CHITRADURGA NEWS | 03 NOVEMBER 2024
ಚಿತ್ರದುರ್ಗ: ಚಿಕ್ಕಜಾಜೂರು ಸಮೀಪ ಗುಂಜಿಗನೂರು ಬಳಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 9 ಜನರನ್ನು ಪೊಲೀಸರು(Police) ಬಂಧಿಸಿದ್ದಾರೆ.

ಹೊಳಲ್ಕೆರೆ ತಾಲೂಕು ವ್ಯಾಪ್ತಿಯ ಗುಂಜಿಗನೂರು ಹೊರವಲಯದಲ್ಲಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂದಿಸಿದ್ದು, 16410 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಡಾಲಿ ಕೈ ಹಿಡಿಯುವ ಡಾಕ್ಟರ್ ಚಿತ್ರದುರ್ಗದವರು | ಮುಂದುವರೆದ ಚಿತ್ರದುರ್ಗದ ಸಿನಿಮಾ ನಂಟು..
ವೆಂಕಟೇಶ್, ತಿಪ್ಪೇಸ್ವಾಮಿ, ಶಶಿಕುಮಾರ್, ಸಂತೋಷ್, ರವಿಕುಮಾರ್, ತಿಮ್ಮೇಶ್, ನಾಗರಾಜ್, ಮಂಜುನಾಥ್ ನಟರಾಜ್ ಬಂಧಿತರು.
ಡಿವೈಎಸ್‍ಪಿ ದಿನಕರ್ ಹಾಗೂ ಸಿಪಿಐ ಪ್ರಸಾದ್ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿವಿ ಸಾಗರ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ
ಚಿಕ್ಕಜಾಜೂರು ಠಾಣೆ ಪಿಎಸ್‍ಐ ನೇತ್ರಾವತಿ, ಸಿಬ್ಬಂದಿಗಳಾದ ಮಲ್ಲೇಶ್, ತಿಪ್ಪೇಶ್, ಜಹೀರ್, ಮಂಜುನಾಥ್, ಮನೋಹರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
