ಮುಖ್ಯ ಸುದ್ದಿ
Davangere University ಅಧ್ಯಾಪಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

CHITRADURGA NEWS | 24 SEPTEMBER 2024
ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾನಿಲಯ (Davangere University) ಪದವಿ ಕಾಲೇಜುಗಳ ಸಮಾಜಶಾಸ್ತ್ರ ಅಧ್ಯಾಪಕರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಿ ಆಯ್ಕೆ ನಡೆಯಿತು.
ಸಮಾಜಶಾಸ್ತ್ರ ಅಧ್ಯಾಪಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಹೆಚ್.ತಿಪ್ಪೇಸ್ವಾಮಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಉಪನ್ಯಾಸಕರಿಲ್ಲದೆ ಸೊರಗುತ್ತಿದೆ ಸರ್ಕಾರಿ ವಿಜ್ಞಾನ ಕಾಲೇಜು
ಉಪಾಧ್ಯಕ್ಷರಾಗಿ ಪ್ರೊ.ಹೆಚ್.ಎಸ್.ಶಿವಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹ ಪ್ರಾಧ್ಯಾಪಕ ಡಾ.ಡಿ.ಓ.ಸಿದ್ದಪ್ಪ, ಖಜಾಂಚಿಯಾಗಿ ಟಿ.ಬಿ.ಜ್ಯೋತಿ, ಸಹ ಕಾರ್ಯದರ್ಶಿ ಡಾ.ಎಸ್.ಎನ್.ವಿನಯ್, ಸಂಘಟನಾ ಕಾರ್ಯದರ್ಶಿ ಡಾ.ಎ.ಡಿ.ಬಸವರಾಜ್, ನಿರ್ದೇಶಕರಾಗಿ ಡಾ.ಎಸ್.ಎಂ.ಲತಾ, ಡಾ.ಹೆಚ್.ಬಿ.ಪ್ರಕಾಶ್, ಪ್ರೊ.ಎನ್.ಎಸ್.ಸಂಗಮೇಶ್ವರ್, ಪ್ರೊ..ಜಿ.ಟಿ.ಪ್ರದೀಪ್ ಕುಮಾರ್, ಡಾ.ನವೀನ್ ಗಂಗಾಧರ ಕೂಗಿ ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ ಎಂದು ದಾವಣಗೆರೆ ವಿವಿ ಪದವಿ ಕಾಲೇಜುಗಳ ಸಮಾಜಶಾಸ್ತ್ರ ಅಧ್ಯಾಪಕರ ಸಂಘ ಪ್ರಕಟಣೆ ತಿಳಿಸಿದೆ.
