ಚಳ್ಳಕೆರೆ
ಅನೀಲ್‍ಕುಮಾರ್, ಮಹಾಂತೇಶ್‍ಗೆ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಜವಾಬ್ದಾರಿ

Published on
CHITRADURGA NEWS | 18 FEBRUARY 2024
ಚಿತ್ರದುರ್ಗ: ಜಿಲ್ಲೆಯ ಇಬ್ಬರಿಗೆ ಬಿಜೆಪಿ ರಾಜ್ಯ ಘಟಕದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗಿದೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಆರ್.ಅನಿಲ್‍ಕುಮಾರ್ ಅವರನ್ನು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಅಡಿಕೆ ಉತ್ಪಾಧನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲು
ಎಬಿವಿಪಿ ಮೂಲದಿಂದ ಬಂದಿರುವ ಚಳ್ಳಕೆರೆ ತಾಲೂಕು ಕಾಲುವೇಹಳ್ಳಿಯ ಮಹಾಂತೇಶ್ ನಾಯಕ ಅವರನ್ನು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಈಗಾಗಲೇ ಬಿಜೆಪಿ ರಾಜ್ಯ ವಕ್ತಾರರನ್ನಾಗಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರನ್ನು ನೇಮಕ ಮಾಡಿದ್ದು, ಈಗ ಮತ್ತಿಬ್ಬರಿಗೆ ರಾಜ್ಯ ಬಿಜೆಪಿಯ ಮೋರ್ಚಾದಲ್ಲಿ ಪ್ರಮುಖ ಜವಾಬ್ದಾರಿ ನೀಡಲಾಗಿದೆ.
ಇದನ್ನೂ ಓದಿ: ಅಡಿಕೆ ಸಿಪ್ಪಿಯಿಂದ ಗೊಬ್ಬರ ಮಾಡುವುದು ಹೇಗೆ ಗೊತ್ತಾ
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಈ ನಿಯುಕ್ತಿ ಮಾಡಿದ್ದಾರೆ.
Continue Reading
Related Topics:Anil Kumar, BJP, Challakere, Chitradurga, Karnataka, Mahantesh Nayak, ST Morcha, ಅನೀಲ್‍ಕುಮಾರ್, ಎಸ್ಟಿ ಮೋರ್ಚಾ, ಕರ್ನಾಟಕ, ಚಳ್ಳಕೆರೆ, ಚಿತ್ರದುರ್ಗ, ಬಿಜೆಪಿ, ಮಹಾಂತೇಶ್ ನಾಯಕ

Click to comment