ಮಾರುಕಟ್ಟೆ ಧಾರಣೆ
ಭಕ್ತರ ಹರ್ಷೋದ್ಘಾರದ ನಡುವೆ ಅಕ್ಕ-ತಂಗಿ ಭೇಟಿ | ಪರಸ್ಪರ ಆಲಿಂಘನ ಮಾಡಿಕೊಂಡ ದೇವತೆಯರು

CHITRADURGA NEWS | 07 MAY 2024
ಚಿತ್ರದುರ್ಗ: ಕೊಂಚ ಬಿಗುಮಾನ, ಕೊಂಚ ಮುನಿಸು, ಅಕ್ಕನೆಂಬ ಮಮಕಾರ, ತಂಗಿಯೆಂಬ ಪ್ರೀತಿ, ಮಕ್ಕಳ ಮೇಲಿನ ಶಾಪದ ಸಿಡುಕು, ಅಕ್ಕನಿಗೆ ಸುಳ್ಳು ಹೇಳಿದ ಮುನಿಸು..
ನಗರದ ದೊಡ್ಡಪೇಟೆಯ ರಾಜಬೀದಿಯಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಅಕ್ಕ-ತಂಗಿ ಭೇಟಿ ಉತ್ಸವದಲ್ಲಿ ಇಷ್ಟೆಲ್ಲಾ ಭಾವಗಳು ಪ್ರವಹಿಸಿದವು.
ಇದನ್ನೂ ಓದಿ: ಅಕ್ಕ-ತಂಗಿಯರ ನಡುವೆ ಮುನಿಸು ತಂದ ಕಥೆ ಗೊತ್ತಾ | ದೇವತೆಗಳ ನಡುವೆ ಮಕ್ಕಳ ವಿಚಾರದಲ್ಲಿ ಬಂದಿತ್ತು ವೈಮನಸ್ಸು
ಪರಸ್ಪರ ಭೇಟಿಯಾಗುವ ತವಕದಿಂದ ಒಂದು ಕಡೆಯಿಂದ ಅಕ್ಕ, ಮತ್ತೊಂದು ಕಡೆಯಿಂದ ತಂಗಿ ಓಡೋಡಿ ಬಂದರೂ, ಹಳೆಯ ಮುನಿಸು ನೆನಪಾಗಿ ಥಟ್ಟನೇ ಹಿಂದಕ್ಕೆ ತಿರುಗಿ ನಿಲ್ಲುವ ಬರಗೇರಮ್ಮ. ಅಕ್ಕನ ಮೇಲಿನ ಸಿಟ್ಟು ನೆನಪಾಗುತ್ತಲೇ ಬಂದ ವೇಗದಲ್ಲೇ ಹಿಂದಕ್ಕೆ ಹೆಜ್ಜೆ ಹಾಕುವ ತಂಗಿ ತಿಪ್ಪಿನಘಟ್ಟಮ್ಮ ದೇವಿ.
ಕೊನೆಗೆ ಎಷ್ಟೇ ಆದರೂ ನಾವಿಬ್ಬರೂ ಅಕ್ಕ ತಂಗಿಯರು, ದೊಡ್ಡಕ್ಕ ಏಕನಾಥೇಶ್ವರಿಯ ಅಪ್ಪಣೆಯಾಗಿದೆ. ನಾವು ಭೇಟಿಯಾಗಬೇಕು ಎಂಬ ನೆನಾಪುತ್ತಲೇ ಇಬ್ಬರೋ ಓಡೋಡಿ ಬಂದು ಅಪ್ಪಿ, ಮುದ್ದಾಡಿ, ಕಷ್ಟ ಸುಖ ಮಾತಾಡಿಕೊಂಡು ಕ್ಷಣ ಹೊತ್ತಿದ್ದು ನಂತರ ತಮ್ಮ ಸ್ಥಾನಗಳಿಗೆ ಮರಳಿದರು.
ಇದನ್ನೂ ಓದಿ: ಆರ್ಭಟಿಸಿಕೊಂಡು ಬಂದ ಮಳೆರಾಯ | ಹಿರಿಯೂರಿನಲ್ಲಿ ಗಾಳಿ, ಮಳೆ, ಗುಡುಗು, ಸಿಡಿಲು
ಇದಿಷ್ಟನ್ನೂ ಭೇಟಿ ಉತ್ಸವ ನೋಡುತ್ತಿದ್ದ ಭಕ್ತ ಗಣ ಮನದಲ್ಲೇ ಲೆಕ್ಕಾಚಾರ ಹಾಕುತ್ತಿತ್ತು. ಅಲ್ಲಿ ನಡೆಯುತ್ತಿದ್ದ ಪ್ರತಿ ದೃಶ್ಯಕ್ಕೂ ಒಂದೊಂದು ಕಥೆ, ಚಿತ್ರಕಥೆಯನ್ನು ಭಕ್ತರು ಮನಸ್ಸಿನಲ್ಲೇ ಲೆಕ್ಕ ಹಾಕುವಂತೆ ವಾತಾವರಣ ಸೃಷ್ಟಿಯಾಗಿತ್ತು.
ಜಾನಪದ ಸೊಗಡಿನ ಅಕ್ಕ-ತಂಗಿ ಭೇಟಿ ಉತ್ಸವ ಮಂಗಳವಾರ ರಾತ್ರಿ 9.30 ರಿಂದ 9.45 ರವರೆಗೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಇದನ್ನೂ ಓದಿ: ವೀರಶೈವ ಸಮಾಜದಿಂದ ಬಸವೇಶ್ವರ ಜಯಂತಿ | ಬೈಕ್ ರ್ಯಾಲಿ
ನಗರ ದೇವತೆಗಳಾದ ಶ್ರೀ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿ ಹಾಗೂ ಶ್ರೀ ಬರಗೇರಮ್ಮ ದೇವಿ ಪರಸ್ಪರ ಆಲಿಂಘನ ಮಾಡಿಕೊಂಡ ದೃಶ್ಯವನ್ನು ಸಾವಿರಾರು ಮೊಬೈಲ್‍ಗಳು ಸೆರೆ ಹಿಡಿದವು.

ಭಕ್ತರ ಹರ್ಷೋದ್ಘಾರದ ನಡುವೆ ಅಕ್ಕ-ತಂಗಿ ಭೇಟಿ
ಇಬ್ಬರು ದೇವತೆಗಳು ಪರಸ್ಪರ ಅಪ್ಪಿ, ಆಲಿಂಘನ ಮಾಡಿಕೊಳ್ಳುತ್ತಲೇ ನೆರೆದಿದ್ದ ಸಹಸ್ರಾರು ಭಕ್ತಾದಿಗಳು ಹರ್ಷೋದ್ಘಾರ ಮಾಡಿ ಉಘೇ, ಉಘೇ ಎಂದು ಘೋಷಣೆ ಕೂಗಿ ನಿಂತಲ್ಲಿಯೇ ಕೈ ಮುಗಿದು ಪುನೀತರಾದರು.
ಇದನ್ನೂ ಓದಿ: ಮತ ಚಲಾಯಿಸಿದ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ
ನಗರದ ದೊಡ್ಡಪೇಟೆಯಲ್ಲಿರುವ ರಾಜಬೀದಿಯಲ್ಲಿ ಶ್ರೀ ಉಚ್ಛೆಂಗೆಲ್ಲಮ್ಮ ದೇವಸ್ಥಾನದ ನೇರಕ್ಕೆ ಅಕ್ಕ-ತಂಗಿಯರ ಭೇಟಿ ಉತ್ಸವಕ್ಕೆ ವೇದಿಕೆ ಸಿದ್ಧಪಡಿಸಲಾಗಿತ್ತು.
ಭೇಟಿ ಉತ್ಸವಕ್ಕಾಗಿ ಗ್ರಾಮ ದೇವತೆಗಳಾದ ಶ್ರೀ ಬರಗೇರಮ್ಮ ಮತ್ತು ಶ್ರೀ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿಯರನ್ನು ಸುಂದರವಾಗಿ ಅಲಂಕರಿಸಲಾಗಿತ್ತು.
ಇದನ್ನೂ ಓದಿ: ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ
ನಗರದ ಪಶ್ಚಿಮ ಭಾಗದಲ್ಲಿ ನೆಲೆಸಿರುವ ಬರಗೇರಮ್ಮ ಹಾಗೂ ಪೂರ್ವ ಭಾಗದಲ್ಲಿ ನೆಲೆಸಿರುವ ತಿಪ್ಪಿನಘಟ್ಟಮ್ಮ ದೇವಿಯ ಭೇಟಿ ಉತ್ಸವಕ್ಕೆ ಅಪಾರಭಕ್ತರು ಸಾಕ್ಷಿಯಾದರು.
ಅಕ್ಕ-ತಂಗಿಯರ ಭೇಟಿ ಉತ್ಸವ ಎಂದೇ ಜನಜನಿತವಾಗಿರುವ ಈ ಉತ್ಸವ ಜಾನಪದ ಸೊಗಡಿನ ಹಿನ್ನೆಲೆ ಹೊಂದಿದೆ. ಸೋಮನ ಕುಣಿತ, ಡೊಳ್ಳು ಕುಣಿತ, ದೀವಟಿಗೆ ಧಾರಿಗಳು, ಉರುಮೆನಾದ. ತಮಟೆಗಳ ಸದ್ದು, ಡೊಳ್ಳುವಾದನಗಳು ಭೇಟಿಯ ಉತ್ಸವಕ್ಕೆ ಮೆರುಗು ನೀಡಿದ್ದವು. ಅತ್ಯಂತ ಸುಂದರವಾಗಿ ಪುಷ್ಪಾಲಂಕೃತಗೊಂಡಿದ್ದ ಅಕ್ಕ-ತಂಗಿಯರು ಪರಸ್ಪರ ಭೇಟಿಗಾಗಿ ತವಕಿಸುತ್ತಿರುವ ದೃಶ್ಯ ಸೊಗಸಾಗಿತ್ತು.
ಇದನ್ನೂ ಓದಿ: ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ | ಲಂಚದ ಹಣದ ಸಮೇತ ಎಸ್.ವೈ.ಬಸವರಾಜಪ್ಪ ಬಂಧನ
ಈ ದೃಶ್ಯ ಭಕ್ತಾದಿಗಳನ್ನು ಪುಳಕಿತಗೊಳಿಸಿತು. ಸಿಂಗಾರಗೊಂಡ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ. ಜನ ಜಾತ್ರೆಯ ನಡುವೆ ರಾಜಬೀದಿಯಲ್ಲಿ ಅಕ್ಕ-ತಂಗಿಯರ ದಿವ್ಯ ಸಮಾಗಮ ಸಾಂಪ್ರದಾಯಿಕ ಅಪೂರ್ವ ಸಂಗಮ ಕಣ್ತುಂಬಿಕೊಂಡ ಭಕ್ತರಲ್ಲಿ ಪುನೀತ ಭಾವ ಮೂಡಿತ್ತು.

ಪರಸ್ಪರ ಆಲಿಂಘನ ಮಾಡಿಕೊಂಡ ದೇವತೆಯರು
ರಂಗಯ್ಯನ ಬಾಗಿಲು ಕಡೆಯಿಂದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿ ಆಗಮಿಸಿದರೆ, ಇತ್ತ ಉಚ್ಚಂಗಿ ಯಲ್ಲಮ್ಮ ದೇಗುಲದ ಕಡೆಯಿಂದ ಬರಗೇರಮ್ಮ ದೇವಿ ಆಗಮಿಸಿದರು.
ಇದನ್ನೂ ಓದಿ: ಬೆಳೆ ಸಮೀಕ್ಷೆ ಕ್ರಮಬದ್ಧವಾಗಿಲ್ಲ | ಅಚಾತುರ್ಯ ನಡೆಸಿದ ಪಿಡಿಓಗಳಿಗೆ ನೋಟೀಸ್ | ಜಿಲ್ಲಾಧಿಕಾರಿ ಟಿ.ವೆಂಕಟೇಶ್
ಜಿಲ್ಲಾಡಳಿತ, ನಗರಸಭೆ, ಪೊಲೀಸ್ ಇಲಾಖೆ ಹಾಗೂ ದೇಗುಲ ಸಮಿತಿಗಳು ಈ ವರ್ಷ ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿದ್ದವು. ರಾಜಬೀದಿ ಉದ್ದಕ್ಕೂ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಸಾವಿರಾರು ಜನ ಭಕ್ತರು ಉತ್ಸವದಲ್ಲಿ ಭಾಗಿಯಾಗಿದ್ದರು. ಅಕ್ಕ-ತಂಗಿ ಭೇಟಿ ಉತ್ಸವಕ್ಕೆ ಸಾಕ್ಷಿಯಾಗಿ ಸಂಭ್ರಮಿಸಿದರು.
ಅಕ್ಕ-ತಂಗಿ ಭೇಟಿ ಉತ್ಸವದ ನೆಪದಲ್ಲಿ ದುರ್ಗದಿಂದ ಬೇರೆ ಊರುಗಳಿಗೆ ಮದುವೆ ಆಗಿ ಹೋಗಿದ್ದ ಸಾವಿರಾರು ಹೆಣ್ಣು ಮಕ್ಕಳು ಕೂಡಾ ತವರಿಗೆ ಆಗಮಿಸಿ ಈ ದೃಶ್ಯವನ್ನು ಕಣ್ತುಂಬಿಕೊಂಡರು.
ಇದನ್ನೂ ಓದಿ: ಭೀಮಸಮುದ್ರ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ
ಭೇಟಿ ಉತ್ಸವದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ತಹಶೀಲ್ದಾರ್ ನಾಗವೇಣಿ, ನಗರಸಭೆ ಸದಸ್ಯರಾದ ಭಾಸ್ಕರ್, ಮಾಜಿ ಅಧ್ಯಕ್ಷ ಸಿ.ಟಿ. ಕೃಷ್ಣಮೂರ್ತಿ, ಬಿಜೆಪಿ ಮುಖಂಡ ಎಂ.ಸಿ.ರಘುಚಂದನ್, ಪೌರಾಯುಕ್ತರಾದ ಭಾರತಿ, ವೆಂಕಟೇಶ್, ಅನುರಾಧ ಸೇರಿದಂತೆ ನೂರಾರು ಭಕ್ತರು, ಗಣ್ಯರು ಭಾಗವಹಿಸಿದ್ದರು.
