
CHITRADURGA NEWS | 07 MAY 2024
ಚಿತ್ರದುರ್ಗ: ಬರದ ದವಡೆಗೆ ಸಿಲುಕಿ ನಲುಗುತ್ತಿರುವ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಸಣ್ಣ ಸಮಾಧಾನ ಸಿಕ್ಕಿದೆ.
ವಿಪರೀತ ಬಿಸಿಲಿನಿಂದ ಜನ, ಜಾನುವಾರುಗಳು ಕಂಗೆಟ್ಟಿದ್ದವು. ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ನೀರಿನ ಅಭಾವದಿಂದ ಅಡಿಕೆ ತೊಟಗಳ, ಹರ, ಶಿವ ಎನ್ನುತ್ತಿದ್ದವು. ರೈತರು ಟ್ಯಾಂಕರ್‍ಗಳಿಂದ ನೀರು ತಂದು ಹಾಯಿಸಿದರೂ, ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿತ್ತು. 800-1000 ಅಡಿವರೆಗೆ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಕ್ಕಿರಲಿಲ್ಲ.

ಇದನ್ನೂ ಓದಿ: ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ
ಇಂತಹ ಭೀಕರ ಬರದ ನಡುವೆಯೇ ಹವಾಮಾನ ಇಲಾಖೆ ಮೇ.7 ರಿಂದ ಚಿತ್ರದುರ್ಗ ಜಿಲ್ಲೆಗೆ ಮಳೆಯ ಮುನ್ಸೂಚನೆ ನೀಡಿತ್ತು. ಅದರಂತೆ ಮಂಗಳವಾರ ಸಂಜೆ ಹಿರಿಯೂರು ತಾಲೂಕಿಗೆ ಮಳೆರಾಯ ತಂಪರೆದಿದ್ದಾನೆ.
ಹಿರಿಯೂರು ನಗರ ಹಾಗೂ ತಾಲೂಕಿನ ವಿವಿಧೆಡೆ ಮಳೆರಾಯ ಆರ್ಭಟಿಸಿದ್ದಾನೆ. ವಿಪರೀತ ಗಾಳಿ, ಗುಡುಗು, ಸಿಡಿಲಿನೊಂಡಿಗೆ ಆರ್ಭಟಿಸಿಕೊಂಡೇ ಮಳೆರಾಯ ಇಳೆಗೆ ಕಾಲಿಟ್ಟಿದ್ದಾನೆ. ಮಳೆಯನ್ನು ಕಂಡು ರೈತರು ಸಂತಸಗೊಂಡಿದ್ದಾರೆ.
ಇದನ್ನೂ ಓದಿ: ಅಕ್ಕ-ತಂಗಿಯರ ನಡುವೆ ಮುನಿಸು ತಂದ ಕಥೆ ಗೊತ್ತಾ | ದೇವತೆಗಳ ನಡುವೆ ಮಕ್ಕಳ ವಿಚಾರದಲ್ಲಿ ಬಂದಿತ್ತು ವೈಮನಸ್ಸು
ತೆಂಗಿನ ಮರಕ್ಕೆ ಬಡಿದ ಸಿಡಿಲು:
ಹಿರಿಯೂರು ತಾಲೂಕಿನ ಧರ್ಮಪುರ ಸಮೀಪದ ಖಂಡೇನಹಳ್ಳಿಸಮೀಪದ ಪಿ.ಡಿ.ಕೋಟೆಯಲ್ಲಿ ನಾರಾಯಣಸ್ವಾಮಿ ಎನ್ನುವವರ ಮನೆ ಬಳಿಯ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಇದನ್ನೂ ಓದಿ: ಮತ ಚಲಾಯಿಸಿದ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ
ಇನ್ನೂ ಹೊಸದುರ್ಗ, ಹೊಳಲ್ಕೆರೆ ಭಾಗದಲ್ಲೂ ವಿಪರೀತ ಗಾಳಿ ಬೀಸಿತಾದರೂ ಮಳೆ ಸುರಿದಿಲ್ಲ. ಇನ್ನೂ ಈ ಜಿಲ್ಲೆಯ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
