CHITRADURGA NEWS | 09 JUNE 2024
ಚಿತ್ರದುರ್ಗ: ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯಿಂದ ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಪುಸ್ತಕ ಆಹ್ವಾನಿಸಲಾಗಿದೆ.
2023-24 ಸಾಲಿನಲ್ಲಿ ಪ್ರಕಟವಾದ, ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗಿದೆ. ಪ್ರಶಸ್ತಿಗೆ ಕನ್ನಡದ ಕೃತಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಹಿಂದಿ ಮತ್ತು ಸಂಸ್ಕೃತ ಕೃತಿಗಳಿಗೆ ಪುಟ್ಟರಾಜ ಸಾಹಿತ್ಯ ಸಮ್ಮಾನ ನೀಡಲಾಗುತ್ತದೆ.

ಪ್ರಶಸ್ತಿಯು 5 ಸಾವಿರ ರೂ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರಶಸ್ತಿಗೆ ಆಯ್ಕೆಯಾದ ಕೃತಿಕರ್ತರಿಗ ಪುಣ್ಯಸ್ಮರಣೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವಿವಿಧ ಪ್ರಕಾರದ 10 ಕೃತಿಗಳನ್ನು ಗುರುತಿಸಿ ವರ್ಷದ ಶ್ರೇಷ್ಠ ಕೃತಿ ರತ್ನ ಸಮ್ಮಾನ ನೀಡಿ ಗೌರವಿಸಲಾಗುತ್ತದೆ.
ಕ್ಲಿಕ್ ಮಾಡಿ ಓದಿ: ಫೋನ್‌ಪೇ ಆ್ಯಕ್ಟಿವೇಷನ್ ಕಾಲ್ | ಕೆಲವೇ ನಿಮಿಷಕ್ಕೆ ₹1.75 ಲಕ್ಷ ವಂಚನೆ
ಆಸಕ್ತ ಲೇಖಕರು ತಮ್ಮ ಭಾವಚಿತ್ರ ಸಹಿತ ಪರಿಚಯ ಪತ್ರ, ಎಪ್ರಿಲ್ 1, 2023 ರಿಂದ 2024 ಮಾರ್ಚ್ 31 ರೊಳಗಾಗಿ ಪ್ರಕಟವಾದ 3 ಕೃತಿಗಳೊಂದಿಗೆ 10 ಜುಲೈ 2024 ರ ಒಳಗಾಗಿ ಸಿ.ಕೆ.ಎಚ್.ಶಾಸ್ತ್ರೀ (ಕಡಣಿ) ಸದಸ್ಯರು: ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಆಯ್ಕೆ ಸಮಿತಿ ‘ಗಿರಿಜಾ ನಿವಾಸ’ ಪಂಚಾಕ್ಷರಿ ನಗರ 3ನೆಯ ಅಡ್ಡರಸ್ತೆ ಗದಗ-582101. ವಿಳಾಸಕ್ಕ ಸಲ್ಲಿಸಬೇಕು ಎಂದು ಕಾರ್ಯಕಾರಿಣಿ ಸದಸ್ಯೆ ಡಾ. ಸುಮಾ ಹಡಪದ ಹಳಿಯಾಳ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
