
CHITRADURGA NEWS | 18 JULY 2024
ಚಿತ್ರದುರ್ಗ: ನಗರದ ಟೀಚರ್ಸ್ ಕಾಲೋನಿಯಲ್ಲಿ ರಸ್ತೆ(ROAD) ಗುಂಡಿ ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಓಡಾಡಲು ಭಯಭೀತರಾಗಿದ್ದಾರೆ.

ರಸ್ತೆಯಲ್ಲಿ ಮೊದಲೇ ಗುಂಡಿ ಬಿದ್ದಿದ್ದು ನಗರಸಭೆಯವರು ಅಲ್ಲಿಗೆ ಮಣ್ಣು ಅಕಿ ಬಿಟ್ಟಿದ್ದರು ಆದರೆ ಈಗ ಮತ್ತೆ ಗುಂಡಿ ಬಿದ್ದಿದ್ದು ದಿನ ನಿತ್ಯ ವಾಹನ ಸವಾರರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಓಡಾಡಲು ತೊಂದರೆಯಾಗುತ್ತಿದೆ.
ರಸ್ತೆ ಗುಂಡಿ ಮುಚ್ಚಲು ನಗರಸಭೆಗೆ ಮತ್ತು ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಪತ್ರ, ದೂರವಾಣಿ ಮುಖಾಂತರ ರಸ್ತೆ ರಿಪೇರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್. ಸ್ವಾಮಿ ತಿಳಿಸಿದ್ದಾರೆ.
ಈಗ ಸದ್ಯ ಮಳೆ ಹೆಚ್ಚಾದ್ದರಿಂದ, ಜೋಗಿಮಟ್ಟಿ ಪ್ರದೇಶದ ಬಳಿ ಇರುವುದರಿಂದ ಹೆಚ್ಚು ಮಳೆ ಸುರಿಯುತ್ತಿದ್ದು, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರುಗಳು ಜಾರಿ ಬಿದ್ದು, ಕೈಕಾಲು ಮುರಿದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸುವುದು ಕಷ್ಟಕರವಾಗಿದೆ ಎಂದಿದ್ದಾರೆ.
ನಗರಸಭೆಯವರು ಈ ಹಿಂದೆ ಟೀಚರ್ಸ್ ಕಾಲೋನಿ ರಸ್ತೆಗೆ ಮಣ್ಣನ್ನು ಹಾಕಿದ್ದು ಅದು ಈಗ ಗುಂಡಿಬಿದ್ದಿದ್ದೆ, ಮಣ್ಣಿನ ಜೊತೆಗೆ ಒಂದಿಷ್ಟು ಕಲ್ಲು ಜಲ್ಲಿಗಳನ್ನಾದರೂ ಮಿಶ್ರಣ ಮಾಡಿ ಹಾಕಿದ್ದರೆ ರೋಡಿನ ಮೇಲೆ ಹಿಡಿತವನ್ನಾದರೂ ಸಾಧಿಸಬಹುದಾಗಿತ್ತು. ಈಗ ದ್ವಿಚಕ್ರ ವಾಹನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಈ ರಸ್ತೆಯಲ್ಲಿ ಸಂಚಾರಿಸುತ್ತಿದ್ದಾರೆ.
ದೂರದಿಂದ ನೋಡುಗರಿಗೆ ಈ ರಸ್ತೆ ಯಾವುದೋ ಕೆರೆಯೋ. ಕೆಸರು ಗದ್ದೆಯೋ ಎಂಬಂತೆ ಕಾಣುತ್ತಿದೆ, ನಗರಸಭೆಯಿಂದ ಕೇವಲ ಒಂದು ಕಿಲೋಮೀಟರ್ ದೂರವಿರುವ ಈ ರಸ್ತೆಗೆ, ಜಲ್ಲಿ ಮಿಶ್ರಿತ ಟಾರ್ ಹಾಕಿಸಿ, ರಸ್ತೆ ನಿರ್ಮಾಣ ಮಾಡಿ, ಗುಂಡಿಗಳನ್ನ ಮುಚ್ಚಿಸಬೇಕೆಂದು ಎಂದು ಡಾ.ಎಚ್.ಕೆ.ಎಸ್. ಸ್ವಾಮಿ ವಿನಂತಿಸಿಕೊಂಡಿದ್ದಾರೆ.
ನ್ಯಾಯಾಧೀಶರುಗಳ ಗಮನಕ್ಕೆ ಬಾರದೆ ಈ ರಸ್ತೆ ಗುಂಡಿಗಳಿಂದ ಆವೃತವಾಗಿದೆ ಎಂದು ನಾಗರಿಕರು ಅಸಮಾಧಾನವ ಹೊಂದಿದ್ದಾರೆ. ದೂರುಗಳ ಮೇಲೆ ದೂರು ನೀಡಿ ಅಧಿಕಾರಿಗಳನ್ನು ಸಂಪರ್ಕಿಸಿ, ಅವುಗಳನ್ನು ಸರಿಪಡಿಸಿ ಎಂದು ಬಹಳಷ್ಟು ವರ್ಷಗಳಿಂದ ಬೇಡಿಕೆ ಇಟ್ಟರು ಸಹ, ಈ ಟೀಚರ್ಸ್ ಕಾಲೋನಿ ರಸ್ತೆ ಸರಿ ಮಾಡದಿರುವುದು ಶೋಚನೀಯ ಎಂದಿದ್ದಾರೆ.
ಇದನ್ನೂ ಓದಿ: ಕುರಿ, ಮೇಕೆ ಸಾಕಾಣಿಕೆಗೆ ಅರ್ಜಿ ಅಹ್ವಾನ
ಈಗಲಾದರೂ ನಗರಸಭೆಯವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ರವರು ಇತ್ತಕಡೆಗೆ ಗಮನಹರಿಸಿ, ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವುದರಲ್ಲಿ ಗಮನಹರಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್. ಸ್ವಾಮಿ ಮನವಿ ಮಾಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
