
CHITRADURGA NEWS | 18 JULY 2024
ಚಿತ್ರದುರ್ಗ: ಪ್ರೀತಿಸಿ ವಿವಾಹವಾಗಿದ್ದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ವೇದಾವತಿ ಬಡಾವಣೆಯ ಕಾವ್ಯಾ (25) ಮೃತಪಟ್ಟವರು.
ವರದಕ್ಷಿಣೆ ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಮಹಿಳೆಯ ತಂದೆ ಲಕ್ಷ್ಮೀಪತಿ ನಗರ ಠಾಣೆಯಲ್ಲಿ ಪತಿ ರಂಗನಾಥ್ ಹಾಗೂ ಇತರ ಐದು ಜನರ ವಿರುದ್ಧ ದೂರು ದಾಖಲಿಸಿದ್ದಾರೆ.
ಹಿರಿಯೂರಿನ ವಿ.ಕೆ.ಫ್ಯಾಷನ್ ಅಂಗಡಿ ಮಾಲೀಕ ರಂಗನಾಥ್‌ನನ್ನು ಪ್ರೀತಿಸಿದ್ದ ಕಾವ್ಯಾ ಮೇ 19ರಂದು ಮದುವೆಯಾಗಿದ್ದರು. ಅನ್ಯ ಜಾತಿ ಎಂಬ ಕಾರಣಕ್ಕೆ ಲಕ್ಷ್ಮೀಪತಿ ನಗರ ಠಾಣೆಗೆ ದೂರು ನೀಡಿದ್ದರು. ಆದರೆ ತಾವಿಬ್ಬರೂ ವಯಸ್ಕರಾಗಿದ್ದು, ಪರಸ್ಪರ ಒಪ್ಪಿ ಮದುವೆಯಾಗಿದ್ದಾಗಿ ಆಗ ಅವರು ತಿಳಿಸಿದ್ದರು.
ಇದನ್ನೂ ಓದಿ: Murder: ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಸೊಸೆಯನ್ನೇ ಕೊಂದ ಮಾವ
ಕಾವ್ಯಾಗೆ ಕಿರುಕುಳ ನೀಡುತ್ತಿದ್ದ ರಂಗನಾಥ್ ₹1 ಲಕ್ಷ ವರದಕ್ಷಿಣೆ ತರುವಂತೆ ಜೂನ್ 1ರಂದು ತವರು ಮನೆಗೆ ಕಳಿಸಿದ್ದ. ಹತ್ತು ದಿನಗಳಲ್ಲಿ ಹಣ ಕೊಡುವುದಾಗಿ ತಿಳಿಸಿ ಗಂಡನ ಮನೆಗೆ ಕಳಿಸಿದ್ದೆವು. ಜುಲೈ 16ರಂದು ದೂರವಾಣಿ ಕರೆ ಮಾಡಿದ್ದ ರಂಗನಾಥ್, ಆರೋಗ್ಯ ಸರಿ ಇಲ್ಲದ ಕಾರಣ ಕಾವ್ಯಾಳನ್ನು ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿಸಿದ್ದ.
ಇದನ್ನೂ ಓದಿ: Heavy Rain; ದುರ್ಗದಲ್ಲಿ ಉತ್ತಮ ಮಳೆ | ಸಂಚಾರ ಅಸ್ತವ್ಯಸ್ತ | ನಗರದಲ್ಲಿ ಸುರಿದ ಮಳೆಯ ದೃಶ್ಯ ಇಲ್ಲಿವೆ
ಆದರೆ ಆಸ್ಪತ್ರೆಗೆ ಹೋಗಿ ನೋಡುವ ವೇಳೆಗೆ ಆಕೆ ಸಾವಿಗೀಡಾಗಿದ್ದಳು. ಗಂಡನ ಕಿರುಕುಳ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿರುವುದು ತಡವಾಗಿ ತಿಳಿಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
