ಮುಖ್ಯ ಸುದ್ದಿ
ಅಂಚೆ ಮತದ ಎಣಿಕೆಗೆ ಅಧಿಕಾರಿಗಳಿಗೆ ತರಬೇತಿ


CHITRADURGA NEWS | 28 MAY 2024
ಚಿತ್ರದುರ್ಗ: ಲೋಕಸಭಾ ಚುನಾವಣೆಯ ಅಂಚೆ ಮತಪತ್ರಗಳ ಮತ ಎಣಿಕೆ ಸಿಬ್ಬಂದಿಗೆ ಮೊದಲ ಹಂತದ ತರಬೇತಿ ಕಾರ್ಯಾಗಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜರುಗಿತು.
ಇದನ್ನೂ ಓದಿ: KSRTC ಬಸ್ ಹರಿದು ಕುರಿಗಾಯಿ ರಾಜಪ್ಪ ಹಾಗೂ 21 ಕುರಿಗಳ ದುರ್ಮರಣ

ತರಬೇತಿ ಕಾರ್ಯಾಗಾರದಲ್ಲಿ 12 ಸಹಾಯಕ ಮತ ಎಣಿಕೆ ಅಧಿಕಾರಿಗಳು, 13 ತಂಡಗಳ ಮತ ಎಣಿಕೆ ಸಿಬ್ಬಂದಿಗೆ ತರಬೇತಿ ನಡೆಯಿತು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಂಚೆ ಮತಪತ್ರಗಳ ಮತ ಎಣಿಕೆ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಜಿಲ್ಲಾಮಟ್ಟದ ಮಾಸ್ಟರ್ ಟ್ರೈನರ್ ಎಸ್.ನಾಗಭೂಷಣ್ ಅವರು ಮತ ಎಣಿಕೆ ಸಿಬ್ಬಂದಿಗೆ ಸವಿವರವಾದ ತರಬೇತಿ ನೀಡಿದರು.
ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆ ಕಂಡ ರಾಶಿ ಬೆಲೆ
ತರಬೇತಿಯಲ್ಲಿ ಜಿಲ್ಲಾ ತರಬೇತಿ ಮತ್ತು ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಜಗದೀಶ್ ಹೆಬ್ಬಳ್ಳಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್ ಹಾಗೂ ಮತ ಎಣಿಕೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
