
CHITRADURGA NEWS | 05 SEPTEMBER 2025
ಚಿತ್ರದುರ್ಗ: ಚಿತ್ರದುರ್ಗ ನಗರದ ಭಾರತೀಯ ಜೀವ ವಿಮಾ ಶಾಖೆ ವತಿಯಿಂದ 69ನೇ ವಿಮಾ ಸಪ್ತಾಹ ಆಚರಣೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಶಾಖಾ ವ್ಯವಸ್ಥಾಪಕರಾದ ಹನುಮಂತ ನಾಯಕ ಅವರು ಸಸಿ ನೆಡೆಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಜೀವ ವಿಮಾ ಸಂಸ್ಥೆ ಅತ್ಯಂತ ದೊಡ್ಡ ಜನರ ವಿಶ್ವಾಸವುಳ್ಳ ವಿಮಾ ಸಂಸ್ಥೆಯಾಗಿದೆ.
ಇದನ್ನೂ ಓದಿ: ಗುರುಭವನ ನಿರ್ಮಾಣಕ್ಕೆ ರೂ.2 ಕೋಟಿ | ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಡಿ.ಸುಧಾಕರ್ ಭರವಸೆ
ದೇಶದ ಆರ್ಥಿಕ ಅಭಿವೃದ್ಧಿಗೆ ಹಾಗೂ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈ ವರ್ಷ ಎಲ್.ಐ.ಸಿ ಯಿಂದ 7324 ಕೋಟಿ ರೂಗಳ ಲಾಭಾಂಶವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ನೀಡಿ ದೇಶದ ಹಣಕಾಸು ವ್ಯವಸ್ಥೆಗೆ ಶಕ್ತಿ ತುಂಬುವಂತಹ ಕೆಲಸ ಮಾಡಿದೆ. ನಾವೆಲ್ಲರೂ ವಿಮಾ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸೋಣಾ ಎಂದರು.
ಈ ಸಂದರ್ಭದಲ್ಲಿ ಎ.ಬಿ.ಎಂ. ಲಕ್ಷ್ಮಿಕಾಂತ್, ಡಿ.ಓ.ಗಳಾದ ಮಹೇಶ್, ರಾಮ ಕಿರಣ್, ಶ್ರೀನಿವಾಸ್ ಚನಿವಾರ, ರಾಘವೇಂದ್ರ, ಕುಳ್ಳಯಪ್ಪ, ಸಂಘದ ಅಧ್ಯಕ್ಷೆ ರೇಖಾ, ಕಾರ್ಯದರ್ಶಿ ವೀಣಾ, ಜಂಟಿ ಕಾರ್ಯದರ್ಶಿ ಕೆ.ಸುಜಾತ, ಎ.ಓ. ರೇಣುಕಾಂಬಾ, ಎ.ಎ.ಓ. ಗಳಾದ ಗೀರುವಾಣಿ, ಮಮತಾ, ಇಂದಿರಾ, ಸುಮಾ, ನಿರ್ಮಲಾ, ಗೀತಾ, ಚಂದ್ರಶೇಖರ್, ಶ್ರೀನಿವಾಸ್, ಸವಿತಾ, ಪದ್ಮನಾಭ ಕ್ಯಾಷಿಯರ್ ಶ್ರೀನಿವಾಸ್ ಪ್ರಸಾದ್, ಆನಂದ್ ಸೇರಿದಂತೆ ವಿಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
