
CHITRADURGA NEWS | 18 JULY 2024
ಚಿತ್ರದುರ್ಗ: ನಗರದ ತಮಟಕಲ್ಲು ರಸ್ತೆಯಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಬುಧವಾರ ರಾತ್ರಿ ಪೊಲೀಸರು ದಾಳಿ (Police Raid) ನಡೆಸಿದ್ದಾರೆ.
ಈ ವೇಳೆ ಮೂರು ಜನರನ್ನು ಬಂಧಿಸಿದ್ದು, ವೇಶ್ಯಾವಾಟಿಕೆ ನಡೆಸುತ್ತಿದ್ದ ಓರ್ವ ಮಹಿಳೆ ಪರಾರಿಯಾಗಿದ್ದಾಳೆ.

ಇದನ್ನೂ ಓದಿ: ಟೀಚರ್ಸ್ ಕಾಲೋನಿಗೆ ಹೋಗುವ ರಸ್ತೆ ದೇವರಿಗೆ ಪ್ರೀತಿ..
ಎಂ.ಕೆ.ಹಟ್ಟಿ ಹಾಗೂ ಆಜಾದ್ ನಗರ ಮೂಲದ, ದಂಧೆ ನಡೆಸುತ್ತಿದ್ದ ಅಪ್ಶದ್ ಭಾನು, ರಫಿವುಲ್ಲಾ ಹಾಗೂ ಪಿಂಪ್ ದಸ್ತಗಿರ್ ಬಂಧನಕ್ಕೊಳಗಾದವರು.
ಮಹಿಳಾ ಪೊಲೀಸ್ ಠಾಣೆ ಸಿಪಿಐ ಗೋಪಾಲನಾಯ್ಕ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಬೇರೆ ಬೇರೆ ಜಿಲ್ಲೆಯ 6 ಜನ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
