
CHITRADURGA NEWS | 25 DECEMBER 2025
ಚಿತ್ರದುರ್ಗ: ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ನಡೆದ ಭೀಕರ ಬಸ್ ಅಗ್ನಿ ದುರಂತದಲ್ಲಿ ಬಸ್ಸಿನಲ್ಲಿದ್ದ ಮಗು ಸೇರಿದಂತೆ ಐದು ಮಂದಿ ಹಾಗೂ ಬಸ್ಸಿಗೆ ಕಂಟೇನರ್ ಡಿಕ್ಕಿ ಹೊಡೆದ ಕಂಟೇನರ್ ಲಾರಿ ಚಾಲಕ ಸಜೀವ ದಹನವಾಗಿದ್ದಾರೆ.
ನಸುಕಿನ 2 ಗಂಟೆಗೆ ಈ ಘಟನೆ ನಡೆದಾಗ 20ಕ್ಕಿಂತ ಹೆಚ್ಚು ಮಂದಿ ಈ ದರ್ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದೇ ಸುದ್ದಿಯಾಗಿತ್ತು. ಆದರೆ, ಬೆಂಗಳೂರಿನಲ್ಲಿ ಬಸ್ ಹತ್ತಿದವರು, ಬೆಂಕಿ ಹೊತ್ತಿದಾಗ ಜಿಗಿದು ಪಾರಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಗಳನ್ನು ಲೆಕ್ಕ ಹಾಕುತ್ತಾ ನಿಧಾನವಾಗಿ ವಾಸ್ತವ ಅರಿವಾಗುತ್ತಾ ಬಂದಿತು.

ಇದನ್ನೂ ಓದಿ: ಬಸ್‌ಗೆ ಬೆಂಕಿ | ಅಪಘಾತ ಸಂಭವಿಸಿದ್ದು ಹೇಗೆ ಗೊತ್ತಾ ?
ಬೆಳಗ್ಗೆ ಅಂದಾಜು 9 ರಿಂದ 11 ಮಂದಿ ಮೃತಪಟ್ಟಿರಬಹುದು ಎನ್ನುವ ಲೆಕ್ಕಾಚಾರ ಪೊಲೀಸ್ ವಲಯದಲ್ಲೂ ಇತ್ತು. ಆದರೆ, ನಾಪತ್ತೆಯಾಗಿದ್ದ ಇಬ್ಬರು ಪತ್ತೆಯಾದ ನಂತರ ಸಾವಿನ ನಿಖರ ಸಂಖ್ಯೆ ಗೊತ್ತಾಯಿತು.
ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅಧಿಕೃತವಾಗಿ ಈ ದುರ್ಘಟನೆಯಲ್ಲಿ 6 ಜನ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.
ಬಸ್ ದುರಂತದಲ್ಲಿ ಸಾವಿಗೀಡಾದವರ ವಿವರ:
ಮೃತರನ್ನು ಬೆಂಗಳೂರಿನ ಬಿಂದು ಹಾಗೂ ಅವರ ಐದು ವರ್ಷದ ಮಗಳು ಗ್ರೇಯಾ, ಭಟ್ಕಳದ ರಶ್ಮಿ ಮಹಾಲೆ, ಚನ್ನರಾಯಪಟ್ಟಣದ ನವ್ಯ ಹಾಗೂ ರಶ್ಮಿ ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಸ್ ಬೆಂಕಿ ದುರಂತ | HELP LINE ತೆರೆದ ಪೊಲೀಸ್ ಇಲಾಖೆ
ಬಸ್ಸಿನಲ್ಲಿ ಚಾಲಕ ರಫಿಕ್, ನಿರ್ವಾಹಕ ಸಾಧಿಕ್ ಸೇರಿದಂತೆ 33 ಮಂದಿ ಪ್ರಯಾಣಿಸುತ್ತಿದ್ದು, 28 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
