ಲೋಕಸಮರ 2024
ಮತ ಚಲಾಯಿಸಿದ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

CHITRADURGA NEWS | 07 MAY 2024
ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಮತ ಚಲಾಯಿಸಿದರು.
ಗೋವಿಂದ ಎಂ.ಕಾರಜೋಳ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿಯಾಗಿದ್ದರೂ ಅವರ ಮತ ಮುಧೋಳ ಮತಕ್ಷೇತ್ರದಲ್ಲಿ ಅವರ ಮತ ಇದ್ದಿದ್ದರಿಂದ ರಾಜ್ಯದಲ್ಲಿ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಮತ ಹಾಕಿದರು.

ಇದನ್ನೂ ಓದಿ: ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ
ಗೋವಿಂದ ಕಾರಜೋಳ ಚಿತ್ರದುರ್ಗ ಅಭ್ಯರ್ಥಿ ಆಗಿದ್ದರೂ ತಮ್ಮ ಮತವನ್ನು ತಮಗೆ ಹಾಕಿಕೊಳ್ಳಲು ಸಾಧ್ಯವಾಗಿರಲಿಲ್ಲ.
ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆ ಮುಗಿದ ನಂತರ ಎರಡನೇ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ಕಾರಜೋಳ ಬ್ಯುಸಿಯಾಗಿದ್ದರು.
ಇದನ್ನೂ ಓದಿ: ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ | ಲಂಚದ ಹಣದ ಸಮೇತ ಎಸ್.ವೈ.ಬಸವರಾಜಪ್ಪ ಬಂಧನ
ಈಗ ಅಂತಿಮವಾಗಿ ಕರ್ನಾಟಕದ ಒಟ್ಟಾರೆ ಲೋಕಸಭಾ ಚುನಾವಣೆ ಮುಕ್ತಾಯವಾಗಲಿದ್ದು, ಇಷ್ಟು ದಿನ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿದ್ದ ರಾಜಕಾರಣಿಗಳು, ಅಭರ್ಥಿಗಳು ರಿಲೀಫ್ ಆಗಲಿದ್ದಾರೆ.
