
CHITRADURGA NEWS | 06 MARCH 2024
ಚಿತ್ರದುರ್ಗ: ಬಿಜೆಪಿ ಜಿಲ್ಲಾ ಘಟಕ ರಚನೆಯಾದ ಬಳಿಕ ಪಕ್ಷದ ಇತರೆ ಮೋರ್ಚಾ, ಪ್ರಕೋಷ್ಠಗಳಿಗೂ ಪದಾಧಿಕಾರಿಗಳನ್ನು ನಿಯುಕ್ತಿ ಮಾಡಲಾಗುತ್ತಿದೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶದ ಮೇರೆಗೆ ಪಕ್ಷದ ಸಂಘಟನಾ ದೃಷ್ಠಿಯಿಂದ, ಮಂಗಳವಾರ ಬಿಜೆಪಿ ಚಿತ್ರದುರ್ಗ ಜಿಲ್ಲಾ ಸಾಮಾಜಿಕ ಜಾಲಾತಾಣ ಪ್ರಕೋಷ್ಠದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಜಿಲ್ಲಾ ಸಂಚಾಲಕರಾಗಿ ಚಳ್ಳಕೆರೆಯ ಮನೋಜ್ ಹೊಸಮನೆ, ಸಹ ಸಂಚಾಲಕರಾಗಿ ಚಿತ್ರದುರ್ಗ ನಗರದ ಆರ್.ವರುಣ್ ಕುಮಾರ್, ಚಳ್ಳಕೆರೆಯ ಪಿ.ಆರ್.ಭರತ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಮಿತಿ ಸದಸ್ಯರಾಗಿ ಹೊಳಲ್ಕೆರೆಯ ಕುಮಾರ್, ಹೊಸದುರ್ಗದ ಮಹಾಂತೇಶ್ ಕೆಂಕೆರೆ, ಚಳ್ಳಕೆರೆಯ ಎಂ.ಪಿ.ಅರವಿಂದ್, ನಾಯಕನಹಟ್ಟಿಯ ತಿಪ್ಪೇಸ್ವಾಮಿ ಹಟ್ಟೆರ, ಚಿತ್ರದುರ್ಗದ ಸುಚೇಂದ್ರ, ಕಲ್ಲೇಶ್, ಹಿರಿಯೂರಿನ ವಿಶ್ವನಾಥ್, ಬ್ರಹ್ಮಾನಂದ ಪಲ್ಲವಗೆರೆ, ಹಿರಿಯೂರಿನ ಎಂ.ಹರೀಶ್, ಜಿ.ಚನ್ನಬಸಪ್ಪ, ಜವಳಿ ಕವಿತಾ ಹಾಗೂ ಎಂ.ಸಿ. ಮಂಜುನಾಥ್ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ನಿಯೋಜಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
