Connect with us

    ಮುರುಘಾ ಮಠದಲ್ಲಿ ಎಸ್‍ಜೆಎಂ ವಿದ್ಯಾಪೀಠದ ನೌಕರರ ಸಮಾಲೋಚನಾ ಸಭೆ

    ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮಂಗಳವಾರ ಶ್ರೀ ಬಸವ ಜಯಂತಿ ಅಂಗವಾಗಿ ಎಸ್‍ಜೆಎಂ ವಿದ್ಯಾಪೀಠದ ನೌಕರರ ಸಮಾಲೋಚನಾ ಸಭೆ ನಡೆಯಿತು.

    ಮುಖ್ಯ ಸುದ್ದಿ

    ಮುರುಘಾ ಮಠದಲ್ಲಿ ಎಸ್‍ಜೆಎಂ ವಿದ್ಯಾಪೀಠದ ನೌಕರರ ಸಮಾಲೋಚನಾ ಸಭೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 07 MAY 2024

    ಚಿತ್ರದುರ್ಗ: ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮಂಗಳವಾರ ಶ್ರೀ ಬಸವ ಜಯಂತಿ ಅಂಗವಾಗಿ ಎಸ್‍ಜೆಎಂ ವಿದ್ಯಾಪೀಠದ ನೌಕರರ ಸಮಾಲೋಚನಾ ಸಭೆ ನಡೆಯಿತು.

    ಸಭೆಯ ಸಾನ್ನಿಧ್ಯ ವಹಿಸಿದ್ದ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ದಾವಣಗೆರೆ ವಿರಕ್ತಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಮೃತ್ಯಂಜಯ ಅಪ್ಪಗಳು ಹಾಗೂ ಅವರೊಂದಿಗೆ ಹೆಗಲಾಗಿದ್ದ ಹರ್ಡೇಕರ್ ಮಂಜಪ್ಪ ಬಸವಜಯಂತಿ ಪ್ರವರ್ತಕರು. ಬಸವಣ್ಣನವರ ಸಾಧನೆಯ ವಿವಿಧ ಆಯಾಮಗಳ ಬಗ್ಗೆ ಗಮನಹರಿಸಿ ಅಂದು ಜಯಂತಿ ಆಚರಣೆ ಆರಂಭಿಸದಿದ್ದರೆ ಇಂದು ಬಸವಣ್ಣನವರು ಅರ್ಥವಾಗಿರುತ್ತಿರಲಿಲ್ಲ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ವಿವರಿಸಿದರು.

    ಇದನ್ನೂ ಓದಿ: ಅಕ್ಕ-ತಂಗಿಯರ ನಡುವೆ ಮುನಿಸು ತಂದ ಕಥೆ ಗೊತ್ತಾ | ದೇವತೆಗಳ ನಡುವೆ ಮಕ್ಕಳ ವಿಚಾರದಲ್ಲಿ ಬಂದಿತ್ತು ವೈಮನಸ್ಸು | ಇದನ್ನು ಓದಿ ಭೇಟಿ ಉತ್ಸವಕ್ಕೆ ಬನ್ನಿ

    ಬಸವಣ್ಣನ ಜಯಂತಿಗೆ ಮತ್ತಷ್ಟು ಹೆಗಲೆಣೆಯಾಗಿ ವಚನ ಸಾಹಿತ್ಯ ಜನಮಾನಸಕ್ಕೆ ತಲುಪುವಂತಾಗಲು ತಮ್ಮ ಮನೆ ಮಠ ಕಳೆದುಕೊಂಡು ಕೆಲಸ ಮಾಡಿದವರು ವಚನ ಪಿತಾಮಹ ಎಂದು ಹೆಸರಾಗಿದ್ದ ಫ.ಗು.ಹಳಕಟ್ಟಿ ಎಂದು ಶ್ರೀಗಳು ಸ್ಮರಿಸಿದರು.

    ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮಂಗಳವಾರ ಶ್ರೀ ಬಸವ ಜಯಂತಿ ಅಂಗವಾಗಿ ಎಸ್‍ಜೆಎಂ ವಿದ್ಯಾಪೀಠದ ನೌಕರರ ಸಮಾಲೋಚನಾ ಸಭೆ ನಡೆಯಿತು.

    ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮಂಗಳವಾರ ಶ್ರೀ ಬಸವ ಜಯಂತಿ ಅಂಗವಾಗಿ ಎಸ್‍ಜೆಎಂ ವಿದ್ಯಾಪೀಠದ ನೌಕರರ ಸಮಾಲೋಚನಾ ಸಭೆ ನಡೆಯಿತು.

    ದುಡಿಯುವ ವರ್ಗವನ್ನು ದೇವರೆಂದು, ಕಾಯಕ ಯಾವುದೇ ಇರಲಿ ಅವರೆಲ್ಲರಿಗೂ ವೃತ್ತಿಗೌರವ ನೀಡಿ, ಅದಕ್ಕೆ ತಕ್ಕ ಮೌಲ್ಯ ದೊರಕಿಸಿಕೊಟ್ಟ ಮಹಾ ಮೇರುಪುರುಷ ಬಸವಣ್ಣನವರು ಎಂದು ಬಣ್ಣಿಸಿದರು.

    ಇದನ್ನೂ ಓದಿ: ವೀರಶೈವ ಸಮಾಜದಿಂದ ಬಸವೇಶ್ವರ ಜಯಂತಿ | ಬೈಕ್ ರ್ಯಾಲಿ

    ಬಸವಣ್ಣ ಮತ್ತು ಅವರ ವಿಚಾರಗಳು ಪ್ರತಿ ಮನೆ ಮನ ತಲುಪಬೇಕು. ಆ ನಿಟ್ಟಿನಲ್ಲಿ ಮೊದಲು ನಮ್ಮ ವಿದ್ಯಾಪೀಠದ ನೌಕರ ಬಾಂಧವರಿಗೆ ಗೊತ್ತಾಗಬೇಕೆಂಬ ಉz್ದÉೀಶದಿಂದ ನಿಮ್ಮನ್ನು ಇಲ್ಲಿ ಸೇರಿಸಲಾಗಿದೆ. ಚಿತ್ರದುರ್ಗ ಶ್ರೀಮುರುಘಾಮಠದ ಖಾಸಮಠ ದಾವಣಗೆರೆ ವಿರಕ್ತಮಠ, ಅಲ್ಲಿ ಮೊಟ್ಟಮೊದಲು ಬಸವ ಜಯಂತಿ ಆಚರಿಸಿದ ಕೀರ್ತಿ ನಮ್ಮ ಮುರುಘಾಮಠಕ್ಕೆ ಸಲ್ಲುತ್ತದೆ. ಆದ್ದರಿಂದ ಬಸವ ಜಯಂತಿ ನಮ್ಮ ಸಂಸ್ಥಾನದ ಹಬ್ಬ. ಆದ್ದರಿಂದ ನೀವೆಲ್ಲರೂ ಮೂರು ದಿನಗಳ ಕಾಲ ನಡೆಯುವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ಎಂದು ಸಲಹೆ ಮಾಡಿದರು.

    ಇದನ್ನೂ ಓದಿ: ಮತ ಚಲಾಯಿಸಿದ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

    ಮುರುಘಾ ಮಠ ಹಾಗೂ ಎಸ್‍ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಸಿ. ಶಿವಯೋಗಿ ಕಳಸದ್ ಮಾತನಾಡಿ, 111 ವರ್ಷಗಳ ಹಿಂದೆ ಪ್ರಥಮ ಬಾರಿಗೆ ಬಸವ ಜಯಂತಿ ಸಮಾರಂಭವನ್ನು ದಾವಣಗೆರೆ ವಿರಕ್ತ ಮಠದಲ್ಲಿ ಆಚರಣೆಗೆ ಚಾಲನೆ ನೀಡಲಾಯಿತು. ಅದರಂತೆ ಈ ಬಾರಿಯೂ ಸಹ ಶ್ರೀಮಠದಲ್ಲಿ ಬಸವೇಶ್ವರ ಜಯಂತಿಯನ್ನು ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆಸಲು ಬಸವಕೇಂದ್ರಗಳು, ಭಕ್ತಾದಿಗಳು, ಧಾರ್ಮಿಕ ಮುಖಂಡರು, ಮುಖ್ಯವಾಗಿ ಎಸ್.ಜೆ.ಎಂ. ವಿದ್ಯಾಪೀಠದ ನೌಕರವರ್ಗದವರ ಸೇವೆಯು ಕಾರಣವಾಗಿರುತ್ತದೆ ಎಂದರು.

    ಇದನ್ನೂ ಓದಿ: ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ

    ಈ ಬಾರಿಯ ಬಸವೇಶ್ವರ ಜಯಂತಿಯನ್ನು ಮೇ 8, 9 ಮತ್ತು 10ರಂದು ಮೂರು ದಿನಗಳು ಆಚರಿಸಲು ತೀರ್ಮಾನಿಸಲಾಗಿದೆ. ಎಸ್.ಜೆ.ಎಂ ವಿದ್ಯಾಪೀಠದಡಿಯಲ್ಲಿ ಬರುವ ಎ¯್ಲÁ ಶಾಲಾ-ಕಾಲೇಜುಗಳು, ಹಾಸ್ಟೆಲ್‍ಗಳ ಮುಖ್ಯಸ್ಥರು, ನೌಕರವರ್ಗದವರು ಸಂಪೂರ್ಣವಾಗಿ ತೊಡಗಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಸಲಹೆ ನೀಡಿದರು.

    ಇದನ್ನೂ ಓದಿ: ಬೆಳೆ ಸಮೀಕ್ಷೆ ಕ್ರಮಬದ್ಧವಾಗಿಲ್ಲ | ಅಚಾತುರ್ಯ ನಡೆಸಿದ ಪಿಡಿಓಗಳಿಗೆ ನೋಟೀಸ್ | ಜಿಲ್ಲಾಧಿಕಾರಿ ಟಿ.ವೆಂಕಟೇಶ್

    ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾಪೀಠದ ಅಡಿಯಲ್ಲಿ ಬರುವ ಶಾಲಾ ಕಾಲೇಜುಗಳು ಮತ್ತು ಇನ್ನಿತರೆ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top