ಮುಖ್ಯ ಸುದ್ದಿ
ಮೈತ್ರಿ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಕಾರ್ಯಕರ್ತರ ಪಣ | ಭಿನ್ನಾಭಿಪ್ರಾಯ ಬಿಟ್ಟು ಬಿಜೆಪಿ ಜೊತೆ ಕೆಲಸ ಮಾಡಲು ಸಲಹೆ

CHITRADURGA NEWS | 18 FEBRUARY 2024
ಚಿತ್ರದುರ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ದೋಸ್ತಿಯಾಗಿದ್ದು, ಈಗಾಗಲೇ ಎರಡೂ ಪಕ್ಷಗಳು ಚುನಾವಣೆಗಾಗಿ ತನ್ನ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸಕ್ಕೆ ಮುಂದಾಗಿವೆ.
ಈ ಪ್ರಯೋಗದ ಮೊದಲ ಭಾಗವಾಗಿ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಘಟಕದಿಂದ ಶನಿವಾರ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರು, ಮುಖಂಡರ ಚುನಾವಣಾ ಪೂರ್ವಭಾವಿ ಸಭೆ ನಡೆಯಿತು.

ಇದನ್ನೂ ಓದಿ: ಅಡಿಕೆ ಸಿಪ್ಪೆಯನ್ನು ಗೊಬ್ಬರ ಮಾಡುವುದು ಹೇಗೆ ಗೊತ್ತಾ
ಎಲ್ಲಾ ಭಿನ್ನಾಬಿಪ್ರಾಯಗಳನ್ನು ಮರೆತು ಎರಡೂ ಪಕ್ಷಗಳ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಪಕ್ಷದ ಕಾರ್ಯಕರ್ತರು ಕಂಕಣಬದ್ಧರಾಗಬೇಕೆಂಬ ಪಕ್ಷದ ವರಿಷ್ಠರ ಮಾತನ್ನು ವಿವರಿಸಲಾಯಿತು.

ಚಿತ್ರದುರ್ಗದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಯಾರೆಲ್ಲಾ ಭಾಗವಹಿಸಿದ್ದರು, ಏನೇನು ಅಭಿಪ್ರಾಯ ವ್ಯಕ್ತವಾದವು ಎನ್ನುವ ಕುರಿತ ಪೂರ್ಣ ವಿವರ ಇಲ್ಲಿದೆ ನೋಡಿ.
ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಸಭೆಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಎಲ್ಲ ಬಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎರಡೂ ಪಕ್ಷಗಳ ಒಮ್ಮತದ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಇದನ್ನೂ ಓದಿ: ಅನೀಲ್‍ಕುಮಾರ್, ಮಹಾಂತೇಶ್‍ಗೆ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಜವಾಬ್ದಾರಿ
ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಆಗಿದ್ದರೂ, ನಮ್ಮ ತತ್ವ ಸಿದ್ಧಾಂತಗಳನ್ನು ಬಲಿಕೊಟ್ಟು ಚುನಾವಣೆ ನಡೆಸುವುದಿಲ್ಲ. ದೇಶ ಹಾಗೂ ಪಕ್ಷದ ಹಿತದೃಷ್ಟಿಯಿಂದ ನಮ್ಮ ನಾಯಕರಾದ ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಮೈತ್ರಿ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದರು.
ಈ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಸಾಕಷ್ಟು ಭಿನ್ನಾಬಿಪ್ರಾಯಗಳಿದ್ದವು. ಪರಸ್ಪರ ಎರಡೂ ಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಆದರೆ, ಇದೆಲ್ಲವೂ ಮುಗಿದ ಅಧ್ಯಾಯ. ನಮ್ಮ ಮುಂದಿರುವುದು ಲೋಕಸಭಾ ಚುನಾವಣೆಯ ಗೆಲುವಿನ ಗುರಿ ಮಾತ್ರ ಎಂದು ವಿವರಿಸಿದರು.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರತಿ ಬೂತ್‍ನಲ್ಲೂ ಸಮಿತಿಗಳನ್ನು ರಚಿಸುವ ಮೂಲಕ, ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು. ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ 8 ವಿಧಾನಸಸಭಾ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು ಚುರುಕಾಗಿ ಕೆಲಸ ಮಾಡಬೇಕಿದೆ. ಮಾರ್ಚ್ ಅಂತ್ಯದ ವೇಳೆಗೆ ಚುನಾವಣೆ ಘೋಷಣೆ ಆಗಲಿದ್ದು, ಮುಂದಿನ ಸಭೆಗೆ ಪಕ್ಷದ ವರಿಷ್ಠರು ಬಂದು ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಭೋವಿ ಸಮುದಾಯಕ್ಕೆ ಟಿಕೇಟ್ ನೀಡಿ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ ಹಾಗೂ ಪಾವಗಡದ ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ನಾವು ಅಲ್ಲಗೆಳೆದಿದ್ದೇವೆ. ಆದರೆ ಈಗ ಮೈತ್ರಿ ಆಗಿರುವುದರಿಂದ ಅವರನ್ನು ನಮ್ಮೊಟ್ಟಿಗೆ ಕರೆದ್ಯೂಯಬೇಕಿದೆ. ಹೊಂದಾಣಿಕೆ ಮಾಡಿಕೊಂಡು ಚುನಾವಣೆ ನಡೆಸಬೇಕು.
ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಯಾದರೂ ಸಹಾ ಅವರ ಗೆಲುವಿಗೆ ನಾವು ಶ್ರಮಿಸಬೇಕು. ರಾಜ್ಯದ ಹಲವಡೆಗಳಲ್ಲಿ ಬಿಜೆಪಿಯ ಗೆಲುವಿಗೆ ಜೆಡಿಎಸ್ ಸಹಕಾರಿಯಾಗಬೇಕಿದೆ ಅದೇ ರೀತಿ ಕೆಲವಡೆಯಲ್ಲಿ ಜೆಡಿಎಸ್ ಗೆಲುವಿಗೆ ಬಿಜೆಪಿ ಸಹಕಾರಿಯಾಗಬೇಕು ಎಂದರು.

ಜೆಡಿಎಸ್ ಕಾರ್ಯಕರ್ತರ ಸಭೆ
ಜೆಡಿಎಸ್ ಮತ್ತು ಬಿಜೆಪಿ ಅಧ್ಯಕ್ಷರು ಸೇರಿ ಸಭೆ ನಡೆಸುವ ಮೂಲಕ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಬಗೆಹರಿಸಿಕೊಂಡು ಒಟ್ಟಾಗಿ ಹೆಜ್ಜೆ ಹಾಕಬೇಕು. ಯಾವ ಕಾರಣಕ್ಕೂ ಜೆಡಿಎಸ್ ಪಕ್ಷದ ಘನತೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಸಿದ್ಧವಾಯ್ತು ಚಿತ್ರದುರ್ಗ ನಗರಸಭೆಯ 112.78 ಕೋಟಿ ರೂ. ಬಜೆಟ್
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿ, ಲೋಕಸಭಾ ಚುನಾವಣೆ ಎದುರಿಸಲು ಎಲ್ಲ ಕಾರ್ಯಕರ್ತರ ಅಭಿಪ್ರಾಯವೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಭೆ ನಡೆಸಿದ್ದೇವೆ. ಪಕ್ಷಕ್ಕೆ ಕಾರ್ಯಕರ್ತರು ಬೆನ್ನೆಲುಬು. ನಮಗೆ ಶಾಸಕರಿಲ್ಲದೆ ಕಾರ್ಯಕರ್ತರು ಬೇಸರದಲ್ಲಿದ್ದಾರೆ. ಅವರಿಗೆ ಸಾಂತ್ವಾನ ಮಾಡಲು ಈ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಿದೆ ಎಂದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ನಾವು ಚುನಾವಣೆ ಹಿನ್ನಲೆಯಲ್ಲಿ ಪಕ್ಷ ನೀಡಿದ ಆದೇಶಗಳನ್ನು ಪಾಲಿಸುತ್ತೇವೆ. ಈ ಹಿಂದೆ ನಾವು ಬಿಜೆಪಿಯನ್ನು ತೆಗಳಿದ್ದೇವೆ. ಆದರೆ ಈಗ ಮೈತ್ರಿ ಆಗಿರುವುದರಿಂದ ಅವರನ್ನು ಸೇರಿಸಿಕೊಂಡು ಚುನಾವಣೆ ಎದುರಿಸಬೇಕಿದೆ. ನಮ್ಮ ತತ್ವ ಸಿದ್ದಾಂತಗಳನ್ನು ಎಂದೂ ಮರೆಯುವುದಿಲ್ಲ, ಕಾರ್ಯಕರ್ತರ ಕಷ್ಟ-ಸುಖದಲ್ಲಿ ನಾವು ಭಾಗಿಯಾಗುತ್ತೇವೆ ಎಂದರು.
ಇದನ್ನೂ ಓದಿ: ಮೊದಲ ದಿನವೇ ರಾಗಿ ಚೆಕ್‍ಗೆ ಸಹಿ | ಶೀಘ್ರ ರೈತರಿಗೆ ಹಸ್ತಾಂತರ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿಯಾದವರು ಸರಿಯಾಗಿ ಸ್ಪಂದಿಸಿಲ್ಲ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ಗೆ 50 ಸಾವಿರ ಮತಗಳಿವೆ. ಆದರೆ, ಅಭ್ಯರ್ಥಿಯ ಕಾರಣಕ್ಕೆ ಕೇವಲ 5 ಸಾವಿರ ಮತ ಬಂದಿವೆ. ಈ ಕಾರಣಕ್ಕೆ ನಾವು ತಟಸ್ಥರಾಗಿ ಉಳಿದಿದ್ದೆವು ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ರವೀಂದ್ರಪ್ಪ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಮಠದಹಟ್ಟಿ ಈರಣ್ಣ, ಗೋಪಾಲಸ್ವಾಮಿ ನಾಯಕ, ಜಿ.ಬಿ ಶೇಖರ್, ಪ್ರತಾಪ್ ಜೋಗಿ, ಪರಮೇಶ್ವರಪ್ಪ, ತಿಮ್ಮಣ್ಣ, ದೀಪು, ತಿಪ್ಪೇಸ್ವಾಮಿ, ವೀರಭದ್ರಪ್ಪ, ಗಣೇಶ್, ನಾಗರಾಜು, ಸೂರ್ಯ ಪ್ರಕಾಶ್, ತಿಮ್ಮಾರೆಡ್ಡಿ, ತುಮಕೂರು ಅಧ್ಯಕ್ಷ ಅಂಜನಪ್ಪ ಮತ್ತಿತರರಿದ್ದರು.
