
CHITRADURGA NEWS | 25 DECEMBER 2025
ಚಿತ್ರದುರ್ಗ: ಹೊಸ ವರ್ಷಕ್ಕೆ ಒಂದು ವಾರ ಮೊದಲು ಜಿಲ್ಲೆಯಲ್ಲಿ ಘೋರ ದುರಂತ ಸಂಭವಿಸಿದೆ. ಸ್ಲೀಪರ್ ಕೋಚ್ ಬಸ್ ಅವಘಡದಿಂದಾಗಿ ಆರು ಜನ ಸಜೀವ ದಹನವಾಗಿದ್ದಾರೆ.
ಬೆಂಗಳೂರು ಕಡೆಯಿಂದ ಚಿತ್ರದುರ್ಗ ಮಾರ್ಗವಾಗಿ ಗೋಕರ್ಣಕ್ಕೆ ಒಂದೇ ವೇಗದಲ್ಲಿ ಸ್ಲೀಪರ್ ಕೋಚ್ ಬಸ್ ಸಾಗುತ್ತಿದ್ದಾಗ ಜವನಗೊಂಡನಗಳ್ಳಿ ಬಳಿಯ ಆನೆಸಿದ್ರಿ ಗೇಟ್‌ನಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಎದುರಿನಿಂದ ಬಂದು ಡಿವೈಡರ್ ಹಾರಿ ಅಪ್ಪಳಿಸಿದ ಲಾರಿಯಿಂದಾಗಿ ಬಸ್ ಕ್ಷಣಮಾತ್ರದಲ್ಲಿ ಬೆಂಕಿಯಿಂದ ಧಗಧಗಿಸಿದೆ.

ಇದನ್ನೂ ಓದಿ: ಬಸ್ ಬೆಂಕಿ ದುರಂತ | HELP LINE ತೆರೆದ ಪೊಲೀಸ್ ಇಲಾಖೆ
ರಾಷ್ಟ್ರೀಯ ಹೆದ್ದಾರಿ ೪೮ ರಲ್ಲಿ ಜವನಗೊಂಡನಹಳ್ಳಿ ದಾಟಿ ಮುಂದೆ ಸಾಗುತ್ತಿದ್ದಂತೆ ಹಿರಿಯೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಂಟೇನರ್ ಲಾರಿ ಚಾಲಕನ ಅಜಾಗರೂಕತೆಯಿಂದ ಡಿವೈಡರ್ ಹಾರಿ ಬಲ ಭಾಗದ ಟ್ರ್ಯಾಕ್‌ಗೆ ಲಾರಿ ಹಾರಿ ಬಂದಿದೆ.
ಈ ವೇಳೆ ಎದುರಿನಿಂದ ಬರುತ್ತಿದ್ದ ಬಸ್ಸಿನ ಮಧ್ಯ ಭಾಗಕ್ಕೆ ಡಿಸೇಲ್ ಟ್ಯಾಂಕ್ ಇರುವ ಜಾಗಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಇದೇ ವೇಳೆ ಕಂಟೇನರ್ ಲಾರಿ ಕೂಡಾ ಬೆಂಕಿ ಹೊತ್ತಿಕೊಂಡಿದ್ದು ಚಾಲಕ ಸಜೀವ ದಹನವಾಗಿದ್ದಾನೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

ಎಲ್ಲಾ ಚಾಲಕರು ಅತೀ ವೇಗ, ಅಸಡ್ಡೆ ತೊರೆದು, ಅನ್ಯ ಜನರ ಜೀವದ ಕಡೆಗೆ ಗಮನ ಹರಿಸಬೇಕು