
CHITRADURG NEWS | 05 NOVEMBER 2025
ಚಿತ್ರದುರ್ಗ: ಸಕ್ಕರ ಗ್ರಾಮದ ಬಳಿ ಇರುವ ಈರಪ್ಪರವರ ಜಮೀನಿನಲ್ಲಿದ್ದ ಕುರಿ ರೊಪ್ಪದಿಂದ ಸುಮಾರು 120 ಕುರಿಗಳನ್ನು ಕಳ್ಳತನ ಮಾಡಿದ್ದ ಕಳ್ಳನನ್ನು ಅಬ್ಬಿನಹೊಳೆ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 03 ರಂದು 9 ಲಕ್ಷದ 92 ಸಾವಿರ ಬೆಲೆಬಾಳುವ ಕುರಿಗಳ ಸಮೇತ ಆರೋಪಿ ಶಿರಾ ತಾಲ್ಲೂಕು ದ್ವಾರನಕುಂಟೆ ಗ್ರಾಮದ ರಘುವಣ್ಣ ಪತ್ತೆ ಮಾಡಿ ಸದರಿ ಆರೋಪಿಯನ್ನು ದಸ್ತಗಿರಿ ಕ್ರಮ ಜರುಗಿಸಿ, ಘನ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು. ಮಾನ್ಯ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ | ಸಾಣೇಹಳ್ಳಿಯ ನಾಟಕೋತ್ಸವ ಸಮಾರಂಭದಲ್ಲಿ ಭಾಗೀ
ಆರೋಪಿಯನ್ನು ಬಂದಿಸುವಲ್ಲಿ ಯಶ್ವಸಿಯಾಗಿರುವ ಎನ್.ಗುಡ್ಡಪ್ಪ, ಪೊಲೀಸ್ ವೃತ್ತ ನಿರೀಕ್ಷಕರು, ಐಮಂಗಲ ವೃತ್ತ, ಅಬ್ಬಿನಹೊಳೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರವರಾದ ದೇವರಾಜ್, ಪಿಎಸ್ಐ ಹುಸೇನ್ ಅ ಸುಳಿಕೇರಿ ಮತ್ತು ಸಿಬ್ಬಂದಿಯವರಾದ ಎಎಸ್ಐ ರಾಮಣ್ಣ, ನಿಂಗರಾಜ್, ದೇವೇಂದ್ರಪ್ಪ, ಹಳೆಯಳನಾಡು ನಾಗರಾಜ್, ಹಿರಿಯೂರು ಗ್ರಾಮಾಂತರ ಠಾಣೆಯ ಸಿದ್ದಲಿಂಗೇಶ್ವರ, ಬಬ್ಬೂರು ನಾಗರಾಜ್, ದಿಲೀಪ್, ರುದ್ರೇಶ್, ನಾಗಣ್ಣ ಹಾಗೂ ಚಾಲಕರಾದ ಹರ್ಷ ರವರುಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಶ್ಲಾಷಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
