By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ನೈಸರ್ಗಿಕ ಕೃಷಿ ಕಾರ್ಯಾಗಾರ
    ನೈಸರ್ಗಿಕ ಕೃಷಿಗೆ ಉತ್ತೇಜನ | ಜಿಲ್ಲೆಯಲ್ಲಿ 500 ಬಯೋಡೈಜೆಸ್ಟರ್ ಘಟಕ ಸ್ಥಾಪನೆ ಗುರಿ
    33 minutes ago
    DC ramya
    ಮಾಧ್ಯಮ ವರದಿಗಳಿಗೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರ | ಡಿಸಿ ರಮ್ಯ
    57 minutes ago
    ಭದ್ರೆಗೆ ಸಾಣೇಹಳ್ಳಿ ಬಳಿ ಬಾಗೀನ ಅರ್ಪಿಸಿದ ಪಂಡಿತಾರಾಧ್ಯ ಶ್ರೀ
    2 hours ago
    ಎಲ್ಲೀವರೆಗೆ ಹರಿದು ಬಂದಳು ಗೊತ್ತಾ ಭದ್ರೆ | ಬಯಲು ಸೀಮೆಯಲ್ಲಿ ಸಂಭ್ರಮ
    5 hours ago
    ವಚನಾಭಿಷೇಕ ಕಾರ್ಯಕ್ರಮ
    ರಾಜ್ಯ, ರಾಷ್ಟ್ರಮಟ್ಟದ ಪ್ರಖ್ಯಾತರು, ರಾಷ್ಟ್ರಕವಿಗಳು ಎಸ್‌ಜೆಎಂ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದಾರೆ | ಡಾ.ಬಸವಕುಮಾರ ಸ್ವಾಮೀಜಿ
    13 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    3 weeks ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    4 weeks ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    2 months ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    2 months ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    2 months ago
  • ತಾಲೂಕು
    ತಾಲೂಕುShow More
    ಮಾರಿಕಾಂಭ ದೇವಿಯ ಪರವು ಆಚರಣೆ
    ಮಾರಿಕಾಂಭ ದೇವಿಯ ಪರವು ಆಚರಣೆ | ಶತಮಾನದ ಪರಂಪರೆ ಮುಂದುವರಿಕೆ
    4 days ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    2 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    4 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    2 months ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 7 ಸೆಪ್ಟಂಬರ್‌ | ಇಂದಿನ ಅಡಿಕೆ ರೇಟ್‌
    1 day ago
    arecanut price list
    ಅಡಿಕೆ ಧಾರಣೆ | ಸೆಪ್ಟಂಬರ್‌ 4 | ಯಾವ ಅಡಿಕೆಗೆ ಎಷ್ಟು ರೇಟ್‌
    4 days ago
    arecanut price list
    ಅಡಿಕೆ ಧಾರಣೆ | ಸೆ.3 | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ವಹಿವಾಟು
    5 days ago
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    3 months ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಸೆಪ್ಟೆಂಬರ್ 08 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು, ಹಠಾತ್ ಆರ್ಥಿಕ ಲಾಭ
    13 hours ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 07 | ಉದ್ಯೋಗದಲ್ಲಿ ಅಧಿಕಾರಿಗಳಿಂದ ಬೆಂಬಲ, ಅರೋಗ್ಯದಲ್ಲಿ ಎಚ್ಚರ
    2 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 06 | ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ, ಹಠಾತ್ ಆರ್ಥಿಕ ಲಾಭದ ಸೂಚನೆ
    3 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 05 | ಶ್ರಮಕ್ಕೆ ತಕ್ಕ ಫಲಿತಾಂಶ ಅರೋಗ್ಯದಲ್ಲಿ ಜಾಗೃತಿ ವಹಿಸಿ
    4 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 04 | ಉದ್ಯೋಗಗಳಲ್ಲಿ ಕೆಲಸದ ಒತ್ತಡ, ದೂರದ ಪ್ರಯಾಣ ಬೇಡ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 08 | ಹತ್ತಿ ರೇಟ್ ಎಷ್ಟಿದೆ?
    5 hours ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 07 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್ ಎಷ್ಟಿದೆ?
    1 day ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 05 | ಹತ್ತಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 04 | ರಾಗಿ, ಶೇಂಗಾ ರೇಟ್…..
    4 days ago
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
    5 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    Inauguration of Teachers' Day Celebrations
    ಗುರು ಸ್ಥಾನ ಪರಮ ಪವಿತ್ರ | ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು | ಶಾಸಕ ಎಂ.ಚಂದ್ರಪ್ಪ
    3 days ago
    Inauguration of the Public Service Movement meeting
    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ | ಶಾಸಕ ಚಂದ್ರಪ್ಪ
    3 days ago
    ತಾಳಿಕಟ್ಟೆ–ದೊಗ್ಗನಾಳ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ | ಶಾಸಕ ಎಂ.ಚಂದ್ರಪ್ಪ
    1 week ago
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    3 weeks ago
    ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
    ಮನೆ ಮನೆಗೆ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉಚಿತ ಶಿಕ್ಷಣ–ಸೌಲಭ್ಯ | ಶಾಸಕ ಚಂದ್ರಪ್ಪ
    1 month ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    3 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    3 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    4 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    5 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    7 months ago
  • ಹೊಸದುರ್ಗ
    ಹೊಸದುರ್ಗShow More
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    2 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    4 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    2 months ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    3 months ago
  • Life Style
    Life StyleShow More
    H1N1
    ಹಂದಿ ಜ್ವರ (ಪ್ಲೂ)ಬಂದರೆ ಏನು ತಿನ್ನಬೇಕು? ತಿಳಿಯಿರಿ
    12 hours ago
    hair loss in men
    ಪುರುಷರ ಕೂದಲು ಉದುರುವುದನ್ನು ತಡೆಯಲು ಯಾವ ಎಣ್ಣೆ ಹೆಚ್ಚು ಪರಿಣಾಮಕಾರಿ?
    13 hours ago
    Women's breasts
    ಮಹಿಳೆಯರು ಸ್ತನಗಳನ್ನು ಆರೋಗ್ಯವಾಗಿಡಲು ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
    2 days ago
    Pineapple
    ಅನಾನಸ್‌ನ ಹಣ್ಣಿನ ಮಧ್ಯದಲ್ಲಿರುವ ಗಟ್ಟಿ ಭಾಗ ತಿಂದರೆ ಏನಾಗುತ್ತದೆ ಗೊತ್ತಾ?
    2 days ago
    white and blue conch flowers
    ಬಿಳಿ ಮತ್ತು ನೀಲಿ ಶಂಖಪುಷ್ಪ ಹೂಗಳಲ್ಲಿ ಸೇವಿಸಲು ಯಾವುದು ಉತ್ತಮ?
    3 days ago
Reading: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

News Desk Chitradurga News
Last updated: 5 April 2025 20:06
News Desk Chitradurga News
1 year ago
Share
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
SHARE

CHITRADURGA NEWS | 05 APRIL 2025

ಚಿತ್ರದುರ್ಗ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಇಲ್ಲಿನ ಒನಕೆ ಓಬವ್ವ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

Also Read: ಬೆಸ್ಕಾಂ ಎಇಇ ಸೇರಿ ಮೂರು ಜನರಿಗೆ ಜೈಲು ಶಿಕ್ಷೆ | ವಿದ್ಯುತ್‌ ತಗುಲಿ ಬಾಲಕ ಮೃತಪಟ್ಟಿದ್ದ ಪ್ರಕರಣ

ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಎನ್‌.ಮಹೇಶ್‌ ಮಾತನಾಡಿ, ಐದು ಗ್ಯಾರೆಂಟಿಗಳನ್ನು ಕ್ರಾಂತಿಕಾರಿ ಯೋಜನೆಗಳು ಎಂಬಂತೆ ಬಿಂಬಿಸಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರ ಪಡೆಯುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಜನವಿರೋಧಿ ಆರ್ಥಿಕ ನೀತಿ ಅನುಸರಿಸುತ್ತಿದೆ ಎಂದು ದೂರಿದರು. ಗಂಡನ ಜೇಬಿಗೆ ತೆರಿಗೆ ಹಾಕಿ ಹತ್ತು ರೂ. ಪಡೆದು ಹೆಂಡತಿಗೆ 2 ರೂ ಕೊಡುತ್ತಿದ್ದಾರೆ.

ಜನರ ಬದುಕಿಗೆ ಹೊರೆಯಾಗದಂತೆ ತರುವ ಯೋಜನೆಗಳು ಜನ ಕಲ್ಯಾಣ ಯೋಜನೆಗಳು. ಬಿಜೆಪಿಯವರು ಶೇ. 40 ಕಮಿಷನ್ ಪಡೆಯುತ್ತಿದ್ದಾರೆ, ಅದನ್ನು ನಿಲ್ಲಿಸಿದರೆ ಗ್ಯಾರೆಂಟಿ ಯೋಜನೆಗೆ ಹಣ ಸಾಕಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಎಲ್ಲ ತನಿಖಾ‌ ಸಂಸ್ಥೆಗಳು ಶೇ.40ಕ್ಕೆ‌ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ವರದಿ ಕೊಟ್ಟಿವೆ ಎಂದರು.

Also Read: ಏ.15 ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ | ಯಾವ ಯಾವ ಕ್ರೀಡೆಗಳಲ್ಲಿ ಭಾಗವಹಿಸಬಹುದು? ಇಲ್ಲಿದೆ ಮಾಹಿತಿ

ಚಿತ್ರದುರ್ಗದ ನಗರಸಭೆ, ಪಪಂ ವ್ಯಾಪ್ತಿಯಲ್ಲಿ ನೀರಿನ ನಲ್ಲಿ ಸಂಪರ್ಕಕ್ಕೆ ಮೂರು ಸಾವಿರ, 11 ಸಾವಿರ ಆಗಿದೆ. ಆರ್ಟಿಸಿ ಗೆ 30, ವಿದ್ಯುತ್ ಪರಿವರ್ತಕ 30 ಸಾವಿರದಿಂದ ಮೂರು ಲಕ್ಷ ಆಗಿದೆ. ನೀರಿನಿಂದ ನೀರಾ ವರೆಗೆ ಎಲ್ಲ ಹಂತದಲ್ಲೂ ಇದು ಜನ ವಿರೋಧಿ ಆಗಿದೆ. ಇದು ದಲಿತ ವಿರೋಧಿ ಸರ್ಕಾರ.

ಶೇ.80 ರಷ್ಟು ದಲಿತರ ಮತ ಪಡೆದು, ಗಂಗಾ ಕಲ್ಯಾಣಕ್ಕೆ ಹಣ ಕೊಟ್ಟಿಲ್ಲ. ಎಸ್ಇಪಿ, ಟಿಎಸ್ಪಿ 38 ಸಾವಿರ ಕೋಟಿ ಗ್ಯಾರೆಂಟಿಗೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸಂವಿಧಾನದ ಪುಸ್ತಕ ಹಿಡಿದು ಓಡಾಡುತ್ತಾರೆ.‌ ಆದರೆ, ಇವರು ಸಂವಿಧಾನ ವಿರೋಧಿಗಳು. ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡಲು ಅವಕಾಶವಿದೆ. ಆದರೆ, ಧರ್ಮ ಆಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ.

ಗುತ್ತಿಗೆಯಲ್ಲಿ ಮುಸ್ಲೀಂ ಸಮುದಾಯಕ್ಕೆ ಶೇ.೪ ರಷ್ಟು ಮೀಸಲಾತಿ ನೀಡುವುದನ್ನು ಇವರು ಬೆಂಬಲಿಸಿ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಇದನ್ನು ಪ್ರಶ್ನೆ ಮಾಡಿ ಸಂವಿಧಾನದ ಪರವಾಗಿ ಮಾತನಾಡಿದ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ್ದಾರೆ ಎಂದರು.

Also Read: ಗೋವಿಂದ ಕಾರಜೋಳ ಭಾಷಣಕ್ಕೆ ಆಕ್ಷೇಪ | ಆರೆಸ್ಸೆಸ್ಸ್‌, ಮೋಹನ್‌ ಭಾಗವತ್‌ ಹೆಸರಿಗೆ ತಕರಾರು

ಇದು ಮುಸ್ಲೀಂ ವಿರೋಧಿ ಧೋರಣೆಯ ಮಾತಲ್ಲ, ಅಲ್ಲಿರುವ ಹಿಂದುಳಿದ 19 ಜಾತಿಗಳಿಗೆ ಮೀಸಲಾತಿ ಸಿಕ್ಕಿದೆ, ಆದರೆ, ಸಮವಿಧಾನದ ಸೂಚನೆ ನಿರಾಕರಿಸಿ ಮತ ಬ್ಯಾಂಕ್ ಕಾರಣಕ್ಕೆ ಮೀಸಲಾತಿ ಕೊಟ್ಟು ಸಂವಿಧಾನ ವಿರೋಧಿ ಕೆಲಸ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದೆ. ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಗೆ ಪೊಲೀಸರ ಮೂಲಕ ಹೆದರಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಡೆತ್ ನೋಟ್ ನಲ್ಲಿ ಶಾಸಕರಾದ ಪೊನ್ನಣ್ಣ, ಮಂತರ್ ಗೌಡ ಹೆಸರು ಬರೆದಿದ್ದಾರೆ. ಆದರೆ, ಅವರ ಹೆಸರು ಎಫ್‌ಐಆರ್‌ನಲ್ಲಿ ಇಲ್ಲ ಎಂದರು.

ಕೋಲಾರದ ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ, ನಾವು ಮುಸ್ಲೀಂ ವಿರೋಧಿಗಳಲ್ಲ. ಬಹುಸಂಖ್ಯಾತರ ಅನುದಾನವನ್ನು ಅಲ್ಪ ಸಂಖ್ಯಾತರಿಗೆ ಕೊಡುತ್ತಿರುವ ಸಿದ್ದರಾಮಯ್ಯನವರಿಗೆ ಬಹುಸಂಖ್ಯಾತರ ಮತ ಬೇಡವೇ ಎಂದು ಪ್ರಶ್ನಿಸಿದರು.

Also Read: ಬಿಸಿಲಿಗೆ ನಿಮ್ಮ ಮುಖದ ಚರ್ಮ ಸುಡುತ್ತಿದೆಯೇ? ಹಾಗಾದ್ರೆ ಕಿಚನ್ನಲ್ಲಿ ಸಿಗುವ ಈ 6 ಪದಾರ್ಥಗಳನ್ನು ಮುಖಕ್ಕೆ ಬಳಸಿ

ಪೊಲೀಸ್ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಕೊಡಗಿನ ಬಿಜೆಪಿ ಕಾರ್ಯಕರ್ತ ಇಬ್ಬರು ಶಾಸಕರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‌ಆದರೆ, ಎಫ್ಐಆರ್ ನಲ್ಕಿ ಹೆಸರು ಸೇರಿಸಿಲ್ಲ. ಪೊಲೀಸರು ಚೇಲಾಗಳ ರೀತಿ ಕೆಲಸ ಮಾಡಬಾರದು.‌ ಮುಂದೆ ನಮ್ಮ ಸರ್ಕಾರ ಬರುವುದಿಲ್ಲವೇ ಎಂದ ಅವರು, ಕಾನೂನು ಕೈಗೆತ್ತಿಕೊಳ್ಳುವವರು ಯಾರೇ ಆಗಿದ್ದರೂ ಬಗ್ಗು ಬಡಿದರೆ ಮಾತ್ರ ಪೊಲೀಸ್‌ ಇಲಾಖೆ ಬಗ್ಗೆ ಜನರಿಗೆ ವಿಶ್ವಾಸ ಬರುತ್ತದೆ ಎಂದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ರಾಜ್ಯ ಸರ್ಕಾರದ ನೀತಿಗಳ ವಿರುದ್ಧವಾಗಿ ಮಾತನಾಡಿದ್ದಕ್ಕೆ 18 ಶಾಸಕರನ್ನು ಅಮಾನತು ಮಾಡಿದ್ದಾರೆ. ಯಾವ ಸ್ಪೀಕರ್ ಕೂಡಾ ಇಂತಹ ತೀರ್ಮಾನ ಮಾಡಿರಲಿಲ್ಲ. ವಿಪಕ್ಷಗಳ ಕೆಲಸವೇ ಪ್ರತಿಭಟಿಸುವುದು. ಇಂತಹ ಜನವಿರೋಧಿ ಸರಕಾರವನ್ನು ಹಿಂದೆಂದೂ ನೋಡಿರಲಿಲ್ಲ ಎಂದರು.

ಎಲ್ಲ ದರಗಳನ್ನು ಹೆಚ್ಚಿಸಿ ಜನ ಬದುಕುವುದು ಕಷ್ಟ ಆಗಿದೆ. ಯಾವ ಪುರುಷಾರ್ಥಕ್ಕೆ ಹೀಗೆ ಮಾಡಿದ್ದೀರಿ. ಸಾರ್ವಜನಿಕರ ಮೇಲೆ ಬರೆ ಎಳೆದು ಆಟ ಆಡುತ್ತಿರುವ ಈ ಸರ್ಕಾರ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Also Read: ಮರದ ದಿಮ್ಮಿ ಕಳ್ಳತನ ಯತ್ನ | ಗಿಡ ನೆಟ್ಟು ಬೆಳೆಸುವ ಶಿಕ್ಷೆ ವಿಧಿಸಿದ ನ್ಯಾಯಾಲಯ

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಈ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದ‌ ಸಾಧನೆ ಬೆಲೆ ಏರಿಕೆ. ಗಾಳಿ ಬಿಟ್ಟು ಉಳಿದೆಲ್ಲಕ್ಕೂ ತೆರಿಗೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಸೇವಿಸುವ ಗಾಳಿಗೂ ತೆರಿಗೆ ಹಾಕುತ್ತಾರೆ ಎಂದರು.

ಭ್ರಷ್ಟಾಚಾರ, ಅನೈತಿಕತೆಗೆ ಹೆಸರಾದ ಸರ್ಕಾರ. ಹಿರಿಯ ಸಚಿವ ಕೆ‌ಎನ್.ರಾಜಣ್ಣ ವಿಧಾನಸಭೆಯಲ್ಲಿ ನೋವು ತೋಡಿಕೊಂಡಿದ್ದಾರೆ. ಹನಿಟ್ರ್ಯಾಪ್, ಸಿಡಿ ಪ್ಯಾಕ್ಟರಿ ಇದೆ ಎಂದು ಹೇಳಿದ್ದಾರೆ. 12 ಜನ‌ ಅಧಿಕಾರಿಗಳು, ಹತ್ತು ಗುತ್ತಿಗೆದಾರರು ಆತ್ಮಹತ್ತೆ ಮಾಡಿಕೊಂಡಿದ್ದಾರೆ. ದುರಾದೃಷ್ಟ ನಮ್ಮ ಕಾರ್ಯಕರ್ತರ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣರಾದ ಇಬ್ಬರು ಶಾಸಕರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌, ಮುಖಂಡರಾದ ಕೆ.ಟಿ.ಕುಮಾರಸ್ವಾಮಿ, ಡಾ.ಸಿದ್ಧಾರ್ಥ ಗುಂಡಾರ್ಪಿ, ಬಾಳೆಕಾಯಿ ರಾಮದಾಸ್‌, ಸಂಪತ್‌ಕುಮಾರ್‌, ಭಾರ್ಗವಿ ದ್ರಾವಿಡ್‌, ಪಾಲಯ್ಯ, ನಾಗರಾಜ್‌ ಬೇದ್ರೆ, ಜೈಪಾಲ್‌, ಸೂರನಹಳ್ಳಿ ಶ್ರೀನಿವಾಸ್‌, ಎಚ್‌.ಎನ್‌.ಲೋಕೇಶ್‌, ಮಲ್ಲಿಕಾರ್ಜುನ್‌, ಶ್ರೀರಾಮರೆಡ್ಡಿ, ಶ್ಯಾಮಲಾ ಶಿವಪ್ರಕಾಶ್‌, ಜಗದೀಶ್‌, ಪಂಪಾ, ಸುರೇಶ್‌ ಇತರರಿದ್ದರು.

ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಡವರನ್ನು ಬಲಿ ಕೊಡುತ್ತಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಬೆಲೆ ಏರಿಕೆಯಿಂದ ಜನಜೀವನ ದುಸ್ಥರವಾಗಿದೆ. ಇದನ್ನು ಪ್ರಶ್ನಿಸಿದರೆ ಸದನದಲ್ಲಿ ಸ್ಪೀಕರ್ ಮೂಲಕ ಶಾಸಕರನ್ನು ಹೊರಗೆ ಹಾಕಿಸುತ್ತಿದ್ದಾರೆ. | ಕೆ.ಎಸ್‌.ನವೀನ್‌, ವಿಧಾನ ಪರಿಷತ್‌ ಸದಸ್ಯರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:BJPBJP workersChitradurgaChitradurga newsChitradurga UpdatescongressHoney TrapKannada Latest NewsKannada Newsprice riseprotestState Governmentಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಕಾಂಗ್ರೆಸ್ಚಿತ್ರದುರ್ಗಚಿತ್ರದುರ್ಗ ನ್ಯೂಸ್ಪ್ರತಿಭಟನೆಬಿಜೆಪಿಬಿಜೆಪಿ ಕಾರ್ಯಕರ್ತರುಬೆಲೆ ಏರಿಕೆರಾಜ್ಯ ಸರ್ಕಾರಹನಿಟ್ರ್ಯಾಪ್
Share This Article
Facebook Email Print
Previous Article ಏ.15 ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ | ಯಾವ ಯಾವ ಕ್ರೀಡೆಗಳಲ್ಲಿ ಭಾಗವಹಿಸಬಹುದು? ಇಲ್ಲಿದೆ ಮಾಹಿತಿ
Next Article ಏ.15ರ ವರೆಗೆ ಪ್ರೊ.ಬಿ.ಕೆ.ರವಿ ಅಮೆರಿಕದ ಶೈಕ್ಷಣಿಕ ಪ್ರವಾಸ
Leave a Comment

Leave a Reply Cancel reply

Your email address will not be published. Required fields are marked *

ನೈಸರ್ಗಿಕ ಕೃಷಿ ಕಾರ್ಯಾಗಾರ
ನೈಸರ್ಗಿಕ ಕೃಷಿಗೆ ಉತ್ತೇಜನ | ಜಿಲ್ಲೆಯಲ್ಲಿ 500 ಬಯೋಡೈಜೆಸ್ಟರ್ ಘಟಕ ಸ್ಥಾಪನೆ ಗುರಿ
ಮುಖ್ಯ ಸುದ್ದಿ
DC ramya
ಮಾಧ್ಯಮ ವರದಿಗಳಿಗೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರ | ಡಿಸಿ ರಮ್ಯ
ಮುಖ್ಯ ಸುದ್ದಿ
ಭದ್ರೆಗೆ ಸಾಣೇಹಳ್ಳಿ ಬಳಿ ಬಾಗೀನ ಅರ್ಪಿಸಿದ ಪಂಡಿತಾರಾಧ್ಯ ಶ್ರೀ
ಮುಖ್ಯ ಸುದ್ದಿ
ಎಲ್ಲೀವರೆಗೆ ಹರಿದು ಬಂದಳು ಗೊತ್ತಾ ಭದ್ರೆ | ಬಯಲು ಸೀಮೆಯಲ್ಲಿ ಸಂಭ್ರಮ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up