By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಪ್ರಾಥಮಿಕ ಶಾಲಾ ಶಿಕ್ಷಕರಿಗೆ MRP ತರಬೇತಿ ಕಾರ್ಯಾಗಾರ
    ಪ್ರಾಥಮಿಕ ಶಾಲಾ ಶಿಕ್ಷಕರಿಗೆ MRP ತರಬೇತಿ ಕಾರ್ಯಾಗಾರ
    8 hours ago
    ಲಸಿಕೆ ಪಡೆಯಲು ನಿರಾಕರಿಸುತ್ತಿದ್ದ ಪೋಷಕರ ಮನವೊಲಿಸುವ ಕಾರ್ಯಕ್ರಮ
    ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ HPV ಲಸಿಕೆ ಅತ್ಯಂತ ಪರಿಣಾಮಕಾರಿ 
    9 hours ago
    MRP ಬೆಲೆಗೆ ರಸಗೊಬ್ಬರ ಮಾರಾಟಕ್ಕೆ ಸೂಚನೆ
    13 hours ago
    ಅಂಗನವಾಡಿ ಹುದ್ದೆ
    ಚಳ್ಳಕೆರೆ, ಹೊಳಲ್ಕೆರೆ ಅಂಗನಾವಾಡಿ ಕಾರ್ಯಕರ್ತೆಯರ ಆಯ್ಕೆ ಪಟ್ಟಿ ಪ್ರಕಟ
    15 hours ago
    ರೈತರು ಸಂಯುಕ್ತ ರಸಗೊಬ್ಬರ ಬಳಸಿ | ಕೃಷಿ ನಿರ್ದೇಶಕ ಮಂಜುನಾಥ್ ಸಲಹೆ 
    17 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಎತ್ತಿನ ಗಾಡಿಗೆ ಬುಲೆರೋ ಡಿಕ್ಕಿ | ಸ್ಥಳದಲ್ಲೇ ಎತ್ತುಗಳು ಸಾವು
    15 hours ago
    ಶಿವಲಿಂಗಪ್ಪ
    ರೈತ ಮುಖಂಡ, ರೇಣುಕಾ ಆಗ್ರೋ ಫರ್ಟಿಲೈಜರ್ಸ್‌ನ ಶಿವಲಿಂಗಪ್ಪ ಶವವಾಗಿ ಪತ್ತೆ
    1 day ago
    BAMS LIKHITHA
    ಬಿಎಎಂಎಸ್‌ ವಿದ್ಯಾರ್ಥಿನಿ ಆತ್ಮಹತ್ಯೆ | ಹೊಳಲ್ಕೆರೆಯಲ್ಲಿ ಘಟನೆ
    2 days ago
    ಗ್ಯಾಸ್ ಸಿಲಿಂಡರ್ ಸ್ಫೋಟ
    ಗ್ಯಾಸ್ ಸಿಲಿಂಡರ್ ಸ್ಫೋಟ | ಅಪ್ಪ, ಮಗ ಸಾವು 
    1 week ago
    SP Ranjith Kumar Bandaru
    ಯುಗಾದಿ ಜೂಜಾಟ ಪೊಲೀಸರ ಭರ್ಜರಿ ಭೇಟೆ | ಜಿಲ್ಲೆಯ ಪೊಲೀಸರು ಜಪ್ತಿ ಮಾಡಿದ ಹಣವೆಷ್ಟು ಗೊತ್ತಾ ?
    2 weeks ago
  • ತಾಲೂಕು
    ತಾಲೂಕುShow More
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    6 days ago
    HOSADURGA BJP LEADERS PRESS MEET
    ಹೊಸದುರ್ಗ ಬಿಜೆಪಿಯಲ್ಲಿ ಗೊಂದಲ | ತಾಲೂಕು ಅಧ್ಯಕ್ಷರ ವಿರುದ್ಧ ಅಸಮಧಾನ ಬಹಿರಂಗ | ಮಾಜಿ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್‌ ಅತೃಪ್ತಿ
    2 weeks ago
    ಕುಂಚಿಟಿಗ ಮಠದಲ್ಲಿ 65 ಗ್ರಾಮದ ಪ್ರಮುಖರಿಗೆ‌ ಸನ್ಮಾನ
    ಕುಂಚಿಟಿಗ ಮಠದಲ್ಲಿ 65 ಗ್ರಾಮದ ಪ್ರಮುಖರಿಗೆ‌ ಸನ್ಮಾನ | ಸುಜ್ಞಾನ ಸಂಗಮ
    3 weeks ago
    ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ
    ನಾಯಕನಹಟ್ಟಿ ರಥೋತ್ಸವ | ಮುಕ್ತಿ ಭಾವುಟ ಹರಾಜು | ಈ ವರ್ಷ ಎಷ್ಟು ಮೊತ್ತಕ್ಕೆ ?
    4 weeks ago
    SRI SHANTHAVEERA SWAMIJI PATTADIKARA MAHOTHSAVA
    ಶ್ರೀ ಶಾಂತವೀರ ಸ್ವಾಮೀಜಿ 25ನೇ ಪಟ್ಟಾಧಿಕಾರ ಮಹೋತ್ಸವ | ಸಂಗಮೇಶ್ವರ ಜಯಂತಿ | ಪುಷ್ಪವೃಷ್ಠಿ, ಅಭಿನಂದನೆಗಳ ಮಹಾಪೂರ
    1 month ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 2 ಏಪ್ರಿಲ್‌ | ಭೀಮಸಮುದ್ರ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ಮಾರುಕಟ್ಟೆ ವಿವರ
    1 day ago
    ARECANUT RATE
    ಅಡಿಕೆ ಧಾರಣೆ | 1 ಏಪ್ರಿಲ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    2 days ago
    ARECANUT RATE
    ಅಡಿಕೆ ಧಾರಣೆ | 31 ಮಾರ್ಚ್‌ | ಚನ್ನಗಿರಿ, ಭೀಮಸಮುದ್ರ ಹಾಗೂ ರಾಜ್ಯದ ಅಡಿಕೆ ಮಾರುಕಟ್ಟೆ ರೇಟ್‌
    3 days ago
    ARECANUT RATE
    ಚನ್ನಗಿರಿ, ತುಮಕೂರು ಅಡಿಕೆ ಮಾರುಕಟ್ಟೆ ರೇಟ್ಸ್‌
    4 days ago
    ARECANUT RATE
    ಅಡಿಕೆ ಧಾರಣೆ | 25 ಮಾರ್ಚ್‌ | ಚನ್ನಗಿರಿ, ಭದ್ರಾವತಿ, ತೀರ್ಥಹಳ್ಳಿ ರಾಜ್ಯದ ಇತರೆ ಮಾರುಕಟ್ಟೆಗಳ ರೇಟ್‌
    1 week ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 03 | ಕೈಗೊಂಡ ಕೆಲಸಗಳಲ್ಲಿ ಅಡೆತಡೆ, ದೂರ ಪ್ರಯಾಣಗಳಲ್ಲಿ ಎಚ್ಚರ
    23 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 02 | ಕೆಲಸದ ಒತ್ತಡ, ಆರ್ಥಿಕ ವಾತಾವರಣವು ಅನುಕೂಲಕರ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 01 | ನಿರುದ್ಯೋಗಿಗಳಿಗೆ ಉದ್ಯೋಗ, ಮಕ್ಕಳ ಆರೋಗ್ಯದಲ್ಲಿ ಎಚ್ಚರ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಮಾರ್ಚ್ 31 | ಕೈಗೊಂಡ ಕೆಲಸಗಳಲ್ಲಿ ಅಡಚಣೆ, ದೂರದ ಪ್ರಯಾಣದಲ್ಲಿ ಎಚ್ಚರ
    4 days ago
    ದಿನ ಭವಿಷ್ಯ
    ದಿನ ಭವಿಷ್ಯ | ಮಾರ್ಚ್ 30 | ದೀರ್ಘಕಾಲದ ಸಾಲದ ಒತ್ತಡ, ನಿರುದ್ಯೋಗಿಗಳಿಗೆ ಶುಭವಾರ್ತೆ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 02 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 01 | ಮೆಕ್ಕೆಜೋಳ, ರಾಗಿ ರೇಟ್
    3 days ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮಾರ್ಚ್ 30 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್…
    5 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮಾರ್ಚ್ 26 | ಹತ್ತಿ ರೇಟ್ ಎಷ್ಟಿದೆ?
    7 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    1 day ago
    ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    2.18 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ 
    2 weeks ago
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    2 weeks ago
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ | ಶಾಸಕ ಚಂದ್ರಪ್ಪ, MLC ಕೆ.ಎಸ್.ನವೀನ್ ಭಾಗೀ 
    3 weeks ago
    ಹೊಳಲ್ಕೆರೆಯಲ್ಲಿ ಹಾಲು ಕರೆಯುವ ಸ್ಪರ್ಧೆ
    ಹೊಳಲ್ಕೆರೆಯಲ್ಲಿ ಹಾಲು ಕರೆಯುವ ಸ್ಪರ್ಧೆ | ಶಿಮುಲ್ ನಿರ್ದೇಶಕ ಶೇಖರ್ ಉದ್ಘಾಟನೆ 
    3 weeks ago
  • ಹಿರಿಯೂರು
    ಹಿರಿಯೂರುShow More
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    2 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    2 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    2 months ago
    M.G. Rangaswamy
    ಹಿರಿಯೂರು ಕಸಾಪ ಸಮ್ಮೇಳನಾಧ್ಯಕ್ಷರಾಗಿ ‘ಎಂಜಿಆರ್‌ʼ
    2 months ago
    Hosayalanadu school anniversery
    ಹೊಸಯಳನಾಡು ಪಬ್ಲಿಕ್‌ ಶಾಲೆ ವಾರ್ಷಿಕೋತ್ಸವ | ಯದುವೀರ ಕೃಷ್ಣದತ್ತ ಒಡೆಯರ್‌, ನಟ ರಮೇಶ್‌ ಅರವಿಂದ್‌ ಭಾಗೀ
    3 months ago
  • ಹೊಸದುರ್ಗ
    ಹೊಸದುರ್ಗShow More
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    6 days ago
    HOSADURGA BJP LEADERS PRESS MEET
    ಹೊಸದುರ್ಗ ಬಿಜೆಪಿಯಲ್ಲಿ ಗೊಂದಲ | ತಾಲೂಕು ಅಧ್ಯಕ್ಷರ ವಿರುದ್ಧ ಅಸಮಧಾನ ಬಹಿರಂಗ | ಮಾಜಿ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್‌ ಅತೃಪ್ತಿ
    2 weeks ago
    ಕುಂಚಿಟಿಗ ಮಠದಲ್ಲಿ 65 ಗ್ರಾಮದ ಪ್ರಮುಖರಿಗೆ‌ ಸನ್ಮಾನ
    ಕುಂಚಿಟಿಗ ಮಠದಲ್ಲಿ 65 ಗ್ರಾಮದ ಪ್ರಮುಖರಿಗೆ‌ ಸನ್ಮಾನ | ಸುಜ್ಞಾನ ಸಂಗಮ
    3 weeks ago
    SRI SHANTHAVEERA SWAMIJI PATTADIKARA MAHOTHSAVA
    ಶ್ರೀ ಶಾಂತವೀರ ಸ್ವಾಮೀಜಿ 25ನೇ ಪಟ್ಟಾಧಿಕಾರ ಮಹೋತ್ಸವ | ಸಂಗಮೇಶ್ವರ ಜಯಂತಿ | ಪುಷ್ಪವೃಷ್ಠಿ, ಅಭಿನಂದನೆಗಳ ಮಹಾಪೂರ
    1 month ago
    Sri Shanthaveera swamiji
    ಇಂದು ಹೊಸದುರ್ಗದ ಶ್ರೀಶಾಂತವೀರ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ
    1 month ago
  • Life Style
    Life StyleShow More
    ಸಪೋಟ
    ಈ ಸಮಸ್ಯೆ ಇರುವವರು ಚಿಕ್ಕುಹಣ್ಣನ್ನು ಸೇವಿಸಿದರೆ ಒಳ್ಳೆಯದು
    21 hours ago
    yoga
    ರಾತ್ರಿ ಚೆನ್ನಾಗಿ ನಿದ್ರೆ ಬರಲು ಈ ಯೋಗಾಸನಗಳನ್ನು ಮಾಡಿ
    22 hours ago
    bee
    ಜೇನುನೊಣ ಕಚ್ಚಿದ ತಕ್ಷಣ ಏನು ಮಾಡಬೇಕು?
    2 days ago
    your feet smell bad from wearing shoes
    ದಿನವಿಡೀ ಶೂ ಧರಿಸುವುದರಿಂದ ನಿಮ್ಮ ಪಾದಗಳಲ್ಲಿ ಕೆಟ್ಟ ವಾಸನೆ ಬರುತ್ತಿದ್ದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ
    2 days ago
    dark knees
    ಕಪ್ಪಾದ ಮೊಣಕಾಲನ್ನು ಬೆಳ್ಳಗಾಗಿಸಲು ಇದನ್ನು ಹಚ್ಚಿ
    3 days ago
Reading: Internal Reservation: ಒಳಮೀಸಲಾತಿಗೆ ಆಗ್ರಹಿಸಿ ಬೀದಿಗಿಳಿದ ಮಾದಿಗ ಸಂಘಟನೆಗಳು | ರಾಜ್ಯ ಸರ್ಕಾರದ ತೀವ್ರ ಆಕ್ರೋಶ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

Internal Reservation: ಒಳಮೀಸಲಾತಿಗೆ ಆಗ್ರಹಿಸಿ ಬೀದಿಗಿಳಿದ ಮಾದಿಗ ಸಂಘಟನೆಗಳು | ರಾಜ್ಯ ಸರ್ಕಾರದ ತೀವ್ರ ಆಕ್ರೋಶ

chitradurganews.com
Last updated: 17 October 2024 09:53
chitradurganews.com
1 year ago
Share
Madiga protest for Internal Reservation
ಒಳಮೀಸಲಾತಿಗೆ ಆಗ್ರಹಿಸಿ ಬೀದಿಗಿಳಿದ ಮಾದಿಗ ಸಂಘಟನೆಗಳು
SHARE

CHITRADURGA NEWS | 17 OCTOBER 2024

ಚಿತ್ರದುರ್ಗ: ಒಳಮೀಸಲಾತಿಗೆ (Internal Reservation) ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿ, ರಾಜ್ಯ ಸರ್ಕಾರದ ಅಣುಕು ಶವಯಾತ್ರೆ ನಡೆಸಲು ಮುಂದಾದರು. ಆನಂತರ ಅಲ್ಲಿಂದ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿ ವ್ಯಕ್ತಿಯೊಬ್ಬರನ್ನು ಹೊತ್ತು ತಿರುಗುತ್ತಾ ಮತ್ತೊಮ್ಮೆ ಅಣುಕು ಶವಯಾತ್ರೆ ನಡೆಸುವ ಯತ್ನ ನಡೆಯಿತು.

ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡ ಜಿ.ಎಚ್.ಮೋಹನ್, ಮಾದಿಗರಿಗೆ ಸಾಮಾಜಿಕ ನ್ಯಾಯ ಸಿಕ್ಕಿದರೆ ಮತ ಬ್ಯಾಂಕ್ ಕೈ ತಪ್ಪುತ್ತದೆ ಎಂಬ ಭೀತಿ ಕಾಂಗ್ರೆಸ್ ಸರ್ಕಾರವನ್ನು ಕಾಡುತ್ತಿದೆ. ಮಾದಿಗ ಸಮಾಜ ಸಹೋಧರರು ಎಂದು ಹೇಳುತ್ತಲೇ ಮಲ್ಲಿಕಾರ್ಜುನ ಖರ್ಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜ್ಯಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ | ಚಿತ್ರದುರ್ಗದ ಕಿಲಾರಿ ಜೋಗಯ್ಯ ಸೇರಿ ಐವರು ಪ್ರಶಸ್ತಿಗೆ ಆಯ್ಕೆ

ಈ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೆಫ್ಟು, ರೈಟು ಮಹಾದೇವಪ್ಪ, ಪರಮೇಶ್ವರ, ಪ್ರಿಯಾಂಕ ಖರ್ಗೆ ಇದ್ದಾರೆ. ಮಾದಿಗರಿಗೆ ಎಲ್ಲಿದೆ ಸ್ಥಾನ. ನಮ್ಮವರು ಯಾವಾಗ ಮೆಡಿಕಲ್, ಇಂಜಿನಿಯರಿಂಗ್, ನರ್ಸಿಂಗ್ ಮಾಡಬೇಕು ಎಂದು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್ ತೀರ್ಪು ನೀಡಿದರೂ ನಮ್ಮ ಸಮಾಜಕ್ಕೆ ನ್ಯಾಯ ಸಿಗುತ್ತಿಲ್ಲ. ಈ ಹಿಂದೆ ಆಂಜನೇಯ ಅವರು ಸದಾಶಿವ ಆಯೋಗ ಜಾರಿ ಮಾಡಲು ಮುಂದಾದಗ ಕೈ ಕೈ ಮಿಲಾಯಿಸಿದವರು ಯಾರು ಎನ್ನುವುದು ನಮಗೆ ಗೊತ್ತಿದೆ ಎಂದರು.

ಈಗ ಕಾಂಗ್ರೆಸ್ ಸರ್ಕಾರದ ಶವಯಾತ್ರೆ ಮಾಡಿದ್ದೇವೆ. ಮುಂದೆ ನಿಮ್ಮ ಶವಯಾತ್ರೆ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್‍ನಲ್ಲೇ ಓಡಾಡಬೇಕಾಗುತ್ತದೆ. ಕೆಳಗಿಳಿದರೆ ಪಂಚೆ ಗಟ್ಟಿ ಮಾಡಿಕೊಂಡು ರಸ್ತೆಗೆ ಬನ್ನಿ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಕಳ್ಳತನವಾಗಿದ್ದ 70 ಮೊಬೈಲ್ ಪತ್ತೆ | ಸೈಬರ್ ಪೊಲೀಸರ ಕಾರ್ಯಕ್ಕೆ ಶ್ಲಾಘನೆ

ಮುಖಂಡ ಹನುಮಂತಪ್ಪ ದುರ್ಗ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ಎಲ್ಲ ರಾಜಕೀಯ ಪಕ್ಷಗಳು ನಮ್ಮ ಮೊಳಕೈಗೆ ತುಪ್ಪ ಸವರುವ ಕೆಲಸ ಮಾಡುತ್ತಾ ಬಂದಿದ್ದಾರೆ. ಮೂರು ದಶಕಗಳ ಕಾಲ ಹೋರಾಟ ಮಾಡಿ ನಮ್ಮ ಅಣ್ಣ, ತಮ್ಮಂದಿರನ್ನು ಕಳೆದುಕೊಂಡಿದ್ದೇವೆ. ನೀವು ಭಿಕ್ಷೆಯ ರೂಪದಲ್ಲಿ ಕೊಡುವ ಸೌಲಭ್ಯ ಬೇಕಾಗಿಲ್ಲ. ಒಳಮೀಸಲಾತಿ ಜಾರಿ ಮಾಡಿ ಎಂದು ಒತ್ತಾಯಿಸಿದರು.

ಇಷ್ಟು ದಿನ ನಮ್ಮ ಅಣ್ಣ, ತಮ್ಮಂದಿರು ಅಂದುಕೊಂಡವರೇ ಈಗ ಮಗ್ಗುಲ ಮುಳ್ಳಾಗಿದ್ದಾರೆ. ಸರ್ಕಾರ ತಕ್ಷಣ ಒಳಮೀಸಲಾತಿ ಜಾರಿ ಮಾಡದಿದ್ದರೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ನಡೆಯುವ ಮೂರು ಉಪಚುನಾವಣೆಗಳಲ್ಲಿ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡ ಕೆ.ಟಿ.ಶಿವಕುಮಾರ್ ಮಾತನಾಡಿ, ಅ.21ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಳ್ಳಕೆರೆ ಶಾಸಕರ ಮಗಳ ಮದುವೆಗೆ ಆಗಮಿಸುತ್ತಿದ್ದೇವೆ. ಅಂದು ನಮ್ಮ ಮನವಿ ಆಲಿಸಿ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ನಿಮಗೆ ಮಾದಿಗರ ಶಾಪ ತಟ್ಟುತ್ತದೆ ಎಂದರು.

ಇದನ್ನೂ ಓದಿ: ಬೀದಿ ನಾಯಿಗಳ ದಾಳಿ | ಚಿಕಿತ್ಸೆ ಫಲಿಸದೆ ಮೃತಪಟ್ಟ ಬಾಲಕ

ಮುಖಂಡ ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ, ದೇಶಕ್ಕೆ ಆಪತ್ತು ಬಂದಾಗ ಏನೂ ಮಾಡದಿದ್ದರೆ ದೇಶದ್ರೋಹಿ ಆಗುತ್ತೇವೆ. ಅದೇ ರೀತಿ ಸಮಾಜಕ್ಕೆ ಆಪತ್ತು ಬಂದಾಗ ಏನು ಮಾಡದಿದ್ದರೆ ಸಮಾಜದ್ರೋಹಿ ಆಗಬೇಕಾಗುತ್ತದೆ. ಸಮಾಜದ ಹೆಸರಿನಲ್ಲಿ ನೌಕರಿ, ಉದ್ಯೋಗ, ಅಧಿಕಾರ ಪಡೆದವರು ಸಮಾಜದ ನೆರವಿಗೆ ಬಾರದಿದ್ದರೆ ರಾಜಿನಾಮೆ ಕೊಟ್ಟು ಹೊರಬನ್ನಿ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ಕಳೆದ ವಿಧಾನಸಭೆ ಚುನಾವಣೆ ವೇಳೆ ಒಳಮೀಸಲಾತಿಯನ್ನು 6ನೇ ಗ್ಯಾರೆಂಟಿಯಾಗಿ ಘೋಷಣೆ ಮಾಡುವುದಾಗಿ ಹೇಳಿತ್ತು. ಅದರಂತೆ ಈಗ ಸುಪ್ರೀಂ ಕೋರ್ಟ್ ಕೂಡಾ ತೀರ್ಪು ನೀಡಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಒಳಮೀಸಲಾತಿ ಜಾರಿ ಆಗುವವರೆಗೆ ಬ್ಯಾಗ್‍ಲಾಗ್ ಸೇರಿದಂತೆ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಬಾರದು. ಜಾತಿ ಗಣತಿ ವಿಚಾರ ಮುನ್ನೆಲೆಗೆ ತಂದು, ಒಳಮೀಸಲಾತಿ ವಿಚಾರವಾಗಿ ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಬಸವೇಶ್ವರ ವೈದ್ಯಕೀಯ ಕಾಲೇಜು | ನೂತನ ವಿದ್ಯಾರ್ಥಿಗಳಿಗೆ ವೈಟ್‍ಕೋಟ್ ಸಮಾರಂಭ

ಪ್ರತಿಭಟನೆಯಲ್ಲಿ ಮುಖಂಡರಾದ ಸೂರನಹಳ್ಳಿ ಶ್ರೀನಿವಾಸ್, ಪರಶುರಾಮ್, ಆರ್.ಡಿ.ಮಂಜುನಾಥ್, ಕುಂಚಿಗನಾಳ್ ಮಹಾಲಿಂಗಪ್ಪ, ದೊಡ್ಡಘಟ್ಟ ಲಕ್ಷ್ಮಣ್, ಚಳ್ಳಕೆರೆ ಶಿವಮೂರ್ತಿ, ಹುಲ್ಲೂರು ಶ್ರೀನಿವಾಸ್, ಲಾಯರ್ ಚಂದ್ರಪ್ಪ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಮಂದಿ ಭಾಗವಹಿಸಿದ್ದರು.

ಜಿ.ಎಚ್.ಮೋಹನ್ ಹೇಳಿದ ನರಿ ಮತ್ತು ಕರಡಿ ಕಥೆ

ಮಾದಿಗ ಮುಖಂಡ ಜಿ.ಎಚ್.ಮೋಹನ್ ತಮ್ಮ ಭಾಷಣದಲ್ಲಿ ನರಿ ಮತ್ತು ಕರಡಿಯ ಕಥೆಯೊಂದನ್ನು ಪ್ರಸ್ತಾಪಿಸಿದರು. ಅದರ ಸಾರಾಂಶ ಈ ಕೆಳಗಿನಂತಿದೆ.
ನರಿ ಮತ್ತು ಕರಡಿ ಜೀತ ಮಾಡಿಕೊಂಡು ಜೀವನ ನಡೆಸುತ್ತಿದ್ದವು. ಒಂದು ಇದನ ನರಿ, ಅಣ್ಣಾ ನಾವಿಬ್ಬರು ಎಷ್ಟು ದಿನ ಜೀತ ಮಾಡೋದು, ನಾವೇ ಭೂಮಿ ಉಳುಮೆ ಮಾಡಿ ಹೊಸ ಬದುಕು ಕಟ್ಟಿಕೊಳ್ಳೋಣ ಎಂದು ಕರಡಿಗೆ ಸಲಹೆ ನೀಡುತ್ತದೆ.

ಇದಕ್ಕೆ ಒಪ್ಪಿದ ಕರಡಿ, ಹೌದು ನೀನು ಹೇಳುವ ಸಲಹೆ ಚೆನ್ನಾಗಿದೆ ಎಂದು ನರಿಯ ಜೊತೆಗೆ ಭೂಮಿ ಉಳುಮೆಗೆ ಮುಂದಾಗುತ್ತದೆ.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ಧಾರಣೆ ಎಷ್ಟಿದೆ

ಭೂಮಿಗೆ ರಾಗಿ ಬಿತ್ತನೆ ಮಾಡಿದ ನರಿ ಮೇಲಿನ ಭಾಗ ನನ್ನದು, ಕೆಳಗಿನ ಭಾಗ ನಿನ್ನದು ಎನ್ನುತ್ತದೆ. ಆಗ ನರಿಗೆ ರಾಗಿ, ಕರಡಿಗೆ ರಾಗಿಯ ಹುಲ್ಲು, ಬೇರು ಸಿಗುತ್ತದೆ.
ಇದರಿಂದ ಕರಡಿ ಬೇಸರವಾಗುತ್ತದೆ. ಆನಂತರ ನರಿ ಆಯ್ತು ಈ ಬಾರಿ ಮೇಲಿನ ಭಾಗ ನೀನು ತೆಗೆದುಕೊ, ಕೆಳಗಿನ ಭಾಗ ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಗೆಣಸು ನಾಟಿ ಮಾಡುತ್ತದೆ.

ಈಗ ಗೆಣಸು ನರಿಗೆ, ಮೇಲಿನ ಸೊಪ್ಪು ಕರಡಿಗೆ ಸಿಗುತ್ತದೆ. ಇದೇ ರೀತಿಯಲ್ಲಿ ಸಚಿವ ಮಲ್ಲಿಕಾರ್ಜುನ ಖರ್ಗೆ ನಮಗೆ ವಂಚನೆ ಮಾಡುತ್ತಿದ್ದಾರೆ ಎಂದು ಮೋಹನ್ ಕಥೆಯ ಕೊನೆಯಲ್ಲಿ ವಿವರಿಸಿದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Chief Minister SiddaramaiahChitradurgaChitradurga newsChitradurga UpdatesInternal ReservationKannada NewsMadiga ReservationState Governmentಒಳಮೀಸಲಾತಿಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಚಿತ್ರದುರ್ಗ ನ್ಯೂಸ್ಮಾದಿಗ ಮೀಸಲಾತಿಮುಖ್ಯಮಂತ್ರಿ ಸಿದ್ದರಾಮಯ್ಯರಾಜ್ಯ ಸರ್ಕಾರ
Share This Article
Facebook Email Print
Previous Article Vanivilasa sagara Water Level: 123 ಅಡಿ ದಾಟಿದ ವಿವಿ ಸಾಗರ ಜಲಾಶಯ | ಭರ್ತಿಯಾಗಲು 7 ಅಡಿ ಬಾಕಿ
Next Article Sri Maharshi Valmiki; ಚಿತ್ರದುರ್ಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆ
Leave a Comment

Leave a Reply Cancel reply

Your email address will not be published. Required fields are marked *

ಪ್ರಾಥಮಿಕ ಶಾಲಾ ಶಿಕ್ಷಕರಿಗೆ MRP ತರಬೇತಿ ಕಾರ್ಯಾಗಾರ
ಪ್ರಾಥಮಿಕ ಶಾಲಾ ಶಿಕ್ಷಕರಿಗೆ MRP ತರಬೇತಿ ಕಾರ್ಯಾಗಾರ
ಮುಖ್ಯ ಸುದ್ದಿ
ಲಸಿಕೆ ಪಡೆಯಲು ನಿರಾಕರಿಸುತ್ತಿದ್ದ ಪೋಷಕರ ಮನವೊಲಿಸುವ ಕಾರ್ಯಕ್ರಮ
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ HPV ಲಸಿಕೆ ಅತ್ಯಂತ ಪರಿಣಾಮಕಾರಿ 
ಮುಖ್ಯ ಸುದ್ದಿ
MRP ಬೆಲೆಗೆ ರಸಗೊಬ್ಬರ ಮಾರಾಟಕ್ಕೆ ಸೂಚನೆ
ಮುಖ್ಯ ಸುದ್ದಿ
ಅಂಗನವಾಡಿ ಹುದ್ದೆ
ಚಳ್ಳಕೆರೆ, ಹೊಳಲ್ಕೆರೆ ಅಂಗನಾವಾಡಿ ಕಾರ್ಯಕರ್ತೆಯರ ಆಯ್ಕೆ ಪಟ್ಟಿ ಪ್ರಕಟ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up