
CHITRADURGA NEWS | 05 April 2025
ಬೇಸಿಗೆಯಲ್ಲಿ ಹೊರಗಡೆ ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ಹಾಗಾಗಿ ನೀವು ಹೊರಗಡೆ ಹೋದಾಗ ಬಿಸಿಲಿನ ತಾಪಕ್ಕೆ ನಿಮ್ಮ ಚರ್ಮ ಸುಡುತ್ತದೆ. ಇದರಿಂದ ಮುಖದ ಚರ್ಮದಲ್ಲಿ ಟ್ಯಾನ್ಗಳು ಮೂಡುತ್ತವೆ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಇದಕ್ಕಾಗಿ ಬ್ಯೂಟಿ ಪಾರ್ಲರ್ಗೆ ಹೋಗಿ ಹಣ ಖರ್ಚು ಮಾಡುವ ಬದಲು ಬೇಸಿಗೆಯ ಬಿಸಿಲಿಗೆ ನಿಮ್ಮ ಮುಖದ ಚರ್ಮವನ್ನು ತಂಪಾಗಿಸಿ ಆರೋಗ್ಯವಾಗಿಡಲು ನಿಮ್ಮ ಕಿಚನ್ನಲ್ಲಿ ಸುಲಭವಾಗಿ ಸಿಗುವಂತಹ ಈ ಪದಾರ್ಥಗಳನ್ನು ಮುಖಕ್ಕೆ ಹಚ್ಚಿ.
ಓಟ್ ಮೀಲ್ :
ಇದು ಕೇವಲ ಉಪಾಹಾರಕ್ಕೆ ಮಾತ್ರವಲ್ಲ, ಇದು ಬಿಸಿಲಿನಿಂದ ಬಳಲುವ ಚರ್ಮದ ಸಮಸ್ಯೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಉರಿಯೂತ ನಿವಾರಕ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಓಟ್ಸ್ ಚರ್ಮದ ಕಿರಿಕಿರಿಯನ್ನು ಕಡಿಮೆಮಾಡುತ್ತದೆ ಮತ್ತು ಕೆಂಪಾಗುವುದನ್ನು ಕಡಿಮೆ ಮಾಡುತ್ತದೆ. ಒಂದು ಕಪ್ ಓಟ್ಸ್ ಅನ್ನು ನುಣ್ಣಗೆ ಪುಡಿ ಮಾಡಿ, ತಂಪಾದ ನೀರಿನಲ್ಲಿ ಬೆರೆಸಿ, 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಮುಖಕ್ಕೆ ಹಚ್ಚಿ.

ಮೊಸರು:
ಬೇಸಿಗೆಯಲ್ಲಿ ನಿಮ್ಮ ಫ್ರಿಜ್ನಲ್ಲಿ ಯಾವಾಲೂ ಮೊಸರು ಇದ್ದೇಇರುತ್ತದೆ. ಈ ಮೊಸರಿನಿಂದ ಬೇಸಿಗೆಯಲ್ಲಿ ನಿಮ್ಮ ಚರ್ಮವನ್ನು ಕಾಪಾಡಿಕೊಳ್ಳಬಹುದು. ಮೊಸರು ಪ್ರೋಬಯಾಟಿಕ್ಗಳು ಮತ್ತು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಹಾನಿಗೊಳಗಾದ ಚರ್ಮವನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ತಂಪಾಗಿಸುವ ಅನುಭವವನ್ನು ನೀಡುತ್ತದೆ. ಇದನ್ನು ನೇರವಾಗಿ ಸನ್ಟ್ಯಾನ್ ಆಗುವ ಸ್ಥಳಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಡಿ, ನಂತರ ತಣ್ಣೀರಿನಿಂದ ತೊಳೆಯಿರಿ.
ಜೇನುತುಪ್ಪ:
ಸಿಹಿ ಮತ್ತು ಜಿಗುಟಾದ ಜೇನುತುಪ್ಪವನ್ನು ಹೆಚ್ಚಾಗಿ ಪ್ರಕೃತಿಯಿಂದ ದೊರೆಯುವ ನೈಸರ್ಗಕವಾದ ಔಷಧಿ ಎಂದು ಕರೆಯಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಮಾಯಿಶ್ಚರೈಸಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮವನ್ನು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಬಾಧಿತ ಪ್ರದೇಶಕ್ಕೆ ಇದನ್ನು ಹಚ್ಚಿ, 20 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ.
ತೆಂಗಿನ ಎಣ್ಣೆ:
ಬಿಸಿಲಿನಿಂದ ಸುಟ್ಟ ಸ್ಥಳದಲ್ಲಿ ನಂತರ ತುರಿಕೆ ಶುರುವಾಗಿ ಸಿಪ್ಪೆ ಸುಲಿಯುತ್ತದೆ. ತೆಂಗಿನ ಎಣ್ಣೆ ಚರ್ಮವನ್ನು ಆಳವಾಗಿ ಮಾಯಿಶ್ಚರೈಸ್ ಮಾಡುವ ಮೂಲಕ ಚರ್ಮದ ತುರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಚರ್ಮವು ತಣ್ಣಗಾದ ನಂತರವೇ ಇದನ್ನು ಹಚ್ಚಿ. ನಿಯಮಿತವಾಗಿ ಇದನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಚರ್ಮವು ಮೃದು ಮತ್ತು ಹೈಡ್ರೇಟ್ ಆಗುತ್ತದೆ.
ಈ ರೀತಿಯಲ್ಲಿ ಬೇಸಿಗೆಯ ಬಿಸಿಲಿನಿಂದ ನಿಮ್ಮ ಮುಖದ ಚರ್ಮವನ್ನು ಕಾಪಡಿಕೊಳ್ಳಿ ಮತ್ತು ಆಕರ್ಷಕವಾದ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
