CHITRADURGA NEWS | 29 SEPTEMBER 2025
ಚಿತ್ರದುರ್ಗ: ಸರ್ಕಾರ ಜನತೆಯನ್ನು ಸ್ವಾವಲಂಭಿ ಮಾಡಲು ಹಲವಾರು ಯೋಜನೆ ಜಾರಿ ಮಾಡುತ್ತಿದೆ, ಇದಕ್ಕೆ ತಕ್ಕಂತೆ ಜನತೆಯೂ ಸಹಾ ಕೈಗಾರಿಕೆ ಪ್ರಾರಂಭ ಮಾಡಲು ಆಸಕ್ತರಾಗಿದ್ದಾರೆ ಆದರೆ ಕೈಗಾರಿಕೆ ಪ್ರಾರಂಭ ಮಾಡುವುದಕ್ಕೆ ಬೇಕಾದ ಪರವಾನಿಗೆ ಪಡೆಯಲು ದುಸ್ಸಾಹಸ ಪರಿಸ್ಥಿತಿ ಇಂದಿನ ದಿನದಲ್ಲಿ ನಿರ್ಮಾಣವಾಗಿದೆ ಎಂದು ಚೇಂಬರ್ ಅಫ್ ಕಾಮರ್ಸ್ ಅಧ್ಯಕ್ಷ ಎನ್.ಸತೀಶ್ ತಿಳಿಸಿದರು.
ಇದನ್ನೂ ಓದಿ: ದುಶ್ಚಟ ತ್ಯಜಿಸಿ, ಬದುಕಿನಲ್ಲಿ ಬದಲಾವಣೆ ತನ್ನಿ | ಎ.ನಾರಾಯಣಸ್ವಾಮಿ
ನಗರದ ಖಾಸಗಿ ಹೋಟೇಲ್‍ನಲ್ಲಿ ಸೋಮವಾರ ಕೈಗಾರಿಕೆ ಮತ್ತು ವಾಣೀಜ್ಯ ಇಲಾಖೆ, ಕೆ.ಸಿ.ಟಿ.ಯು. ಟೆಕ್ಸಾಕ್ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ಯೋಜನೆಯಡಿ ಟಿ ಆರ್‍ಇಡಿ ಎಸ್ ಯೋಜನೆ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಬ್ಯಾಂಕ್‍ಗಳು ಕೈಗಾರಿಕೆ ಆರಂಭಿಸಲು ಸಾಲ ನೀಡಲು ಮುಂದೆ ಬರುತ್ತಿವೆ, ಇದೇ ರೀತಿ ಕೈಗಾರಿಕೆ ಮಾಡಲು ಸಹಾ ಜನತೆ ಮುಂದೆ ಬಂದಿದ್ದಾರೆ, ಆದರೆ ಸಮಸ್ಯೆ ಏನೆಂದರೆ ಯಾವ ಕೈಗಾರಿಕೆ ಮಾಡಬೇಕು ಎನ್ನುವುದು ಇದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ. ನಮ್ಮ ಜನರಿಗೆ ಏನು ಬೇಕು ಎನ್ನುವುದು ಗೊತ್ತಾಗುತ್ತಿಲ್ಲ ಇದರ ಬಗ್ಗೆ ಸರಿಯಾದ ಮಾಹಿತಿ ಯುವ ಕೈಗಾರಿಕೆ ಉದ್ಯಮಿಗಳಿಗೆ ನೀಡಬೇಕಿದೆ ಎಂದರು.
ಇಂದಿನ ದಿನಮಾನದಲ್ಲಿ ಕೈಗಾರಿಕೆ ಪ್ರಾರಂಭ ಮಾಡಬೇಕೆಂದು ಹಲವಾರು ಜನತೆ ಮುಂದೆ ಬರುತ್ತಾರೆ ಅದಕ್ಕೆ ಬೇಕಾದ ತಯಾರಿ ಸಹಾ ಮಾಡುತ್ತಾರೆ ಆದರೆ ಸರ್ಕಾರದ ವಿವಿಧ ಇಲಾಖೆ ವತಿಯಿಂದ ಪರವಾನಿಗೆ ಪತ್ರ ಪಡೆಯಬೇಕಾದರೆ ಯಾವ ಕೈಗಾರಿಕೆ ಮಾಡುವುದು ಬೇಡ ಎನ್ನುವಷ್ಟು ಬೇಸರ ಮೂಡುತ್ತದೆ.
ಇದನ್ನೂ ಓದಿ: ದಸರಾ, ದೀಪಾವಳಿ ಹಬ್ಬದ ಪ್ರಯಕ್ತ ಚರ್ಮ ಉತ್ಪನ್ನಗಳ ಮೇಲೆ ಶೇ.20 ರಷ್ಟು ರಿಯಾಯಿತಿ
ಒಂದೊಂದು ಇಲಾಖೆಯಿಂದ ಪರವಾನಿಗೆ ಪತ್ರ ಪಡೆಯುವಾಗ ತಿಂಗಳುಗಳು ಕಳೆದ ಹೋಗುತ್ತವೆ. ಈ ಸಮಯದಲ್ಲಿ ಕೈಗಾರಿಕೆ ಆರಂಭ ಮಾಡುವ ಉತ್ಸಾಹ ಇಲ್ಲವಾಗುತ್ತದೆ, ಸರ್ಕಾರ ಇದರ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಕೈಗಾರಿಕೆ ಪ್ರಾರಂಭ ಮಾಡುವುದಕ್ಕೆ ಅಗತ್ಯವಾಗಿ ಬೇಕಾದ ಪರವಾನಿಗೆ ಪಡೆಯಲು ಕಾನೂನು ಸರಳ ಮಾಡುವುದರ ಮೂಲಕ ಕೈಗಾರಿಕೆ ಪ್ರಾರಂಭ ಮಾಡುವವರಿಗೆ ಉತ್ತೇಜನ ನೀಡಬೇಕಿದೆ ಎಂದು ತಿಳಿಸಿದರು.
ಕೈಗಾರಿಕೆಯನ್ನು ಪ್ರಾರಂಭ ಮಾಡಿದರೆ ಅದಕ್ಕೆ ಕೌಶಲ್ಯ ಹೊಂದಿದ ವ್ಯಕ್ತಿಗಳು ಸಿಗುವುದು ಕಡಿಮೆಯಾಗುತ್ತದೆ. ನಮ್ಮಲ್ಲಿ ಕೆಲಸ ಖಾಲಿ ಇದ್ದರೂ ಸಹಾ ಕೆಲಸಕ್ಕೆ ಬರುವವರ ಪ್ರಮಾಣ ಕಡಿಮೆಯಾಗುತ್ತಿದೆ.
ಕೆಲಸಗಾರರು ಇಲ್ಲದೆ ಕೈಗಾರಿಕೆ ನಿಲ್ಲಿಸುವಂತ ವಾತಾವರಣ ನಿರ್ಮಾಣ ವಾಗುತ್ತಿದೆ. ಹೊರ ರಾಜ್ಯದಿಂದ ಕೆಲಸಗಾರರನ್ನು ಕರೆಯಿಸಿ ಕೆಲಸ ಮಾಡಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿತ್ರದುರ್ಗ ನಗರದಲ್ಲಿ ಪ್ರವಾಸ್ಯೋದ್ಯಮ ಮಾಡಲು ಹೇರಳವಾದ ಅವಕಾಶ ಇದೆ, ಅದರೆ ಇದನ್ನು ಸರ್ಕಾರವಾಗಲಿ, ಚುನಾಯಿತ ಪ್ರತಿನಿಧಿಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ, ಇದರ ಬಗ್ಗೆ ಹಲವಾರು ಬಾರಿ ಸರ್ಕಾರದ ಗಮನ ಸೆಳೆಯಲಾಗಿತ್ತು ಆದರೆ ಇದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಚಳ್ಳಕೆರೆಯಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಪ್ರವಾಸದ್ಯೋಮ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 29 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಲೀಡ್ ಬ್ಯಾಂಕ್‍ನ ವ್ಯವಸ್ಥಾಪಕ ಎಂ.ರಾಘವೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡಿರುವ ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಅದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಕೆ.ಎಸ್.ಎಫ್.ಸಿಯ ವ್ಯವಸ್ಥಾಪಕರಾದ ಆರ್,ಬಾಬು, ಕೆನರಾ ಬ್ಯಾಂಕ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಟೆಕ್ಸಾಕ್‍ನ ಸಿಇಓ ಹಾಗೂ ಮುಖ್ಯ ಸಲಹೆಗಾರರಾದ ಸಿದ್ದರಾಜು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್, ಉಪ ನಿರ್ದೇಶಕ ಬಿ.ಕೆ.ಮಂಜುನಾಥ್ ಸ್ವಾಮಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
