
CHITRADURGA NEWS | 28 DECEMBER 2025
ಚಿತ್ರದುರ್ಗ: ಸ್ಟೈಲಿಶ್ ಸ್ಟಾರ್ ಜೈದ್ ಖಾನ್ ನಟಿಸಿರುವ ಬಹು ನಿರೀಕ್ಷಿತ ಕಲ್ಟ್ ಚಿತ್ರ ಜನವರಿ 23 ರಂದು ಬಿಡುಗಡೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಡಿಸೆಂಬರ್ 30ಕ್ಕೆ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಲಿದೆ ಎಂದು ಸಮಾಜ ಸೇವಕ ಅನ್ವರ್ ಬಾಷಾ ತಿಳಿಸಿದರು.
ಇದನ್ನೂ ಓದಿ: ಬೆಂಕಿ ದುರಂತದಲ್ಲಿ ಮಡಿದವರ ಪಾರ್ಥೀವ ಶರೀರ ಹಸ್ತಾಂತರ | ಕಣ್ಣೀರಿಟ್ಟ ಕುಟುಂಬದವರು

ನಗರದ ಸಿಟಿ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇ ಮಾಧ್ಯಮಿಕ ಶಾಲೆ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.
ಅಂದು ಚಿತ್ರ ನಟ ಜೈದ್ ಖಾನ್, ನಟಿಯರಾದ ರಚಿತಾ ರಾಮ್, ಮಲೈಕಾ ವಸುಪಾಲ್ ಸೇರಿ ಇಡೀ ತಂಡ ಆಗಮಿಸಲಿದೆ. ರಾಂಪಾರ್ ಅಲೋಕಿ, ಗಾಯಕ ಚಂದನ್ ಶೆಟ್ಟಿ ಕಾರ್ಯಕ್ರಮ ನೀಡಲಿದ್ದಾರೆ.
ಡಿಸೆಂಬರ್ 30ರಂದು ಬೆಳಗ್ಗೆ 11ಕ್ಕೆ ಚಿತ್ರತಂಡ ಚಿತ್ರದುರ್ಗ ನಗರದ ಕನಕ ವೃತ್ತದ ಪ್ರವೇಶ ಮಾಡಲಿದ್ದು, ಕನಕದಾಸರು, ಡಾ.ಬಿ.ಆರ್.ಅಂಬೇಡ್ಕರ್, ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆ | ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ | ಆಕ್ರೋಶ
12 ಗಂಟೆಗೆ ದೇವರಾಜು ಶಿಕ್ಷಣ ಸಂಸ್ಥೆಯ ವೆಂಕಟೇಶ್ವರ ಶಾಲೆಯಲ್ಲಿ ಸಾಂಸ್ಕೃತಿಕ ಉತ್ಸವ ನಡೆಯಲಿದ್ದು, ನಟ ಜೈದ್ ಖಾನ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 5 ಗಂಟೆಗೆ ಹಳೇ ಮಾಧ್ಯಮಿಕ ಶಾಲೆ ಆವರಣದಲ್ಲಿ ಬೃಹತ್ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಪಕ್ಷದ ಗಣ್ಯರು, ಸಾಹಿತಿ, ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಚಿತ್ರದುರ್ಗ ಸಾಹಿತಿ ಕಲಾವಿದರ ನಾಡು, ಇಲ್ಲಿ ಪ್ರಮೋಷನ್ ಮಾಡಿದ ಎಲ್ಲ ಚಿತ್ರಗಳು ಯಶಸ್ಸು ಕಂಡಿದೆ. ಹೀಗಾಗಿ ಕಲ್ಟ್ ಚಿತ್ರದ ಪ್ರಮೋಷನ್ ಗಾಗಿ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ
ಮುಖಂಡರಾದ ಸಿ.ಟಿ ಕೃಷ್ಣಮೂರ್ತಿ, ಡಾ.ತಿಪ್ಪೇಸ್ವಾಮಿ, ಅನೀಸ್, ಓ.ಶಂಕರ್, ಕಿರಣ್, ಮಹಾಲಿಂಗಪ್ಪ ಕುಂಚಿಗನಾಳ್, ಬಾಳೆಕಾಯಿ ಶ್ರೀನಿವಾಸ್, ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
