಾರ್ಯಾಚರಣೆ
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ, ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ, ಜಿಲ್ಲಾ ಸರ್ವೇಕ್ಷಣಾ ಘಟಕದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವ, ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಟೇಶ್, ಕಾರ್ಯಕ್ರಮ ವ್ಯವಸ್ಥಾಪಕ ಕಿರಣ್, ಹೊಸದುರ್ಗ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದರಾಮಪ್ಪ, ಮಲ್ಲಿಕಾರ್ಜುನ್, ಚಳ್ಳಕೆರೆ ಅಬಕಾರಿ ಸಬ್‍ಇನ್ಸ್‍ಪೆಕ್ಟರ್ ಎಸ್.ಹೆಚ್.ರೇಖಾ, ಆರೋಗ್ಯ ನಿರೀಕ್ಷಣಾಧಿಕಾರಿ ಅಮೃತ್ ರಾಜ್ ಇದ್ದರು.
