Connect with us

    ಕಬೀರಾನಂದ ಆಶ್ರಮ ಮಾತ್ರ ಜಾತ್ಯಾತೀತ ಆಶ್ರಮ | ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ

    ಶ್ರೀ ಕಬೀರಾನಂದ ಮಠದಲ್ಲಿ 94ನೇ ಮಹಾ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಉದ್ಘಾಟಿಸಿದರು.

    ಮುಖ್ಯ ಸುದ್ದಿ

    ಕಬೀರಾನಂದ ಆಶ್ರಮ ಮಾತ್ರ ಜಾತ್ಯಾತೀತ ಆಶ್ರಮ | ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 06 MARCH 2024

    ಚಿತ್ರದುರ್ಗ: ಶ್ರೀ ಕಬೀರಾನಂದ ಆಶ್ರಮ ಜಾತ್ಯಾತೀತ ಆಶ್ರಮವಾಗಿ ಎಲ್ಲರನ್ನು ಅಪ್ಪಿಕೊಳ್ಳುವ ಮನೋಭಾವವನ್ನು ಹೊಂದಿದೆ ಎಂದು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ತಿಳಿಸಿದರು.

    ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಶಿ ಬೆಲೆ ಮತ್ತೊಂದು ಹೆಚ್ಚೆ ಮುಂದಕ್ಕೆ

    ನಗರದ ಶ್ರೀ ಕಬೀರಾನಂದಾಶ್ರಮದ ವತಿಯಿಂದ ಶ್ರೀಮಠದ ಆವರಣದಲ್ಲಿ ನಿರ್ಮಿತವಾಗಿರುವ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಮಹಾ ಮಂಟಪದಲ್ಲಿ ನಡೆದ 94ನೇ ಮಹಾ ಶಿವರಾತ್ರಿ ಮಹೋತ್ಸವವ ಕಾರ್ಯಕ್ರಮದ ಪ್ರಾರಂಭ ದಿನದಂದ್ದು ಸಭಾ ಮಂಟಪ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆವರು, ಇಂದಿನ ದಿನದಲ್ಲಿ ಗುರುಗಳಿಗಿಂತ ಅಧಿಕರಾವದರು ಯಾರೂ ಇಲ್ಲವಾಗಿದ್ದಾರೆ ಗುರುವೇ ಶ್ರೇಷ್ಟ, ಗುರುಗಳ ಆರ್ಶೀವಾದ ಮಾನವ ಜೀವನದಲ್ಲಿ ಏಳು-ಬೀಳುಗಳನ್ನು ಸರಿದೂಗಿಸುತ್ತದೆ. ನಾವುಗಳು ಲೌಕಿಕ ಬದುಕಿಗೆ ಸಂಬಂಧಪಟ್ಟವರು, ಶ್ರೀ ಕಬೀರಾನಂದ ಮಠ ಜಾತಿ ಮತ ಪಂಥಗಳನ್ನು ಮೀರಿ ಬೆಳೆದಿದೆ. ಇಲ್ಲಿ ಬರುವವರಿಗೆ ಯಾವುದೇ ಜಾತಿ ಇಲ್ಲ ಎಲ್ಲರು ಒಂದೇ ಎಂದರು.

    ಇದನ್ನೂ ಓದಿ: ಟೀಕೆ-ಟಿಪ್ಪಣಿಗಳಿಗೆ ಉತ್ತರವಾಗಿ ಗ್ಯಾರೆಂಟಿ ಯೋಜನೆಗಳು ಜಾರಿ

    1972ರಲ್ಲಿ ಶಿವಲಿಂಗಾನಂದ ಶ್ರೀಗಳು ಶ್ರೀ ಕಬೀರಾನಂದ ಮಠಕ್ಕೆ ಬಂದಾಗ ಇಲ್ಲಿ ಯಾವುದೇ ರೀತಿಯ ಸೌಲಭ್ಯ ಇರಲಿಲ್ಲ, ಹಂತ, ಹಂತವಾಗಿ ಬೆಳವಣಿಗೆಯನ್ನು ಕಂಡರು ಗೋಶಾಲೆ ನಿರ್ಮಾಣ, ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭ ಮಾಡುವುದರ ಮೂಲಕ ವಿದ್ಯಾದಾನ ಮಾಡಿ, ವೃದ್ದಾಶ್ರಮ, ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡುವುದರ ಮೂಲಕ ಭಕ್ತಾಧಿಗಳಿಗೆ ಮಾರ್ಗದರ್ಶನ ಮಾಡಿಕೊಂಡು, ಶಿಕ್ಷಣ ಸಂಸ್ಥೆ ಮತ್ತು ಮಠವನ್ನು ನಡೆಸುತ್ತಿದ್ದಾರೆ. ಚಿತ್ರದುರ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ದೈಹಿಕ ಶಿಕ್ಷಣವನ್ನು ಪ್ರಾರಂಭ ಮಾಡಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ.

    ಶ್ರೀ ಕಬೀರಾನಂದ ಮಠ ಜಾತಿಯ ಬಗ್ಗೆ ಯಾವುದೇ ಮನೋಭಾವ ಇಲ್ಲದೆ ಎಲ್ಲರನ್ನು ಸಹಾ ತಮ್ಮವರು ಎಂದು ತಿಳಿದು ಕೆಲಸವನ್ನು ಮಾಡುತ್ತಿದೆ, ಸೇವೆಯನ್ನು ಪೂಜೆಯ ರೂಪದಲ್ಲಿ ಮಾಡುತ್ತಾ ಬಂದಿದ್ದಾರೆ ಎಂದರು.

    ಇದನ್ನೂ ಓದಿ: ಚಿತ್ರದುರ್ಗ ರೈಲ್ವೆ ಯೋಜನೆಗಳಿಗೆ ಶುಕ್ರದೆಸೆ | ನೇರ, ಮಾರ್ಗಕ್ಕೆ ಅನುದಾನ ಬಿಡುಗಡೆ

    ಕಾರ್ಯಕ್ರಮ ಸಾನಿಧ್ಯವನ್ನು ವಹಿಸಿದ್ದ ಹುಬ್ಬಳ್ಳಿಯ ಜಡೆ ಸಿದ್ದೇಶ್ವರ ಮಠದ ಶ್ರೀ ರಮಾನಂದ ಶ್ರೀಗಳು ಮಾತನಾಡಿ, ಗುರುವಿಗಿಂತ ಅಧಿಕರಾದವರು ಸಮಾಜದಲ್ಲಿ ಯಾರೂ ಇಲ್ಲ, ಎಂದು ವೇದಗಳಲ್ಲಿಯೇ ತಿಳಿಸಲಾಗಿದೆ. ಭಗವಂತನಿಗಿಂತ ಮುಂಚೆ ಗುರುವಿಗೆ ನಮಸ್ಕಾರ ಮಾಡಿ ಮುಂದೆ ಹೋಗಬೇಕಿದೆ, ಗುರು ಮತ್ತು ಭಗವಂತ ಇಬ್ಬರಲ್ಲಿ ಅಂತರವಿದೆ.

    ದೇವತೆಗಳು ಸಹಾ ಗುರುವಿನ ಕಾರುಣ್ಯವನ್ನು ಪಡೆಯಬೇಕಿದೆ. ಭೂಮಿಯ ಮೇಲೆ ಜನಿಸಿದ ಎಲ್ಲರು ಸಹಾ ಗುರುವಿನ ಗುಲಾಮರಾಗುವುದರ ಮೂಲಕ ಮುಕ್ತಿಯನ್ನು ಪಡೆಯಬೇಕಿದೆ. ಗುರುವಿಗೆ ಶರಣಾದರೆ ಹೃದಯದ ಅಜ್ಞಾನ ಕಳೆಯುತ್ತದೆ. ಸೂರ್ಯ ಚಂದ್ರರಿಂದಲೂ ಸಹಾ ಮಾನವನ ಅಜ್ಞಾನ ಕಳೆಯಲು ಸಾಧ್ಯವಿಲ್ಲ ಆದರೆ ಈ ಕೆಲಸವನ್ನು ಗುರು ಮಾಡುತ್ತಾನೆ ಎಂದರು.

    ಗುರುವಿಲ್ಲದ ವಿದ್ಯೆ ರಾಮನಿಲ್ಲದ ಅಯೋಧ್ಯೆ ರೀತಿಯಲ್ಲಿ ಇರುತ್ತದೆ. ಸಮಾಜದಲ್ಲಿ ಯಾವ ಪದವಿಯನ್ನು ಬೇಕಾದರೂ ಪಡೆಯಬಹುದು ಆದರೆ ಗುರುವಿನ ಒಲವು ಇಲ್ಲದೆ ಆತ್ಮಜ್ಞಾನ ಪಡೆಯಲು ಸಾಧ್ಯವಿಲ್ಲ, ಉತ್ತಮ ಜ್ಞಾನವುಳ್ಳ ಗುರುವಿಗೆ ಉತ್ತಮನಾದ ಶಿಷ್ಯ ಬೇಕಿದೆ, ಅದೇ ರೀತಿ ಉತ್ತಮವಾದ ಶಿಷ್ಯನಿಗೆ ಜ್ಞಾನವುಳ್ಳ ಗುರುವಿನ ಅಗತ್ಯ ಇದೆ ಎಂದರು.

    ಇದನ್ನೂ ಓದಿ: ಜೋಗಿಮಟ್ಟಿ ಮಡಿಲಲ್ಲಿ ಧ್ಯಾನಮಗ್ನ ಮುಕ್ತಿನಾಥ | 31 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ ದಿನಗಣನೆ

    ಬಾಗಲಕೋಟೆಯ ಆರಿಕೆರೆಯ ಶ್ರೀ ಕೌಧೀಶ್ವರ ಮಹಾ ಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು ಮಾತನಾಡಿ, ಋಷಿಮುನಿಗಳು, ದೇವತೆಗಳಿಗೂ ಸಹಾ ಗುರುವಿನ ಅಗತ್ಯ ಇದೆ. ಅವರ ಕೃಪಾದೃಷ್ಟಿಯಿಂದಲೇ ಮುಕ್ತಿಯನ್ನು ಪಡೆಯಬೇಕಿದೆ, ಗುರುವಿಗೆ ಶರಣಾಗತಿಯಾದರೆ ಓಳ್ಳೆಯ ವಿಚಾರವನ್ನು ಪಡೆಯಬಹುದಾಗಿದೆ. ಮೋಕ್ಷವನ್ನು ಡಪೆಯುವ ಮಾರ್ಗವನ್ನು ಗುರುಗಳು ತಿಳಿಸುತ್ತಾರೆ. ಪುಣ್ಯದ ಸಂಪಾದನೆಯಲ್ಲಿಯೂ ಸಹಾ ಗುರುವಿನ ಮಾರ್ಗದರ್ಶನ  ಇದೆ. ಮಾನವ ಜನ್ಮ ಪಾವನಕ್ಕೆ ಗುರುವಿನ ಕೃಪೆ ಅಗತ್ಯವಾಗಿದೆ ಎಂದರು.

    ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಗುರುವಿಗಿಂತ ಅಧಿಕವಾದದ್ದು ಯಾವುದೂ ಇಲ್ಲ, ಗುರು ದೊಡ್ಡವನಿದ್ದಾನೆ, ಗುರುವಾದವನು ಭಕ್ತನ ಮನಸ್ಸನ್ನು ಸ್ಚಚ್ಚಮಾಡುತ್ತಾನೆ, ಗುರು ನಿರಾಭಾರವಾಗಿದ್ದಾನೆ, ಗುರುವಿನ ಕೃಪೆ ಇದ್ದರೇ ಏನು ಬೇಕಾದರೂ ಸಾಧನೆಯನ್ನು ಮಾಡಬಹುದಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ಮಾ.06 ರಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆ

    ವಿಜಯಪುರದ ಶ್ರೀ ಷಣ್ಮುಖಾರೂಢ ಮಠದ ಶಾಂತಾಶ್ರಮದ ಶ್ರೀ ಅಭಿನವ ಸಿದ್ದಾರೂಢ ಶ್ರೀಗಳು ಸಾನಿಧ್ಯ ವಹಿಸಿದ್ದರು.

    ಕಾರ್ಯಕ್ರಮದಲ್ಲಿ 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷರಾದ ಲಕ್ಷ್ಮೀಕಾಂತರೆಡ್ಡಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ತಿಮ್ಮಾಪುರ, ಜಿ.ಪಂ. ಮಾಜಿ ಉಪಾಧ್ಯಕ್ಷರಾದ ದ್ಯಾಮಣ್ಣ ಭಾಗವಹಿಸಿದ್ದರು.

    ಅಂಜನಾ ನ್ಯತ್ಯ ಕಲಾ ಕೇಂದ್ರದ ಶ್ರೀಮತಿ ನಂದಿನಿ ಶಿವಪ್ರಕಾಶ್ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ಶ್ರೀ ವೆಂಕಟಾದ್ರಿ ಭಜನಾ ಮಂಡಳಿಯ ವರಲಕ್ಷ್ಮೀ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

     

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top