
CHITRADURGA NEWS | 28 December 2025
ಚಿತ್ರದುರ್ಗ: ಹೆದ್ದಾರಿಯಲ್ಲಿ ಬಸ್ ಅಗ್ನಿ ದುರಂತದಲ್ಲಿ ಮೃತಪಟ್ಟ ಪ್ರಕರಣದಲ್ಲಿ DNA ವರದಿ ಪೊಲೀಸರ ಕೈ ಸೇರಿದ್ದು, ಕುಟುಂಬದವರನ್ನು ಕರೆಯಿಸಿ ಪಾರ್ಥಿವ ಶರೀರಗಳನ್ನು ಹಸ್ತಾಂತರ ಮಾಡಲಾಯಿತು.
ಇದನ್ನೂ ಓದಿ: ಬಸ್ ಬೆಂಕಿ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆ | ತಾಯಿ ಮಗು ಸೇರಿ 6 ಮಂದಿ ದಹನ
ಜಿಲ್ಲಾ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಮೂರು ದಿನದಿಂದ ಐದು ಜನರ ಮೃತ ದೇಹಗಳನ್ನು ಸಂರಕ್ಷಿಸಿ ಇಡಲಾಗಿತ್ತು.
ಇಂದು ಹುಬ್ಬಳ್ಳಿಯಿಂದ DNA ವರದಿ ಬರುತ್ತಲೇ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು.
ಇದೇ ವೇಳೆ ಮೃತರ ಮೈಮೇಲೆ ಇದ್ದ ಆಭರಣಗಳನ್ನು ಪೊಲೀಸರು ಕುಟುಂಬದವರಿಗೆ ಹಸ್ತಾಂತರ ಮಾಡಿದರು.
ಇದನ್ನೂ ಓದಿ: ಜವನಗೊಂಡನಹಳ್ಳಿ ಬಸ್ ದುರಂತ ಸಾವಿನ ಸಂಖ್ಯೆ ಏರಿಕೆ | ಸೀಬರ್ಡ್ ಬಸ್ ಚಾಲಕ ಚಿಕಿತ್ಸೆ ಫಲಿಸದೆ ಸಾವು
ಲಾರಿ ಡ್ರೈವರ್ ಮೃತದೇಹ ಪ್ರತ್ಯೇಕವಾಗಿದ್ದ ಕಾರಣಕ್ಕೆ ಅವರನ್ನು ಹೊರತುಪಡಿಸಿ, ಬಸ್ಸಿನಲ್ಲಿ ಮೃತಪಟ್ಟಿದ್ದ ಐದು ಜನರ ಮೃತ ದೇಹ ಹಸ್ತಾಂತರ ಮಾಡಲಾಯಿತು.
ಬಿಂದು ಹಾಗೂ ಗ್ರೇಯಾ ಅವರ ಮೃತ ದೇಹಗಳನ್ನು ಪತಿ ದರ್ಶನ ಕಣ್ಣೀರಿಡುತ್ತಲೇ ಪಡೆದರು. ಈ ವೇಳೆ ಜೊತೆಗಿದ್ದವರು ಸಂತೈಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
