
CHITRADURGA NEWS | 02 OCTOBER 2024
ಚಿತ್ರದುರ್ಗ: ಚಿತ್ರದುರ್ಗಕ್ಕೂ ಸಿನಿಮಾ ರಂಗಕ್ಕೂ ಬಿಡಲಾರದ ನಂಟು. ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪುಟ್ಟಣ್ಣ ಕಣಗಾಲ್ ಸೇರಿದಂತೆ ಅನೇಕ ದಿಗ್ಗಜರು ಚಿತ್ರದುರ್ಗದೊಂದಿಗೆ ಬಾಂಧವ್ಯ ಬೆಸೆದುಕೊಂಡಿದ್ದಾರೆ.
ಈ ನಂಟು ಮುಂದುವರೆಯುತ್ತಲೇ ಬಂದಿದೆ. ಅನೇಕ ನಟರು ಚಿತ್ರದುರ್ಗದಲ್ಲಿ ಮದುವೆಯಾಗಿ ಅಳಿಯಂದಿರಾಗಿದ್ದಾರೆ. ಈ ಸಾಲಿನಲ್ಲಿ ಹಿರಿಯ ನಟ ದಿ.ದ್ವಾರಕೀಶ್ ಕೂಡಾ ಇದ್ದಾರೆ.

ಇದನ್ನೂ ಓದಿ: ದಶಕದ ನಂತರ ಕೋಡಿಬಿದ್ದ ಚಳ್ಳಕೆರೆಯ ಅಜ್ಜನಕೆರೆ | ಬಾಗೀನ ಅರ್ಪಣೆ
ಮತ್ತೋರ್ವ ನಟ ಶರತ್ ಲೋಹಿತಾಶ್ವ ಕೂಡಾ ಚಿತ್ರದುರ್ಗದ ಅಳಿಯ. ಹಿರಿಯ ನಟ ದೊಡ್ಡಣ್ಣ ತಮ್ಮ ಮಗಳನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ಕೊಟ್ಟು ಮದುವೆ ಮಾಡಿದ್ದಾರೆ. ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ದೊಡ್ಡಣ್ಣ ಅವರ ಅಳಿಯ.
ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈಗ ಈ ಸರಣಿ ಮುಂದುವರೆದುಕೊಂಡು ಹೋಗುತ್ತಿದ್ದು, ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ ಎನ್ನುತ್ತಲೇ ಚಿತ್ರ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿರುವ ನಟ ರಾಕ್ಷಸ ಡಾಲಿ ಧನಂಜಯ (Actor Dhananjay) ಚಿತ್ರದುರ್ಗದ ಅಳಿಯನಾಗುತ್ತಿದ್ದಾರೆ.
ಇದನ್ನೂ ಓದಿ: ವಿವಿ ಸಾಗರ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ
ಹೌದು, ಚಿತ್ರದುರ್ಗ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಅರಸಿಕೆರೆ ಮೂಲದ ನಟ ಡಾಲಿ ಧನಂಜಯ್ ಚಿತ್ರದುರ್ಗ ಮೂಲದ ಯುವತಿ ಜೊತೆಗೆ ಸಪ್ತಪದಿ ಇಡಲು ಅಣಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನವರು ಎನ್ನಲಾಗುತ್ತಿರುವ ಡಾ.ಧನ್ಯತಾ ಅವರೊಂದಿಗೆ ಡಾಲಿ ಧನಂಜಯ್ ಮದುವೆಯಾಗುತ್ತಿದ್ದಾರೆ.
ಡಾ.ಧನ್ಯತಾ ಅವರ ಊರು ಮಲ್ಲಾಡಿಹಳ್ಳಿ. ಅವರ ತಾತನ ಊರು ಶಿವಪುರ. ಆದರೆ, ಬಹಳ ವರ್ಷಗಳ ಹಿಂದೆ ಈ ಕುಟುಂಬ ಅರಸಿಕೆರೆಗೆ ತೆರಳಿದೆ ಎನ್ನುವ ಮಾಹಿತಿ ಹರಿದಾಡುತ್ತಿವೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಕನ್ನಡ ಭವನಕ್ಕೆ ಪ್ಲಾನ್ ತಯಾರಿಸಿ | ಆದ್ಯತೆಯ ಮೇಲೆ ಅನುದಾನ ಒದಗಿಸುವ ಭರವಸೆ
ಮೈಸೂರಿನಲ್ಲಿ ನಟ ಧನಂಜಯ್ ಹಾಗೂ ಧನ್ಯತಾ ಓದುವಾಗ ಪರಿಚಯ, ಸ್ನೇಹ ಉಂಟಾಗಿ ಪ್ರೀತಿ ಬೆಳೆದು ಈಗ ಮದುವೆಗೆ ಅಣಿಯಾಗಿದ್ದಾರೆ.
2025 ಫೆಬ್ರವರಿ 16 ರಂದು ಮೈಸೂರಿನ ಎಕ್ಸಿಬಿಷನ್ ಮೈದಾನದಲ್ಲಿ ಡಾಲಿ ಧನಂಜಯ, ಡಾ.ಧನ್ಯತಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ವಿಶೇಷ ಅಂದರೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲೇ ಡಾಲಿ ತಮ್ಮ ಗೆಳತಿ, ಮುಂದೆ ಪತ್ನಿಯಾಗುವ ಧನ್ಯತಾ ಅವರನ್ನು ಕರುನಾಡಿಗೆ ಪರಿಚಯಿಸಿದ್ದಾರೆ.
ಇದನ್ನೂ ಓದಿ: ಕೋಟೆ ನಾಡಿನಲ್ಲಿ ಕನ್ನಡದ ಕಂಪು | ಭುವನೇಶ್ವರಿ ತಾಯಿ ಭಾವಚಿತ್ರದ ಮೆರವಣಿಗೆ
ವಿಶೇಷ ಪೋಟೊ ಶೂಟ್ ಕೂಡಾ ಮಾಡಿಸಿದ್ದು, ಧನ್ಯತಾ ಅವರಿಗಾಗಿ ಕವನವನ್ನೂ ರಚಿಸಿ ತಾವು ಮದುವೆ ಆಗುತ್ತಿರುವ ವಿಚಾರ ಬಹಿರಂಗಪಡಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
