CHITRADURGA NEWS | 08 NOVEMBER 2025
ಚಿತ್ರದುರ್ಗ: ಮುಕ್ಕಾಲು ಶತಮಾನ ಪೂರೈಸಿದ ನೀನಾಸಂ ರಂಗಭೂಮಿ ಕ್ಷೇತ್ರದಲ್ಲಿ ಹಿರಿತನ ಹೊಂದಿದೆ. ಸಂಸ್ಥೆಯಿಂದ ರೂಪುಗೊಂಡ ನಟನಟಿಯರು ದೇಶಾದ್ಯಂತ ಸಂಪೂರ್ಣ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಸಿ.ಕಳಸದ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ನಗರದಲ್ಲಿ ಅದ್ದೂರಿ ಕನಕ ಜಯಂತಿ | ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ ಭಾಗೀ
ನಗರದ ಶ್ರೀ ಮುರುಘಾಮಠದ ಆವರಣದಲ್ಲಿರುವ ಬಸವೇಶ್ವರ ಸಭಾಂಗಣದಲ್ಲಿ ರಂಗಸೌರಭ ಕಲಾ ಸಂಘ, ದೀವಿಗೆ ಎಜುಕೇಷನ್ ಟ್ರಸ್ಟ್, ಎಸ್.ಜೆ.ಎಂ.ವಿದ್ಯಾಪೀಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ನೀನಾಸಂ ತಿರುಗಾಟದ ನಾಟಕ ಪ್ರದರ್ಶನಗಳಿಗೆ ಚರ್ಮವಾದ್ಯ ಡೋಲಾಕ್ ನುಡಿಸುವ ಮೂಲಕ ಚಾಲನೆ ನೀಡಿದರು.
ಸಮಾಜಮುಖಿಯಾಗಿ ಪ್ರದರ್ಶನಗೊಳ್ಳುವ ನೀನಾಸಂ ನಾಟಕಗಳು ಮನುಷ್ಯ ಜೀವನದ ಕೈಗನ್ನಡಿಯಾಗಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮತ್ತು ಕಲಾವಿದರಿಗೆ ನಮ್ಮ ಸಂಸ್ಥೆ ಯಾವತ್ತೂ ಸಹಕಾರ ನೀಡಿ ಉತ್ತೇಜನ ನೀಡಲಾಗುತ್ತದೆ. ಯುವಕರು ರಂಗಭೂಮಿಯ ಆಯಾಮಗಳನ್ನು ಅಳವಡಿಸಿಕೊಂಡರೆ ಉತ್ತಮ ಬದುಕು ಕಂಡುಕೊಳ್ಳಬಹುದು.
ಜಾತಿಮತ ಪಂಥವೆನ್ನದೆ ಸರ್ವರನ್ನೂ ಒಟ್ಟುಗೂಡಿಸುವ ನಾಟಕಗಳು ಕೆಟ್ಟ ಪರಿಣಾಮಗಳನ್ನು ಹತ್ತಿಕ್ಕಿ ಉತ್ತಮ ಜೀವನ ಮೌಲ್ಯಗಳನ್ನು ಬಿತ್ತರಿಸುತ್ತವೆ. ಪ್ರತೀವರ್ಷ ನೀನಾಸಂ ತಿರುಗಾಟದ ನಾಟಕಗಳು ನಾಡಿನೆಲ್ಲೆಡೆ ಉತ್ತಮ ಫಲಿತಾಂಶವನ್ನು ತಂದುಕೊಡುತ್ತಿವೆ ಎಂದರು.
ಇದನ್ನೂ ಓದಿ: ಕುರಿ ಕಳ್ಳನ ಬಂಧನ | 9.92 ಲಕ್ಷ ಬೆಲೆ ಬಾಳುವ ಕುರಿಗಳು ವಶ
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ನೀನಾಸಂ ತಿರುಗಾಟದ ನಾಟಕಗಳನ್ನು ಹಲವು ವರ್ಷಗಳಿಂದ ನೋಡುತ್ತಿದ್ದೇನೆ. ರಂಗಭೂಮಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಆಸಕ್ತ ಯುವಕರು ನಾಟಕ ಪ್ರದರ್ಶನಗಳಿಗೆ ಆಯೋಜನೆ ಮಾಡುತ್ತಿರುವುದು ಸಂತಸ ತಂದಿದೆ. ಪೋಷಕರು ಆ ಯುವಕರಿಗೆ ಸಹಾಯಹಸ್ತವನ್ನು ಮಾಡಿದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರತಿಷ್ಠಿತ ನಾಟಕಗಳನ್ನು ನೋಡಬಹುದು ಎಂದರು.
ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್, ಪರಮಪೂಜ್ಯ ಡಾ.ಬಸವಕುಮಾರ ಸ್ವಾಮೀಜಿ, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಆಂಗ್ಲ ಉಪನ್ಯಾಸಕ ಎಂವಿ.ನಟರಾಜ್, ಶ್ಯಾಮಲ, ನಾಗರಾಜ್ ಎಂ.ವಿ, ಫಣಿರಾಜ, ನೀನಾಸಂ ತಿರುಗಾಟದ ಮ್ಯಾನೇಜರ್ ಗಣೇಶ್ ಭೀಮನಕೋಣೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಅಂತರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ವಿರಚಿತ ಕಥೆಯನ್ನು ಆಧರಿಸಿದ ರಂಗಪ್ರಸ್ತುತಿಯನ್ನು ರಂಗ ನಿರ್ದೇಶಕ ಡಾ.ಎಂ.ಗಣೇಶ್ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ನೀನಾಸಂ ತಿರುಗಾಟದ ಹೃದಯದ ತೀರ್ಪು ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಇದನ್ನೂ ಓದಿ: ಮೊಳಕಾಲ್ಮೂರು | ಮಕ್ಕಳು ಸೇರಿ 3 ಮೇಲೆ ಹುಚ್ಚು ನಾಯಿ ದಾಳಿ
ಈಗಾಗಲೇ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದ ಹಳೇಯ ವಿದ್ಯಾರ್ಥಿಗಳ ಜೊತೆಗೆ ಆಗಿನ್ನೂ ತರಬೇತಿ ಪಡೆದ ನುರಿತ ಕಲಾವಿದರು ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯ ನೀಡಿ ಜನರಂಜಿಸಿದರು. ಐನೂರಕ್ಕೂ ಹೆಚ್ಚು ರಂಗಾಸಕ್ತರು ನಾಟಕವನ್ನು ನೋಡಿ ಸಂತಸ ವ್ಯಕ್ತಪಡಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
