CHITRADURGA NEWS | 31 DECEMBER 2025
ಚಿತ್ರದುರ್ಗ-ಚಿಕ್ಕಜಾಜೂರು ನಡುವಿನ ರೈಲು ಸೇವೆಗಳ ಭಾಗಶಃ ರದ್ದು ವಿಸ್ತರಣೆ

ಚಿತ್ರದುರ್ಗ: ಕಡಿಮೆ ಪ್ರಯಾಣಿಕರ ಸಂಖ್ಯೆಯ ಕಾರಣದಿಂದಾಗಿ, ರೈಲು ಸಂಖ್ಯೆ 17347/17348 ಎಸ್ಎಸ್ಎಸ್ ಹುಬ್ಬಳ್ಳಿ – ಚಿತ್ರದುರ್ಗ – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲುಗಳ ಚಿಕ್ಕಜಾಜೂರು ಮತ್ತು ಚಿತ್ರದುರ್ಗ ನಡುವಿನ ಭಾಗಶಃ ರದ್ದತಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿಗೆ ನಡೆದ ಸಂದರ್ಶನದ ವಿವರ
ಈ ಮೊದಲು ದಿನಾಂಕ 31-12-2025ರವರೆಗೆ ಸೂಚಿಸಲಾಗಿದ್ದ, ಈ ಭಾಗಶಃ ರದ್ದತಿಯು, ಈಗ ದಿನಾಂಕ 01-01-2026 ರಿಂದ 31-03-2026ರವರೆಗೆ ಜಾರಿಯಲ್ಲಿರುತ್ತದೆ.
ಅದರಂತೆ, ರೈಲು ಸಂಖ್ಯೆ 17347 ಎಸ್ಎಸ್ಎಸ್ ಹುಬ್ಬಳ್ಳಿ – ಚಿತ್ರದುರ್ಗ ದೈನಂದಿನ ಕಾಯ್ದಿರಿಸದ ಎಕ್ಸ್’ಪ್ರೆಸ್ ರೈಲು ಚಿತ್ರದುರ್ಗದ ಬದಲಿಗೆ ಚಿಕ್ಕಜಾಜೂರಿನಲ್ಲಿ ತನ್ನ ಸೇವೆಯನ್ನು ಕೊನೆಗೊಳಿಸಲಿದೆ. ಮತ್ತು ರೈಲು ಸಂಖ್ಯೆ 17348 ಚಿತ್ರದುರ್ಗ – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲು ಚಿತ್ರದುರ್ಗದ ಬದಲಿಗೆ ಚಿಕ್ಕಜಾಜೂರಿನಿಂದಲೇ ಹೊರಡಲಿದೆ.
ಈ ಅವಧಿಯಲ್ಲಿ ಚಿತ್ರದುರ್ಗ ಮತ್ತು ಚಿಕ್ಕಜಾಜೂರು ನಡುವಿನ ರೈಲು ಸೇವೆಗಳು ಸಂಪೂರ್ಣವಾಗಿ ರದ್ದುಗೊಂಡಿರುತ್ತವೆ.
ವಿದಿಶಾ ನಿಲ್ದಾಣದಲ್ಲಿ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲು ನಿಲುಗಡೆ:
ಭೋಪಾಲ್ ಜಂಕ್ಷನ್ ಮತ್ತು ವೀರಾಂಗಣ ಲಕ್ಷ್ಮೀಬಾಯಿ ಝಾನ್ಸಿ ಜಂಕ್ಷನ್ ನಡುವೆ ಇರುವ ವಿದಿಶಾ ನಿಲ್ದಾಣದಲ್ಲಿ, ರೈಲು ಸಂಖ್ಯೆ 12629/12630 ಯಶವಂತಪುರ – ಹಜರತ್ ನಿಜಾಮುದ್ದೀನ್ – ಯಶವಂತಪುರ ಸಂಪರ್ಕ ಕ್ರಾಂತಿ ದ್ವಿ-ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿಗೆ ಪ್ರಾಯೋಗಿಕ ನಿಲುಗಡೆ ನೀಡಲು ಪಶ್ಚಿಮ ಮಧ್ಯ ರೈಲ್ವೆ ನಿರ್ಧರಿಸಿದೆ.
ಇದನ್ನೂ ಓದಿ: ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ರೈಲು ಸಂಖ್ಯೆ 12629 (ಯಶವಂತಪುರ–ಹಜರತ್ ನಿಜಾಮುದ್ದೀನ್): ಈ ರೈಲು 2026ರ ಜನವರಿ 1ರಿಂದ ಜೂನ್ 30ರವರೆಗೆ ವಿದಿಶಾ ನಿಲ್ದಾಣಕ್ಕೆ ಮಧ್ಯರಾತ್ರಿ 12.45ಕ್ಕೆ ಆಗಮಿಸಿ, 12.47ಕ್ಕೆ ನಿರ್ಗಮಿಸಲಿದೆ.
ರೈಲು ಸಂಖ್ಯೆ 12630 (ಹಜರತ್ ನಿಜಾಮುದ್ದೀನ್–ಯಶವಂತಪುರ): ಈ ರೈಲು 2025ರ ಡಿಸೆಂಬರ್ 31ರಿಂದ 2026ರ ಜೂನ್ 30ರವರೆಗೆ ಸಂಜೆ 5.28ಕ್ಕೆ ವಿದಿಶಾ ನಿಲ್ದಾಣಕ್ಕೆ ಆಗಮಿಸಿ, 5.30ಕ್ಕೆ ಪ್ರಯಾಣ ಮುಂದುವರಿಸಲಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
