
CHITRADURGA NEWS | 01 JANUARY 2026
ಚಿತ್ರದುರ್ಗ: ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟಿದ್ದು, ವರ್ಷದ ಮೊದಲ ದಿನವನ್ನು ಸ್ಮರಣೀಯವಾಗಿಸಲು ಫ್ರೆಂಡ್ಸ್, ಕುಟುಂಬದವರ ಜೊತೆಗೆ ಪ್ರವಾಸಿ ತಾಣಗಳು. ದೇವಸ್ಥಾನಗಳಿಗೆ ಹೋಗುವುದು ರೂಢಿ.
ಇದನ್ನೂ ಓದಿ: ಈ ಬಟ್ಟೆಗಳು ಚಳಿಗಾಲದಲ್ಲೂ ನಿಮ್ಮನ್ನು ಬೆಚ್ಚಗಿಡುತ್ತವೆಯಂತೆ

ಅದರಂತೆ ಹೊಸ ವರ್ಷ 2026 ನ್ನು ರಾತ್ರಿ ಭರ್ಜರಿಯಾಗಿ ಸ್ವಾಗತಿಸಿದ ಜನತೆ, ಇಂದು ಬೆಳಗ್ಗೆ ಪ್ರವಾಸಿ ತಾಣಗಳಿಗೆ ತೆರಳಿ ಕೇಕ್ ಕತ್ತರಿಸುವ ಮೂಲಕ ಸಭ್ರಮಾಚರಣೆ ಮಾಡುತ್ತಿದ್ದಾರೆ.
ಆಡುಮಲ್ಲೇಶ್ವರಕ್ಕೆ ಜನವೋ ಜನ:
ನಗರದ ಹೊರವಲಯದ ಆಡುಮಲ್ಲೇಶ್ವರ ಮೃಗಾಲಯಕ್ಕೆ ಬೆಳಗಿನಿಂದಲೇ ನೂರಾರು ಪ್ರವಾಸಿಗರು ಲಗ್ಗೆ ಹಾಕಿದ್ದಾರೆ. ಮಕ್ಕಳು, ಸ್ನೇಹಿತರ ಜೊತೆ ಹಸಿರು ಪರಿಸರದಲ್ಲಿ, ಪ್ರಾಣಿ, ಪಕ್ಷಿಗಳನ್ನು ನೋಡುತ್ತಾ ಹೊಸ ವರ್ಷದ ಆನಂದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ, ಹೊಸತ ಆಸ್ವಾಧಿಸುತ್ತಿದ್ದಾರೆ.
ಆಡುಮಲ್ಲೇಶ್ವರ ಕುರಿತ ಸುಂದರ ವೀಡಿಯೋ ಲಿಂಕ್ ಇಲ್ಲಿದೆ ಇಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ಒಮ್ಮೆ ಸುತ್ತಾಡಿ ಬನ್ನಿ
ಕೋಟೆಯಲ್ಲಿ ಪ್ರವಾಸಿಗರ ಸಂಭ್ರಮ:
ಕೋಟೆಯಲ್ಲಿ ಬಹುತೇಕ ಯುವಕ, ಯುವತಿಯರು ತುಂಬಿದ್ದಾರೆ. ಬಹುತೇಕ ಎಲ್ಲರೂ ಕೇಕ್ ತಂದು ಕತ್ತರಿಸುತ್ತಾ ಹೊಸ ವರ್ಷದ ಸಂಭ್ರಮ ಇಮ್ಮಡಿಗೊಳಿಸುತ್ತಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ – ಚಿಕ್ಕಜಾಜೂರು ರೈಲು ಸೇವೆ ಭಾಗಶಃ ರದ್ದು | ಕಾರಣ ಏನು ಗೊತ್ತಾ ?
ಕೆಲವರು ಕುಟುಂಬ ಸಮೇತ ಕೋಟೆಗೆ ಆಗಮಿಸಿ ರೌಂಡ್ಸ್ ಹಾಕುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಸೆಲ್ಪೀ, ರೀಲ್ಸ್ ಮಾಡುತ್ತಾ ಯುವಕ, ಯುವತಿಯರು ಹೊಸ ವರ್ಷವನ್ನು ದಾಖಲು ಮಾಡಿಟ್ಟುಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಮುರುಘಾ ವನದಲ್ಲಿ ಹೊಸ ವಿಹಾರ:
ಹಚ್ಚ ಹಸುರಿನ ಪರಿಸರ, ವಿಶಾಲವಾಗಿ ಮೈಚಾಚಿಕೊಂಡಿರುವ ಮುರುಘಾ ವನ ಪ್ರವಾಸಿಗರ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆ | ಪೊಲೀಸ್ ಇಲಾಖೆಯಿಂದ ಮಹತ್ವದ ಸೂಚನೆ
ಕುಟುಂಬ ಸಮೇತ ಬರುವ ಪ್ರವಾಸಿಗರು ಮುರುಘಾ ವನದಲ್ಲಿ ಸಂಜೆವರೆಗೂ ಇದ್ದೂ ಮಕ್ಕಳ ಜೊತೆಗೆ ಆಟೋಟಗಳಲ್ಲಿ ತಲಲೀನರಾಗಿ, ಅಲ್ಲಿಯೇ ಊಟ ಮಾಡಿ ಹೊಸ ವರ್ಷದ ಸಂಭ್ರಮವನ್ನು ಹೆಚ್ಚಿಸಿಕೊಳ್ಳುವ ದೃಶ್ಯಗಳು ಕಂಡು ಬರುತ್ತಿವೆ.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ:
ಇನ್ನೂ ಹೊಸ ವರ್ಷದ ದಿನ ದೇವರ ದರ್ಶನ ಮಾಡಿದರೆ ಒಳ್ಳೆಯದು ಎನ್ನುವ ಭಾವನೆ ಕೂಡಾ ಸಾಕಷ್ಟು ಜನರಲ್ಲಿರುತ್ತದೆ. ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ, ಬರಗೇರಮ್ಮ, ಏಕನಾಥೇಶ್ವರಿ ದೇಗುಲ, ಉಚ್ಚೆಂಗೆಲ್ಲಮ್ಮ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು.
ನಾಯಕನಹಟ್ಟಿ, ಹಾಲುರಾಮೇಶ್ವರ, ದಶರಥರಾಮೇಶ್ವರ, ಪ್ರಸನ್ನ ಗಣಪತಿ ಸೇರಿದಂತೆ ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ, ಭಕ್ತರಿಗೆ ದರ್ಶನಕೆಕ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಕೆಲಸದ ಮೇಲೆ ಗಮನಹರಿಸಲು ತೊಂದರೆಯಾಗುತ್ತಿದ್ದರೆ ಈ ಪೋಷಕಾಂಶಗಳ ಕೊರತೆಯೇ ಕಾರಣ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
